ಈಗಿನ ಸುದ್ದಿ

ಉಪಗ್ರಹದ ನೂತನ 100 ಚಿತ್ರಗಳು ವಿಮಾನ ಪತನವನ್ನು ಪುಷ್ಠಿಕರಿಸುತ್ತದೆ: ಮಲೇಷಿಯಾ

ಉಪಗ್ರಹದ ನೂತನ 100 ಚಿತ್ರಗಳು ವಿಮಾನ ಪತನವನ್ನು ಪುಷ್ಠಿಕರಿಸುತ್ತದೆ: ಮಲೇಷಿಯಾ
Published On :

ಕೌಲಾಲಂಪುರ: ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನಕ್ಕೆ ಸಂಬಂಧಿಸಿದಂತೆ ಉಪಗ್ರಹ ಬಿಡುಗಡೆ ಮಾಡಿರುವ 100 ಚಿತ್ರಗಳು ಹಿಂದೂ ಮಹಾಸಾಗರದಲ್ಲಿ ಪತನವಾಗಿರುವ ಮಲೇಷ್ಯಾ ವಿಮಾನದ್ದೆ ಎಂದು ಶಂಕಿಸಲಾಗಿದೆ ಎಂದು ಮಲೇಷ್ಯಾ ಬುಧವಾರ ಹೇಳಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಲೇಷ್ಯಾ ಹಂಗಾಮಿ ಸಾರಿಗೆ ಸಚಿವ ಹಿಸ್ಹಾಮುದ್ದೀನ್ ಹುಸೇನ್ ಅವರು, ಮಲೇಷ್ಯಾ ವಿಮಾನದ ಕುರಿತಾದ ಚಿತ್ರಗಳನ್ನು ಮಾರ್ಚ್ 23ರಂದು ಫ್ರೆಂಚ್ ರಕ್ಷಣಾ ಇಲಾಖೆಯ ಉಪಗ್ರಹ ಬಿಡುಗಡೆ ಮಾಡಿದ್ದು, ಆ ಚಿತ್ರಗಳು ಮಲೇಷ್ಯಾ ವಿಮಾನದ ಭಗ್ನವಶೇಷಗಳು ಎಂದು ಶಂಕಿಸಲಾಗಿದೆ ಎಂದರು.

ದಕ್ಷಿಣ ಹಿಂದೂ ಮಹಾಸಾಗರದ ಪರ್ತ್ ನಿಂದು ಸುಮಾರು 2,500 ಕಿ,ಮೀ ದೂರದಲ್ಲಿ ವಿಮಾನ ದುರಂತಕ್ಕೀಡಾಗಿರುವ ಅಂಶಗಳನ್ನು ಗುರುತಿಸಲಾಗಿದ್ದು, ಈ ಉಪಗ್ರಹ ನೀಡಿರುವ ಚಿತ್ರಗಳು ಶೋಧ ಕಾರ್ಯಾಚರಣೆಗೆ ಸಿಕ್ಕಿರುವ ಮತ್ತೊಂದು ಸುಳಿವು ಎಂದು ತಿಳಿಸಿದ್ದಾರೆ.

ವಿಮಾನದ ಶೋಧ ಕಾರ್ಯ ನಡೆಸುತ್ತಿದ್ದ ತಜ್ಞರ ತಂಡ ವಿಮಾನವು ಹಿಂದೂ ಮಹಾಸಾಗರದಲ್ಲಿ ಪತನವಾಗಿದೆ ಎಂಬ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಲೇಷ್ಯಾ ಸರ್ಕಾರ ವಿಮಾನ ಸಮುದ್ರದಲ್ಲಿ ಪತನವಾಗಿದೆ ಎಂಬ ನಿರ್ಣಯಕ್ಕೆ ಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.