ಈಗಿನ ಸುದ್ದಿ

ಅಧಿಕಾರ ದಾಹಕ್ಕಾಗಿ ರಾಜಕೀಯ ಪ್ರವೇಶಿಸಿಲ್ಲ: ಪವನ್

ಅಧಿಕಾರ ದಾಹಕ್ಕಾಗಿ ರಾಜಕೀಯ ಪ್ರವೇಶಿಸಿಲ್ಲ: ಪವನ್
Published On :

ವಿಶಾಖಪಟ್ಟಣ: ಅಧಿಕಾರ ದಾಹಕ್ಕಾಗಿ ರಾಜಕೀಯ ರಂಗಕ್ಕೆ ಬಂದಿಲ್ಲ, ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಗುರುವಾರ ಹೇಳಿದ್ದಾರೆ.

ಇಂದು ವಿಶಾಖಪಟ್ಟಣನಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ, ಸ್ವಾರ್ಥ ಸಾಧನೆಗಾಗಿ ರಾಜಕೀಯಕ್ಕೆ ಬಂದಿಲ್ಲ. ನನಗೆ ಸಾಧ್ಯವಾದಷ್ಟು ಜನ ಸೇವೆ ಮಾಡುವುದಾಗಿ ಈ ರಂಗಕ್ಕೆ ಬಂದಿದ್ದೇನೆ. ರಾಜಕೀಯ ದಾಳ ನಡೆಸುತ್ತಿರುವ ರಾಜಕಾರಣಿಗಳು ಜನರಿಗಾಗಿ ಕೆಲಸ ಮಾಡುತ್ತಿಲ್ಲ. ದೇಶದಲ್ಲಿ ನಡೆಯುತ್ತಿರುವುದು ಸ್ವಾರ್ಥ ರಾಜಕಾರಣ ಇಂತಹ ಅನೀತಿ ರಾಜಕೀಯವನ್ನು ಬದಲಿಸಬೇಕು ಎಂದು ಹೇಳಿದ್ದಾರೆ.

ದೇಶಕ್ಕೆ ಬಲವಾದ ಕಾನೂನವು ಬೇಕು. ಯಾರೇ ತಪ್ಪು ಮಾಡಿದರು ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಒಂದು ಪವನ್ ಕಲ್ಯಾಣ್ ತಪ್ಪು ಮಾಡಿದರು ಶಿಕ್ಷೆಯಾಗಬೇಕು. ಅಂತಹ ಸಧೃಡ ಕಾನೂನಿನ ಅಗತ್ಯವಿದೆ ಎಂದರು. ಸಮಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು 5 ವರ್ಷಗಳಿಗೊಮ್ಮೆ ಬದಲಾಯಿಸುವ ಸಿದ್ದಾಂತಗಳು ನಮಗೆ ಬೇಕಿಲ್ಲ. 'ಇಸಂ' ಪುಸ್ತಕವೇ ಜನಸೇನಾ ಪಕ್ಷದ ಸಿದ್ದಾಂತ ಎಂದು ಹೇಳಿದ್ದಾರೆ.

ಜನಸೇನಾ ಪಕ್ಷದ ಚಿನ್ಹೆಯಲ್ಲಿ 6 ನಕ್ಷತ್ರಗಳಿವೆ ಆ 6 ನಕ್ಷತ್ರಗಳು ಒಂದೊಂದು ವಿಚಾರವನ್ನು ಪ್ರತಿಬಿಂಬಿಸುತ್ತವೆ ಎಂದು ಪವನ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.