ಈಗಿನ ಸುದ್ದಿ

ಷೇರು ಮಾರುಕಟ್ಟೆಯಲ್ಲಿ 700 ಅಂಕ ಏರಿಕೆಯ ಸಾರ್ವಕಾಲಿಕ ದಾಖಲೆ

ಷೇರು ಮಾರುಕಟ್ಟೆಯಲ್ಲಿ  700 ಅಂಕ ಏರಿಕೆಯ ಸಾರ್ವಕಾಲಿಕ ದಾಖಲೆ
Published On :

ಮುಂಬೈ: ಮುಂದಿನ ವಾರ ಬರಲಿರುವ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಭಾರಿ ಬದಲಾವಣೆ ಕಂಡಿದ್ದು, ಶುಕ್ರವಾರ 700 ಅಂಕಗಳನ್ನು ಗಳಿಸಿ ಸೆನ್ಸೆಕ್ಸ್ 23.048 ಅಂಕಗಳೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ.

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವ ನಿರೀಕ್ಷೆ ಷೇರು ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗೆ ಮುನ್ನುಡಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 23.048 ಅಂಕಗಳನ್ನು ಗಳಿಸಿದೆ. ಇದೇ ವೇಳೆ ನಿಫ್ಟಿ ಸಹ 6.800 ಅಂಕಗಳಿಗೆ ತಲುಪಿಸಿದೆ.

ಕಳೆದ ಐದು ವಾರಗಳಿಂದ ನಡೆಯುತ್ತಿರುವ ಲೋಕಸಭಾ ಚುನಾವಣೆ ಸೋಮವಾರ ಮುಕ್ತಾಯವಾಗಲಿದ್ದು, ಚುನಾವಣೆಯ ಫಲಿತಾಂಶಗಳು ಮೇ 16 ರಂದು ಪ್ರಟಕಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರಿಂದ ಶೇರು ಖರೀದಿ ಹೆಚ್ಚಾದ ಕಾರಣ ಷೇರು ಮಾರುಕಟ್ಟೆಯ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮುಟ್ಟಿದೆ.

ಬ್ಯಾಂಕಿಂಗ್ ಸ್ಟಾಕ್‌ಗಳು ಗಳಿಕೆಯಲ್ಲಿ ಮುಂದಿದ್ದು, ರಾಷ್ಟ್ರೀಯ ಸ್ಟಾಕ್ ವಿನಿಮಯ ಬ್ಯಾಂಕಿಂಗ್ ಉ ಸೂಚ್ಯಂಕ 4.4 ರಷ್ಟು ದಾಖಲೆ ಏರಿಕೆ ಕಂಡಿದೆ. ಇದರಿಂದ ಪ್ರಮುಖ ಬ್ಯಾಂಕ್‌ಗಳು ಬಾರಿ ಲಾಭ ಪಡೆಯಲಿವೆ. ಐಸಿಐಸಿಐ ಬ್ಯಾಂಕ್ ಸುಮಾರು ಶೇ. 6ರಷ್ಟು ಬೆಳವಣಿಗೆ ದಾಖಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.