ಮೋದಿ ಸಂಪುಟದಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ

ನವದೆಹಲಿ: ನೂತನ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕರ್ನಾಟಕದ ಮೂವರಿಗೆ ಸಚಿವ ಸ್ಥಾನ ದೊರೆತಿದ್ದು, ಪ್ರತಿಷ್ಟಿತ ರೈಲ್ವೇ ಖಾತೆ ಡಿ.ವಿ.ಸದಾನಂದಗೌಡ ಅವರಿಗೆ ದೊರೆತಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತ್ ಕುಮಾರ್ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಲಭಿಸಿದ್ದು, ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ವೆಂಕಯ್ಯ ನಾಯ್ಡು ಅವರಿಗೆ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ ಖಾತೆ ದೊರೆತಿದೆ.
ಉಳಿದಂತೆ ಪ್ರಮುಖ ಖಾತೆಗಳನ್ನು ಹಿರಿಯ ನಾಯಕರಿಗೆ ಹಂಚಿಕೆ ಮಾಡಲಾಗಿದೆ.
ನರೇಂದ್ರ ಮೋದಿ ಅವರ ನೇತೃತ್ವದ ಸಂಪುಟ ಸಚಿವರ ಪಟ್ಟಿ ಇಂತಿದೆ
ಸಂಪುಟ ದರ್ಜೆ ಸಚಿವರು
ರಾಜನಾಥ್ ಸಿಂಗ್ -ಗೃಹ ಖಾತೆ
ಸುಷ್ವಾ ಸ್ವರಾಜ್- ವಿದೇಶಾಂಗ ವ್ಯವಹಾರ ಖಾತೆ
ಅರುಣ್ ಜೇಟ್ಲಿ - ಹಣಕಾಸು ಮತ್ತು ರಕ್ಷಣಾ ಖಾತೆ
ರವಿಶಂಕರ್ ಪ್ರಸಾದ್- ಕಾನೂನು ಮತ್ತು ದೂರಸಂಪರ್ಕ ಖಾತೆ
ಅನಂತ್ ಕುಮಾರ್-ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
ಡಿ.ವಿ.ಸದಾನಂದಗೌಡ-ರೇಲ್ವೆ ಖಾತೆ
ನಿತಿನ್ ಗಡ್ಕರಿ-ಸಾರಿಗೆ ಮತ್ತು ಬಂದರು ಖಾತೆ
ವೆಂಕಯ್ಯ ನಾಯ್ಡು-ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ ಖಾತೆ
ಮನೇಕಾ ಗಾಂಧಿ- ಮಹಿಳಾ ಮತ್ತು ಮಕ್ಕಳ ಖಾತೆ
ಸ್ಮೃತಿ ಇರಾನಿ- ಮಾನವ ಸಂಪನ್ಮೂಲ ಖಾತೆ
ನಜ್ಮಾ ಹೆಫ್ತುಲ್ಲಾ-ಅಲ್ಪ ಸಂಖ್ಯಾತ ಖಾತೆ
ರಾಮ್ ವಿಲಾಸ್ ಪಾಸ್ವಾನ್-ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಖಾತೆ
ಟಿಡಿಪಿಯ ಅಶೋಕ್ ಗಜಪತಿ ರಾಜು- ನಾಗರೀಕ ವಿಮಾನಯಾನ ಖಾತೆ
