ಹೆಣ್ಣುಮಕ್ಕಳ ಮತಾಂತರ: ಬೋಕೋ ಹರಾಮ್ ಎಚ್ಚರಿಕೆ

ನವದೆಹಲಿ: ತಮ್ಮ ಬೇಡಿಕೆಗಳು ಈಡೇರದಿದ್ದರೆ ಅಪಹರಣ ಮಾಡಿರುವ ಹೆಣ್ಣುಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತೇವೆ ಎಂದು ಬೋಕೋ ಹರಾಮ್ ಉಗ್ರ ಸಂಘಟನೆ ಬೆದರಿಕೆ ಹಾಕಿದೆ.
ನೈಜಿರಿಯಾದ ಜೈಲುಗಳಲ್ಲಿರುವ ತನ್ನ ಉಗ್ರರನ್ನು ಬಿಡುಗಡೆ ಮಾಡದಿದ್ದರೆ ತಾನು ಅಪಹರಣ ಮಾಡಿರುವ ಎಲ್ಲ ಹೆಣ್ಣು ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವುದಾಗಿ ಬೋಕೊ ಹರಾಮ್ ಸಂಘಟನೆ ಎಚ್ಚರಿಕೆ ನೀಡಿದೆ. ಸೋಮವಾರ ಸಂಘಟನೆ ಬಿಡುಗಡೆ ಮಾಡಿರುವ ಹೊಸ ವಿಡಿಯೋ ಸಂದೇಶದಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಸುಮಾರು 17 ನಿಮಿಷಗಳಿರುವ ಈ ದೃಷ್ಯಾವಳಿಯಲ್ಲಿ ಸ್ವತಃ ನಿಷೇಧಿತ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಶೇಕು ಮಾತನಾಡಿದ್ದಾನೆ.
ರಕ್ಷಣಾ ಪಡೆಗಳಿಂದ ಬಂಧನಕ್ಕೀಡಾಗಿರುವ ತನ್ನ ಬೆಂಬಲಿಗರನ್ನು ಬಿಡುಗಡೆಗೊಳಿಸದಿದ್ದರೆ ಎಲ್ಲ ಹೆಣ್ಣುಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತೇನೆ ಎಂದು ಶೇಕು ಹೇಳಿದ್ದಾನೆ.
ಕಳೆದ ಏಪ್ರಿಲ್ 14ರಂದು ನೈಜಿರಿಯಾದ ಬೋರ್ನೋ ರಾಜ್ಯದ ಚಿಬೋಕ್ ಜಿಲ್ಲೆಯ ಮೇಲೆ ದಾಳಿ ನಡೆಸಿದ್ದ ಬೋಕೋ ಹರಾಮ್ ಉಗ್ರ ಸಂಘಟನೆ, 270ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಅಪಹರಣ ಮಾಡಿತ್ತು. ಅಲ್ಲದೆ ನೈಜಿರಿಯಾ ಸರ್ಕಾರ ದೇಶದಲ್ಲಿ ಕ್ರಿಶ್ಚಿಯನ್ ಶಿಕ್ಷಣ ವ್ಯವಸ್ಥೆಯನ್ನು ರದ್ದುಗೊಳಿಸದಿದ್ದರೆ, ಈ ಎಲ್ಲ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವುದಾಗಿ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬೂಬಕರ್ ಶೇಕು ಎಚ್ಚರಿಕೆ ನೀಡಿದ್ದನು. ಈಗಲೂ ಸುಮಾರು 250ಕ್ಕೂ ಅಧಿಕ ಹೆಣ್ಣು ಮಕ್ಕಳು ಉಗ್ರರ ವಶದಲ್ಲಿದ್ದು, ಅವರ ಬಿಡುಗಡೆಗೆ ಅಂತಾರಾಷ್ಟ್ರೀಯ ಸಮುದಾಯ ಒಗ್ಗೂಡಿದೆ.
ಈಗಾಗಲೇ ಬೋಕೋ ಹರಾಮ್ ಉಗ್ರ ಸಂಘಟನೆಯ ವಿರುದ್ಧ ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ನೈಜೀರಿಯಾ ಸರ್ಕಾರಕ್ಕೆ ಸೇನಾ ಬೆಂಬಲ ಘೋಷಿಸಿದ್ದು, ಕಾರ್ಯಾಚರಣೆ ಕೂಡ ಆರಂಭವಾಗಿದೆ. ಈ ಹಿಂದೆ ನಡೆದ ಕಾರ್ಯಾಚರಣೆ ವೇಳೆ ಸುಮಾರು 50ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಭದ್ರತಾ ಸಿಬ್ಬಂಧಿಗಳು ರಕ್ಷಿಸಿದ್ದು, ಓರ್ವ ಉಗ್ರನನ್ನು ವಶಕ್ಕೆ ಪಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


