ಕೇಜ್ರಿವಾಲ್ ಮೇಲೆ ಮೊಟ್ಟೆ, ಇಂಕ್ ಎಸೆದ ದುಷ್ಕರ್ಮಿಗಳು

ವಾರಾಣಾಸಿ: ವಾರಾಣಾಸಿಯಲ್ಲಿ ಸ್ಪರ್ಧಿಸುವ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಲು ಬಂದಿರುವ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ವಿರೋಧ ವ್ಯಕ್ತವಾಗಿದ್ದು, ಕೇಜ್ರಿವಾಲ್ ಮೇಲೆ ದುಷ್ಕರ್ಮಿಗಳು ಇಂಕ್ ಎಸೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಾಣಾಸಿಯಿಂದ ನಿಲ್ಲಲ್ಲು ಜನಾಭಿಪ್ರಾಯ ಸಂಗ್ರಹಣೆಗಾಗಿ ಬಂದಿರುವ ಕೇಜ್ರಿವಾಲ್ಗೆ ವಾರಾಣಾಸಿ ವಿರೋಧ ವ್ಯಕ್ತವಾಗಿದೆ.
ಕೆಲ ಗಂಟೆಗಳ ಹಿಂದಷ್ಟೇ ಕಾಶಿ ವಿಶ್ವನಾಥ್ ದೇವಾಲಯದಿಂದ ಹಿಂತಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದರು. ಇದರಿಂದಾಗಿ ಕೇಜ್ರಿವಾಲ್ ಅಲ್ಲಿಂದ ತೆರಳಬೇಕಾಯಿತು. ಈ ವೇಳೆ ಕೇಜ್ರಿವಾಲ್ ಮೇಲೆ ಇಂಕ್ ಎಸೆದಿರುವ ಘಟನೆ ನಡೆದಿದ್ದು, ಇದರಲ್ಲಿ ಕೇಜ್ರಿವಾಲ್ ಜೊತೆಗಿದ್ದ ಎಎಪಿ ನಾಯಕ ಸಿಸೋಡಿಯಾ ಮೇಲೆ ಸಹ ಇಂಕ್ ಬಿದ್ದಿದೆ.
ಈ ಕೃತ್ಯವನ್ನು ಹಿಂದೂ ವಾಹಿನಿ ಕಾರ್ಯಕರ್ತರ ಎಸೆಗಿದ್ದಾರೆ ಎಂದು ಶಂಕಿಸಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟಿ ನಿಂತಿರುವ ಕೇಜ್ರಿವಾಲ್, ವಾರಾಣಾಸಿ ಕ್ಷೇತ್ರವನ್ನು ಆರಿಸಿಕೊಂಡಿರುವ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಾರಾಣಾಸಿಯಲ್ಲಿ ಜನಮತ ಸಂಗ್ರಹಿಸುತ್ತಿದ್ದ ಕೇಜ್ರಿವಾಲ್ ಮೇಲೆ ಮೊಟ್ಟೆ ಎಸೆದಿರುವ ಘಟನೆ ನಡೆದಿದೆ.
ವಾರಾಣಾಸಿಯಾದ್ಯಂತ ಮನೆ ಮನೆಗೂ ಭೇಟಿ ನೀಡಿ ಜನರ ಭಾವನೆಗಳಿಗೆ ಸ್ಪಂಧಿಸುವ ಮೂಲಕ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಕೇಜ್ರಿವಾಲ್ ನಿರತರಾಗಿದ್ದಾರೆ. ಇದಕ್ಕೆ ಎಎಪಿ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಸಾಥ್ ನೀಡಿದ್ದು, ಮೋದಿ ವಿರುದ್ಧ ವಾರಾಣಾಸಿಯಿಂದ ಕೇಜ್ರಿವಾಲ್ ಸ್ಪರ್ಧಿಸುವುದು ಸೂಕ್ತವೇ ಎಂದು ಲಾಯರ್, ಉಪಾಧ್ಯಾಯ, ವಿದ್ಯಾರ್ಥಿಗಳೊಂದಿಗೆ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಸಂಬಂಧ ಕೇಜ್ರಿವಾಲ್ ನಿನ್ನೆಯಷ್ಟೇ ವಾರಾಣಾಸಿಗೆ ಪ್ರಯಾಣ ಬೆಳಸಿದ್ದರು. ವಾರಾಣಾಸಿ ತಲುಪಿರುವ ಅವರು ಜನಾಭಿಪ್ರಾಯ ಸಂಗ್ರಹಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


