ಕಾಪಿ ಕ್ಯಾಟ್ ಐಶ್ವರ್ಯ ರೈ..!

ನವದೆಹಲಿ: ಕ್ಯಾನೆ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಇದೀಗ ವಿವಾದವೊಂದಕ್ಕೆ ಕಾರಣವಾಗಿದ್ದಾರೆ.
ಫ್ರಾನ್ಸ್ನ ಕ್ಯಾನೆಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಎಲ್ಲರ ಕೇಂದ್ರ ಬಿಂದುವಾಗಿದ್ದು, ಇದೀಗ ಅವರು ತೊಟ್ಟಿರುವ ಉಡುಪು ವಿವಾದಕ್ಕೆ ಕಾರಣವಾಗಿದೆ. ಕ್ಯಾನೆ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ನಟಿ ಐಶ್ವರ್ಯ ರೈ ಬಂಗಾರದ ಬಣ್ಣದ ಗಾಗ್ರಾವನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಐಶ್ ತೊಟ್ಟಿದ್ದ ಗಾಗ್ರಾ ವಿನ್ಯಾಸ ನಕಲಾಗಿದ್ದು, ಈ ಹಿಂದೆಯೇ ಮತ್ತೋರ್ವ ನಟಿಮಣಿ ಈ ವಿನ್ಯಾಸದ ಉಡುಪನ್ನು ಧರಿಸಿದ್ದರು.
ಬ್ರಾಡ್ವೇ ಸ್ಟಾರ್ ಕ್ರಿಸ್ಟಿನ್ ಚಿನೋವೆತ್ ಎಂಬ ನಟಿ ಈ ಧಿರಿಸನ್ನು ಇದೇ ವರ್ಷ ನಡೆದ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಧರಿಸಿದ್ದರು. ಆದರೆ ಇದೀಗ ಇದೇ ವಿನ್ಯಾಸದ ಉಡುಗೆಯನ್ನು ಧರಿಸುವ ಮೂಲಕ ಐಶ್ವರ್ಯ ರೈ ಬಚ್ಚನ್ ಮತ್ತೆ ಸುದ್ದಿಯಲ್ಲಿದ್ದಾರೆ.
ಒಟ್ಟಾರೆ ಐಶ್ ತೊಟ್ಟಿದ್ದ ಧಿರಿಸಿನ ಕುರಿತು ವಿವಾದಗಳೇನೆ ಇರಲಿ ಕ್ಯಾನೆ ಚಿತ್ರೋತ್ಸವದಲ್ಲಿ ಐಶ್ವರ್ಯ ರೈ, ತಮ್ಮ ಪತಿ ಅಭಿಷೇಕ್ ಬಚ್ಚನ್ ಸೇರಿದಂತೆ ಎಲ್ಲರ ಗಮನ ಸೆಳೆದಿದ್ದಂತೂ ನಿಜ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


