ಈಗಿನ ಸುದ್ದಿ

ಮೈಸೂರು ಮಹಾರಾಜರ ನಿವೇಶನ ಕಬಳಿಕೆಗೆ ಯತ್ನ

ಮೈಸೂರು ಮಹಾರಾಜರ ನಿವೇಶನ ಕಬಳಿಕೆಗೆ ಯತ್ನ
Published On :

ಬೆಂಗಳೂರು: ಮೈಸೂರು ಮಹಾರಾಜರ ಹೆಸರಿನ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಸಾವಿನ 3 ದಿನಗಳ ಹಿಂದೆ ನಕಲಿ ದಾಖಲೆ ಸೃಷ್ಟಿಸಿ ಸುಮಾರು 30 ಕೋಟಿ ಬೆಲೆ ಬಾಳುವ ನಿವೇಶನವನ್ನು ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಬಿ.ಕೆ ಸುಂದರ್ ಎಂಬುವವರು ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಮೈಸೂರಿನ ರೇಸ್‌ಕೋರ್ಸ್ ಪಕ್ಕದಲ್ಲಿರುವ ಜಯಚಾಮರಾಜ ಒಡೆಯರ್ ಹೆಸರಿನಲ್ಲಿದ್ದ 200X250 ಚದರಡಿ ನಿವೇಶನ ಬಿ.ಕೆ ಸುಂದರ್ ಅವರ ಹೆಸರಿಗೆ ಡಿಸೆಂಬರ್ 7ರಂದು ನೋಂದಣಿಯಾಗಿತ್ತು. ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರು 2013 ಡಿಸೆಂಬರ್ 10ರಂದು ವಿಧಿವಶರಾಗಿದ್ದರು.

ಡಿ.7ರಂದು ಮೈಸೂರಿನ ರೇಸ್‌ಕೋರ್ಸ್‌ನಲ್ಲಿ ನಾನೇ ಒಡೆಯರ್ ಸಹಿ ಪಡೆದಿದ್ದೆ ಎಂದು ಗಿರೀಶ್ ಹೇಳಿದ್ದರು. ಆದರೆ ಡಿಸೆಂಬರ್ 7ರಂದು ಒಡೆಯರ್ ಮೈಸೂರಿಗೆ ಹೋಗಿರಲಿಲ್ಲ ಎಂದು ರಾಣಿ ಪ್ರಮೋದ ದೇವಿಯವರು ಸ್ಪಷ್ಟನೆ ನೀಡಿದ್ದಾರೆ.

ಚಂದ್ರಶೇಖರ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಕೈಗೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.