ಗುಜರಾತ್ ಗಲಭೆ ಬಗ್ಗೆ ನೋವಿದೆ, ಆದರೆ ಅಪರಾಧಿ ನಾನಲ್ಲ: ಮೋದಿ

ನವದೆಹಲಿ: 2002ರ ಗುಜರಾತ್ ಗಲಭೆಯ ಬಗ್ಗೆ ನನಗೆ ನೋವಿದೆ. ಆದರೆ ಅಪರಾಧಿ ಮನೋಭಾವ ಇಲ್ಲ. ಗಮನಿಸಬೇಕಾದ ವಿಚಾರವೆಂದರೆ ನಾನು ತಪ್ಪಿತಸ್ಥ ಎಂದು ಇನ್ನೂ ಯಾವುದೇ ಕೋರ್ಟ್ ಸಾಬೀತುಪಡಿಸಿಲ್ಲ. ಮಾಧ್ಯಮಗಳು ಅವುಗಳ ಕೆಲಸ ಮಾಡುತ್ತಿರಲಿ. ಮಾಧ್ಯಮಗಳ ಜತೆ ಮುಖಾಮುಖಿಯಾಗಿ ನನ್ನ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಎಂದು ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗೋಧ್ರಾ ಹಿಂಸಾಚಾರ ಪ್ರಕರಣದ ಕುರಿತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈ ರೀತಿ ಪ್ರತಿಕ್ರಿಯಿಸಿರುವುದಾಗಿ ಬ್ರಿಟಿಷ್ ಲೇಖಕ ಆ್ಯಂಡಿ ಮರೀನೋ ಅವರು ತಾವು ಬರೆದ ಮೋದಿ ಜೀವನ ಚರಿತ್ರೆ ಪುಸ್ತಕದಲ್ಲಿ ತಿಳಿಸಿದ್ದಾರೆ.
ನರೇಂದ್ರ ಮೋದಿ ಜೀವನ ಚರಿತ್ರೆ ಕೃತಿಯಲ್ಲಿ ಮರೀನೋ ಗುಜರಾತ್ ಗಲಭೆಯ ಬಗ್ಗೆ ಬೆಳಕು ಚೆಲ್ಲಿದ್ದು, ಮೋದಿ ಅವರೊಂದಿಗೆ ನಾನು ಪ್ರಚಾರದ ವೇಳೆ ಹಲವು ಕಡೆ ಹೆಲಿಕಾಪ್ಟರ್ನಲ್ಲಿ ಸುತ್ತಿದ್ದು, ಸಂದರ್ಶನಗಳನ್ನೂ ನಡೆಸಿರುವೆ. ಗುಜರಾತ್ ಗಲಭೆಗಳ ಬಗ್ಗೆ ಮೋದಿ ತಮ್ಮೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೆಲ್ಲವನ್ನೂ ಸೇರಿಸಿ ಇದೀಗ ಕೃತಿ ಹೊರತರಲಾಗಿದೆ’ ಎಂದು ಮರಿನೊ ತಿಳಿಸಿದ್ದಾರೆ.
ಒಟ್ಟು 310 ಪುಟಗಳ ಈ ಕೃತಿಯಲ್ಲಿ ಗಲಭೆಗಳ ಬಗ್ಗೆ ಈತನಕ ಪ್ರಕಟವಾಗದ, ಅಧಿಕೃತ ದಾಖಲೆಗಳಿವೆ. ‘ಗಲಭೆ ನಂತರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದರು. ಆದರೆ ಪಕ್ಷದ ವರಿಷ್ಠರೇ ತಡೆದರು. ರಾಜ್ಯದ ಜನರಿಗೂ ಮೋದಿ ರಾಜೀನಾಮೆ ನೀಡುವುದು ಬೇಡವಾಗಿತ್ತು’ ಎಂದು ಕೃತಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


