ತೆರೆಗೆ ಅಪ್ಪಳಿಸಿದ 'ಕೊಚಡೈಯಾನ್'

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೊಚಡೈಯಾನ್ ಶುಕ್ರವಾರ ತೆರೆಗೆ ಅಪ್ಪಳಿಸಿದ್ದು, ದಾಖಲೆ ಚಿತ್ರ ಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ.
ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಪಂಜಾಬಿ ಮತ್ತು ಭೋಜಪುರಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೊಚಡೈಯಾನ್ ಚಿತ್ರ ವಿಶ್ವಾದ್ಯಂತ ಇಂದು ತೆರೆಕಂಡಿದೆ. ಭಾರತ ಸೇರಿದಂತೆ ವಿಶ್ವಾದ್ಯಂತ ಸುಮಾರು 2000 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದ್ದು, ಚಿತ್ರವನ್ನು 3ಡಿ ಮತ್ತು 2ಡಿ ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿ ಚಿತ್ರಿಸಲಾಗಿದ್ದು, ಮೋಷನ್ ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಮೊದಲ ಭಾರತೀಯ ಚಿತ್ರವೆಂಬ ಖ್ಯಾತಿಗೆ ಕೊಚಡೈಯಾನ್ ಪಾತ್ರವಾಗಿದೆ.
ಈ ಹಿಂದೆ ಇದೇ ತಂತ್ರಜ್ಞಾನವನ್ನು ಬಳಸಿ ಹಾಲಿವುಡ್ ನಲ್ಲಿ ಅವತಾರ್ ಚಿತ್ರವನ್ನು ತಯಾರಿಸಲಾಗಿತ್ತು. ಕೊಚಡೈಯಾನ್ ಚಿತ್ರವನ್ನು ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಅವರು ನಿರ್ದೇಶಿಸಿದ್ದು, ರಜನಿಕಾಂತ್, ದೀಪಿಕಾ ಪಡುಕೋಣೆ, ಶರತ್ ಕುಮಾರ್, ಜಾಕಿ ಶ್ರಾಫ್ ಸೇರಿದಂತೆ ಚಿತ್ರರಂಗದ ಪ್ರಮುಖರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಂಗೀತ ನೀಡಿದ್ದು, ಈಗಾಗಲೇ ಚಿತ್ರದ ಹಾಡುಗಳು ಭಾರಿ ಬೇಡಿಕೆ ಸೃಷ್ಟಿ ಮಾಡಿಕೊಂಡಿವೆ.
ಚಿತ್ರದ ಕುರಿತು ಆತ್ಮವಿಶ್ವಾಸದಿಂದಿರುವ ರಜನಿಕಾಂತ್ ಅವರು ಟ್ವಿಟರ್ ನಲ್ಲಿ ತಮ್ಮ ಪುತ್ರಿ ಸೌಂದರ್ಯಗೆ ಮತ್ತು ಇಡೀ ಕೊಚಡೈಯಾನ್ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಸುಮಾರು 3ದಿನಗಳ ಟಿಕೆಟ್ ಮಾರಾಟವಾಗಿದ್ದು, ಪ್ರೇಕ್ಷಕರ ವತಿಯಿಂದ ಚಿತ್ರಕ್ಕೆ ಭಾರಿ ಪ್ರತಿಕ್ರಿಯೆ ಲಭಿಸುತ್ತಿದೆ.
ಒಟ್ಟಾರೆ ಇಂದು ನಾಳೆ ಎಂದು ಅಭಿಮಾನಿಗಳನ್ನು ಸತಾಯಿಸುತ್ತಿದ್ದ ರಜನಿಕಾಂತ್ ಅವರ ಕೊಚಡೈಯಾನ್ ಚಿತ್ರ ಇಂದು ತೆರೆಕಂಡಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