ಉಮಾ ಭಾರತಿ-ಜಲಸಂಪನ್ಮೂಲ ಖಾತೆ ಮತ್ತು ಗಂಗಾ ಸ್ವಚ್ಛತಾ ಇಲಾಖೆ
ಗೋಪಿನಾಥ್ ಮುಂಡೆ-ಗ್ರಾಮೀಣಾಭಿವೃದ್ಧಿ ಖಾತೆ
ಹರ್ಸಿಮ್ರಾತ್ ಕೌರ್ ಬಾದಲ್-ಆಹಾರ ಸಂಸ್ಕರಣೆ ಖಾತೆ
ನರೇಂದ್ರ ಸಿಂಗ್ ಟೋಮರ್-ಉಕ್ಕು ಮತ್ತು ಗಣಿ ಖಾತೆ
ರಾಧಾಮೋಹನ್ ಸಿಂಗ್-ಕೃಷಿ ಖಾತೆ
ಥಾವರ್ ಸಿಂಗ್ ಗೆಹ್ಲೋಟ್-ಸಾಮಾಜಿಕ ನ್ಯಾಯ
ಡಾ.ಹರ್ಷವರ್ದನ್- ಆರೋಗ್ಯ ಖಾತೆ
ನಿರ್ಮಲಾ ಸೀತಾರಾಮನ್ -ವಾಣಿಜ್ಯ ಖಾತೆ
ಕಲ್ರಾಜ್ ಮಿಶ್ರಾ - ಸಣ್ಣ ಕೈಗಾರಿಕಾ ಖಾತೆ
ಜುವಾಲ್ ಒರಂ-ಬುಡಕಟ್ಟು ವ್ಯವಹಾರಾ ಖಾತೆ
ಶಿವಸೇನಾ ಪಕ್ಷದ ಅನಂತ್ ಗೀತೆ-ಖಾತೆ ಹಂಚಿಕೆಯಾಗಿಲ್ಲ
ಸ್ವತಂತ್ರ ಖಾತೆ ಸಚಿವರು
ಪ್ರಕಾಶ್ ಜಾವೇಡ್ಕರ್-ವಾರ್ತಾ ಮತ್ತು ಪ್ರಸಾರ ಖಾತೆ, ಪರಿಸರ ಖಾತೆ
ಪಿಯೂಶ್ ಗೋಯಲ್-ಕಲ್ಲಿದ್ದಲು ಮತ್ತು ಇಂಧನ ಖಾತೆ
ಧರ್ಮೇಂದ್ರ ಪ್ರದಾನ್-ಪೆಟ್ರೋಲಿಯಂ ಖಾತೆ
ರಾವ್ ಇಂದ್ರಜೀತ್ ಸಿಂಗ್-ಯೋಜನಾ ಆಯೋಗ
ವಿ.ಕೆ.ಸಿಂಗ್-ಖಾತೆ ಹಂಚಿಕೆಯಾಗಿಲ್ಲ
ಸಂತೋಷ್ ಕುಮಾರ್ ಗಂಗಾವರ್-ಖಾತೆ ಹಂಚಿಕೆಯಾಗಿಲ್ಲ
ಶ್ರೀಪಾದ್ ನಾಯಕ್-ಖಾತೆ ಹಂಚಿಕೆಯಾಗಿಲ್ಲ
ಸರಬಾನಂದ್ ಸೋನೋವಾಲ್ -ಖಾತೆ ಹಂಚಿಕೆಯಾಗಿಲ್ಲ
ಡಾ.ಜಿತೇಂದ್ರ ಸಿಂಗ್-ಖಾತೆ ಹಂಚಿಕೆಯಾಗಿಲ್ಲ
ರಾಜ್ಯ ಖಾತೆ ಸಚಿವರು
ಜಿ.ಎಂ.ಸಿದ್ದೇಶ್ವರ್-ಖಾತೆ ಹಂಚಿಕೆಯಾಗಿಲ್ಲ
ಮನೋಜ್ ಸಿನ್ಹಾ-ಖಾತೆ ಹಂಚಿಕೆಯಾಗಿಲ್ಲ
ನಿಹಾಲ್ ಚಂದ್-ಖಾತೆ ಹಂಚಿಕೆಯಾಗಿಲ್ಲ
ಉಪೇಂದ್ರ ಕುಶ್ವಾಹ್-ಖಾತೆ ಹಂಚಿಕೆಯಾಗಿಲ್ಲ
ಪಿ.ರಾಧಾಕೃಷ್ಣನ್-ಖಾತೆ ಹಂಚಿಕೆಯಾಗಿಲ್ಲ
ಕಿರಣ್ ರಿಜಿಜು-ಖಾತೆ ಹಂಚಿಕೆಯಾಗಿಲ್ಲ
ಕೃಷ್ಣಪಾಲ್ ಗುಜ್ಜರ್-ಖಾತೆ ಹಂಚಿಕೆಯಾಗಿಲ್ಲ
ಡಾ.ಸಂಜೀವ್ ಕುಮಾರ್ ಬಲಿಯಾನ್-ಖಾತೆ ಹಂಚಿಕೆಯಾಗಿಲ್ಲ
ಮನ್ಸುಕ್ ಭಾಯ್-ಖಾತೆ ಹಂಚಿಕೆಯಾಗಿಲ್ಲ
ಸುದರ್ಶನ್ ಭಗತ್-ಖಾತೆ ಹಂಚಿಕೆಯಾಗಿಲ್ಲ
ವಿಷ್ಣುದೇವ್-ಖಾತೆ ಹಂಚಿಕೆಯಾಗಿಲ್ಲ
ರಾವ್ ಸಾಹೇಬ್-ಖಾತೆ ಹಂಚಿಕೆಯಾಗಿಲ್ಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


