ಈಗಿನ ಸುದ್ದಿ

ಸಬೀರ್ ಆಲಿ ಬಿಜೆಪಿ ಸದಸ್ಯತ್ವ ರದ್ದು

ಸಬೀರ್ ಆಲಿ ಬಿಜೆಪಿ ಸದಸ್ಯತ್ವ ರದ್ದು
Published On :

ನವದೆಹಲಿ: ನಿನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಸಬೀರ್ ಆಲಿ ಸದಸ್ಯತ್ವವನ್ನು ರಾಷ್ಟ್ರ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಶನಿವಾರ ರದ್ದು ಪಡಿಸಿದ್ದಾರೆ.

ಸಬೀರ್ ಆಲಿಯನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಬೇಡ ಎಂಬ ವಿಚಾರವಾಗಿ ರಾಷ್ಟ್ರ ಬಿಜೆಪಿಯಲ್ಲಿ ಗೊಂದಲ ಸೃಷ್ಠಿಯಾಗಿತ್ತು. ಈ ಸಮಸ್ಯೆಗೆ ಕೊನೆಗೂ ತಿಲಾಂಜಲಿ ಹಾಡಿರುವ ರಾಜನಾಥ್ ಸಿಂಗ್, ಸಬೀರ್ ಆಲಿಯ ಸದಸ್ಯತ್ವವನ್ನು ರದ್ದು ಪಡಿಸಿದ್ದಾರೆ.

ಸಬೀರ್ ಆಲಿಯನ್ನು ನಿನ್ನೆಯಷ್ಟೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಇದಕ್ಕೆ ಬಿಜೆಪಿ ನಾಯಕರಾದ ಮುಕ್ತಾರ್ ಅಬ್ಬಾಸ್ ನಕ್ವಿ, ವಿನಯ್ ಕಟಿಯಾರ್ ಮತ್ತು ಆರ್‌ಎಸ್‌ಎಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಮಾಪ್ತರಾಗಿದ್ದ ಸಮೀರ್ ಆಲಿ ನರೇಂದ್ರ ಮೋದಿಯನ್ನು ಹಾಡಿ, ಹೊಗಳಿ ಜೆಡಿಯುನಿಂದ ಉಚ್ಚಾಟಿಸಿಕೊಂಡಿದ್ದರು. ಹೀಗಾಗಿ ಅವರನ್ನು ನಿನ್ನೆ ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡಿದ್ದರು. ಆದರೆ ಸಬೀರ್ ಆಲಿ ಪಕ್ಷ ಸೇರ್ಪಡೆಗೆ ಕಮಲ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿತ್ತು. ಸಬೀರ್ ಆಲಿಗೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಯಾಸೀನ್ ಭಟ್ಕಲ್ ಜತೆ  ಜತೆ ಸಂಪರ್ಕವಿದೆ ಎಂದು ಆರೋಪಿಸಿದ್ದರು.

ತಮ್ಮ ಸದಸ್ಯತ್ವವನ್ನು ತಡೆಯಿಡಿದಿರುವುದಕ್ಕೆ ಪ್ರತಿಕ್ರಿಯಿಸಿರುವ ಸಬೀರ್ ಆಲಿ, ನನ್ನ ಸದಸ್ಯತ್ವವನ್ನು ಬಿಜೆಪಿ ರದ್ದು ಪಡಿಸಿರುವುದನ್ನು ನಾನು ಅವಮಾನ ಎಂದು ಭಾವಿಸುವುದಿಲ್ಲ. ಸದಸ್ಯತ್ವ ರದ್ದು ಹಿನ್ನೆಲೆ ನಾನು ವಕೀಲರ ಸಲಹೆ ಪಡೆಯುತ್ತೇನೆ. ವಕೀಲರ ಸಲಹೆಯಂತೆ ನಡೆದುಕೊಳ್ಳುತ್ತೇನೆ. ನನ್ನ ಕ್ಷೇತ್ರದ ಮತದಾರರ ಮೇಲೆ ನನಗೆ ನಂಬಿಕೆ ಎಂದು ಹೇಳಿದರು.

ಏತನ್ಮಧ್ಯೆ, ತನ್ನ ಮೇಲಿನ ಆರೋಪಗಳು ಸಾಬೀತಾಗುವವರೆಗೂ ನನ್ನ ಸದಸ್ಯತ್ವವನ್ನು ತಡೆಯಿಡಿಯುಂತೆ ಬಿಹಾರ ಬಿಜೆಪಿ ಘಟಕಕ್ಕೆ ಪತ್ರ ಬರೆದಿದ್ದರು. ಅಲ್ಲದೆ ತನ್ನ ಮೇಲಿನ ಆರೋಪಗಳ ಪತ್ತೆಗೆ ತನಿಖಾ ಸಮಿತಿಯೊಂದನ್ನು ರಚಿಸುವಂತೆ ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಕರ್ನಾಟದ ರಾಜ್ಯ ಬಿಜೆಪಿ ಘಟಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಸೇರಿಕೊಂಡಿದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದ ವರಿಷ್ಠರು ಪಕ್ಷದಿಂದ ಹೊರ ದಬ್ಬಿದ್ದರಿಂದಾಗಿ ರಾಜ್ಯ ನಾಯಕರು ಹಾಗೂ ವರಿಷ್ಠರ ನಡುವೆ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗ ಇಂತದ್ದೆ ಪರಿಸ್ಥಿತಿ ಬಿಹಾರ ರಾಜ್ಯ ಬಿಜೆಪಿ ಘಟಕದಲ್ಲೂ ಸೃಷ್ಠಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.