7000 ಅಂಶಗಳಿಗೇರಿದ ನಿಫ್ಟಿ

ಮುಂಬೈ: ಮುಂಬೈ ಷೇರುಮಾರುಕಟ್ಟೆ ದಾಖಲೆ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದ್ದು, ನಿಫ್ಟಿಯಲ್ಲಿ 500 ಅಂಶಗಳ ಏರಿಕೆಯೊಂದಿಗೆ ಒಟ್ಟು ಗಳಿಕೆ 7000 ಅಂಶಗಳಿಗೇರಿದೆ.
ಒಟ್ಟಾರೆ ಮಾರುಕಟ್ಟೆ ಗಳಿಕೆಯಲ್ಲಿ ಶೇ.17ರಷ್ಟು ಅಂಶಗಳು ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ ಮೌಲ್ಯ ಕೂಡ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿಂದೆ 62 ರುಪಾಯಿಯ ಆಸುಪಾಸಿನಲ್ಲಿದ್ದ ರುಪಾಯಿ ಮೌಲ್ಯ ಇದೀಗ 59. 51ರು.ಗಳಿಗೇರಿದೆ. ಜುಲೈ 29 2013ರಂದು ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಸತತ 10 ತಿಂಗಳ ನಂತರ ಚೇತರಿಕೆ ಕಂಡಿದೆ.
ಭಾರತದಲ್ಲಿನ ಪ್ರಸಕ್ತ ಲೋಕಸಭಾ ಚುನಾವಣೆ ಪರಿಣಾಮವೇ ಮಾರುಕಟ್ಟೆ ಚೇತರಿಕೆಗೆ ಕಾರಣ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ನಿಮಿತ್ತ ಭಾರತೀಯ ಷೇರುಗಳಿಗೆ ಭಾರಿ ಬೇಡಿಕೆ ಉಂಟಾಗಿದ್ದು, ಮಾರುಕಟ್ಟೆ ಚೇತರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಪ್ರಮುಖ ಷೇರುಸಂಸ್ಥೆಗಳಾದ ಹೆಚ್ಡಿಎಫ್ಸಿ, ರಿಲಾಯನ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳ ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಅಂತೆಯೇ ಇನ್ಫ್ರಾಸ್ಟ್ರಕ್ಚರ್ ವಿಭಾಗಗಳ ಷೇರುಗಳಲ್ಲಿಯೂ ಕೂಡ ಏರಿಕೆ ಕಂಡುಬಂದಿದ್ದು, ಅಲ್ಟ್ರಾಟೆಕ್ ಸಿಮೆಂಟ್ಸ್ ಸಂಸ್ಥೆ ಶೇ.4ರಷ್ಟು ಗಳಿಕೆ ಕಂಡಿದೆ. ಉಳಿದಂತೆ ಬಿಹೆಚ್ಇಎಲ್ ಸಂಸ್ಥೆ ಶೇ.2ರಷ್ಟು ಚೇತರಿಕೆ ಕಂಡಿದೆ.
ಮಾರುಕಟ್ಟೆ ಮೇಲೆ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಭಾವ
ಇದೇ ವೇಳೆ ಬಹುತೇಕ ಸಮೀಕ್ಷಾ ಸಂಸ್ಥೆಗಳು ಪ್ರಕಟಿಸಿರುವಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅತ್ಯಧಿಕ ಸ್ಥಾನಗಳೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂಬ ವರದಿಗಳು ಕೂಡ ಷೇರುಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಕನಿಷ್ಟ 230ರಿಂದ 240 ಸ್ಥಾನಗಳನ್ನು ಗಳಿಸಲಿದ್ದು, ಕೇಂದ್ರದಲ್ಲಿ ಸ್ಥಿರ ಸರ್ಕಾರ ರಚನೆಯಾಗಲಿದೆ ಎಂಬ ಚುನಾವಣಾ ಸಮೀಕ್ಷಾ ವರದಿಗಳು ಷೇರುಮಾರಕಟ್ಟೆ ಮೇಲೆ ಪರಿಣಾಮ ಬೀರಿದೆ.
ಒಟ್ಟಾರೆ ಬಿಎಸ್ಇ ಸೆನ್ಸೆಕ್ಸ್ 23,503 ಅಂಕಗಳ ವಹಿವಾಟು ನಡೆಸಿದ್ದು, ನಿಫ್ಟಿ 7000 ಅಂಶಗಳಿಗೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


