ಈಗಿನ ಸುದ್ದಿ

ಪ್ರಿಯಾಂಕಾ ವಿರುದ್ಧ ಮೋದಿ ಜಾತಿ ರಾಜಕೀಯದ ಅಸ್ತ್ರ

ಪ್ರಿಯಾಂಕಾ ವಿರುದ್ಧ ಮೋದಿ ಜಾತಿ ರಾಜಕೀಯದ ಅಸ್ತ್ರ
Published On :

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಿರುದ್ಧ ಜಾತಿ ರಾಜಕೀಯದ ಅಸ್ತ್ರ ಬಳಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ನಾನು ಕೆಳ ಜಾತಿಯಲ್ಲಿ ಹುಟ್ಟಿರಬಹುದು. ಆದರೆ ಯಾವತ್ತು ಕೀಳುಮಟ್ಟದ ರಾಜಕೀಯ ಮಾಡಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.

ಸಾಮಾಜಿಕವಾಗಿ ನಾನು ಕೆಳಮಟ್ಟದ ಜಾತಿಗೆ ಸೇರಿದ ವ್ಯಕ್ತಿ. ಆದರೆ ಅವರಿಗೆ ಸತ್ಯ ಹೇಳಲು ಆಗುತ್ತಿಲ್ಲ. ಹೀಗಾಗಿ ಅವರು ಇದು ಕೆಳ ವರ್ಗಕ್ಕೆ ಸೇರಿದ ವ್ಯಕ್ತಿಯ ರಾಜಕೀಯ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ನಾನು ಕೆಳ ವರ್ಗಕ್ಕೆ ಸೇರಿದ ವ್ಯಕ್ತಿ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕೆಳ ಜಾತಿಗೆ ಸೇರುವುದು ಅಪರಾಧ ಅಲ್ಲ... ನಾನು ಯಾವತ್ತು ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ ಎಂಬ ಭರಸೆಯನ್ನು ಈ ದೇಶದ ಜನತೆಗೆ ಕೊಡುತ್ತೇನೆ ಎಂದು ಮೋದಿ ನೇರವಾಗಿ ಯಾರ ಹೆಸರನ್ನು ಪ್ರಸ್ತಾಪಿಸದೇ ಟ್ವಿಟ್ ಮಾಡಿದ್ದಾರೆ.

ಕೆಳ ವರ್ಗಕ್ಕೆ ಸೇರಿದ ಹಲವು ವ್ಯಕ್ತಿಗಳು ಸಹ ದೇಶದ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ಹೇಳಿದ್ದಾರೆ.

ಮೋದಿ ಅವರು ಅಮೇಠಿಯಲ್ಲಿ ನನ್ನ ಹುತಾತ್ಮ ತಂದೆಗೆ ಅವಮಾನ ಮಾಡಿದ್ದಾರೆ. ಇದನ್ನು ಅಮೇಠಿಯ ಜನ ಎಂದೂ ಕ್ಷಮಿಸುವುದಿಲ್ಲ. ಮೋದಿಯ ನೀಚ ರಾಜನೀತಿಗೆ ನನ್ನ ಬೂತ್‌ನ ಕಾರ್ಯಕರ್ತರು ಉತ್ತರ ನೀಡುತ್ತಾರೆ ಎಂಬ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಮೋದಿ ಈ ರೀತಿ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.