ಈಗಿನ ಸುದ್ದಿ

ದೀಪಾವಳಿ ವೇಳೆಗೆ ಚಿನ್ನದ ದರದಲ್ಲಿ ಮತ್ತಷ್ಟು ಕುಸಿತ

ದೀಪಾವಳಿ ವೇಳೆಗೆ ಚಿನ್ನದ ದರದಲ್ಲಿ ಮತ್ತಷ್ಟು ಕುಸಿತ
Published On :

ನವದೆಹಲಿ: ಮುಂಬರುವ ದೀಪಾವಳಿಯ ವೇಳೆಗೆ ಚಿನ್ನದ ದರದಲ್ಲಿ ಭಾರಿ ಪ್ರಮಾಣದ ಕುಸಿತ ಕಾಣುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹೊರಡಿಸಿದ್ದ ನೂತನ ಚಿನ್ನ ಆಮದು ನೀತಿಯಲ್ಲಿ ಗ್ರಾಹಕರಿಗೆ ಕೊಂಚ ಅನುಕೂಲವಾಗುವ ಅಂಶಗಳಿದ್ದು, ಈ ಹಿಂದೆ ಇದ್ದ ಚಿನ್ನ ಆಮದು ನೀತಿಯಲ್ಲಿದ್ದ ಕೆಲ ನಿರ್ಭಂಧಗಳನ್ನು ಸಡಿಲಗೊಳಿಸಲಾಗಿದೆ. ಅಲ್ಲದೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರದ ನಂತರ ನಡೆಯುವ ತಮ್ಮ ಮೊದಲ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಪ್ರಸ್ತುತ ಕೇಂದ್ರಸರ್ಕಾರಕ್ಕೆ ಶೇ.10 ರಷ್ಟು ಸುಂಕ ನೀಡುತ್ತಿದ್ದು, ಬಜೆಟ್ ನಂತರ ಈ ಪ್ರಮಾಣ ಕಡಿತಗೊಳ್ಳುವ ಸಾಧ್ಯತೆ ಇದ್ದು, ಇದು ಕೂಡ ಚಿನ್ನದ ದರ ಕಡಿತಗೊಳ್ಳಲು ಕಾರಣ ಎನ್ನಲಾಗುತ್ತಿದೆ.

ಆರ್‌ಬಿಐನ ನೂತನ 20: 80 ಚಿನ್ನ ಆಮದು ನೀತಿ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿಸುವ ಗ್ರಾಹಕರಿಗೆ ವರದಾನವಾಗಲಿದೆ. ಏಕೆಂದರೆ ಚಿನ್ನ ಆಮದು ದಾರರು ತಾವು ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣದ ಪೈಕಿ ಶೇ.20ರಷ್ಟು ಚಿನ್ನವನ್ನು ಕಡ್ಡಾಯವಾಗಿ ರಫ್ತು ಮಾಡಲೇಬೇಕಿದೆ. ಉಳಿದ ಶೇ.80ರಷ್ಟು ಚಿನ್ನವನ್ನು ದೇಶೀಯ ಮಾರುಕಟ್ಟೆಯಲ್ಲಿ ಬಳಸಬಹುದಾಗಿದೆ. ಹೀಗಾಗಿ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಚಿನ್ನ ಅಗ್ಗದ ದರದಲ್ಲಿ ದೊರೆಯಲಿದೆ.

ನಿನ್ನೆಯಷ್ಟೇ ಚಿನ್ನದರ 800ರಷ್ಟು ಇಳಿಕೆಯಾಗಿತ್ತು. ಮೂಲಗಳ ಪ್ರಕಾರ ಮುಂಬರುವ ದೀಪಾವಳಿ ವೇಳೆಗೆ ಪ್ರತಿ 10 ಗ್ರಾಂ ಚಿನ್ನದ ದರ 23 ಸಾವಿರದಿಂದ 24 ಸಾವಿರ ರುಪಾಯಿಗೆ ಇಳಿಕೆಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.