'ಇಲ್ಲ' ಎಂಬುದನ್ನು ಸ್ವೀಕರಿಸಲು ನಾಯಕರು ಸಿದ್ಧರಿರಬೇಕು: ಅರುಣ್ ಜೇಟ್ಲಿ

ನವದೆಹಲಿ: ಬಾರ್ಮೇರ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಳೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರ ವಿರುದ್ಧ ಮಾತನಾಡಿರುವ ಅರುಣ್ ಜೇಟ್ಲಿ ಅವರು, ಸಾಕಷ್ಟು ಸವಲತ್ತುಗಳನ್ನು ಅನುಭವಿಸಿದ ಬಳಿಕ ಹಾಗೂ ಅವರ ನಿಷ್ಠೆಯ ಪರೀಕ್ಷೆ ನಡೆದಾಗ ನಾಯಕರು ಇಲ್ಲ ಎಂಬುದನ್ನು ಕೆಲವು ಸಲ ಸ್ವೀಕರಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪಕ್ಷ ಟಿಕೆಟ್‌ನಿರಾಕರಿಸಿದ್ದರಿಂದ ಮುನಿಸಿಕೊಂಡಿರುವ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್, ಬಾರ್ಮೇರ್‌ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಜೇಟ್ಲಿ ಅವರು ಹೀಗೆ ತಮ್ಮ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.
ಒಂದು ರಾಜಕೀಯ ಪಕ್ಷದ ಸದಸ್ಯತ್ವ ಅದು ಉನ್ನತ ಗೌರವವಿದ್ದಂತೆ. ಅದು ಸ್ವಯಂ ಹೊರೆಯೂ ಆಗಿರುತ್ತದೆ. ಪಕ್ಷವು ನಾಯಕರಿಗೆ ಕೆಲವು ಸಲ ಸಾಕಷ್ಟು ಸವಲತ್ತು ಹಾಗೂ ಸ್ಥಾನಗಳನ್ನು ನೀಡಬಹುದು. ಹಾಗೇ ಮತ್ತೆ ಕೆಲವು ಸಂದರ್ಭಗಳಲ್ಲಿ ನಾಯಕ ತನ್ನ ಇಚ್ಛೆಗೆ ‘ಇಲ್ಲ’ ಎಂಬ ಉತ್ತರ ದೊರಕಬಹುದು ಎಂದು ಜೇಟ್ಲಿ ಬರೆದುಕೊಂಡಿದ್ದಾರೆ.
ಟಿಕೆಟ್‌ನಿರಾಕರಿಸಿದರೇ ರಾಜಕಾರಣಿ ಅಥವಾ ನಾಯಕ ಆ ನಿರ್ಧಾರವನ್ನು‘ನಗು’ಮೊಗದಿಂದ ಸ್ವಾಗತಿಸಬೇಕು ಎಂದು ಜಸ್ವಂತ್ ಹೆಸರು ಪ್ರಸ್ತಾಪಿಸದೇ ಜೇಟ್ಲಿ ಕುಟುಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


