ಆನ್ ಲೈನ್ ಶಾಪಿಂಗ್ ಗೀಳಿನಿಂದ ಮುಕ್ತಿ ಬೇಕೆ? ಹಾಗಾದರೆ ಸ್ಮಾರ್ಟ್ ಫೋನ್ ನಿಂದ ದೂರವಿರಿ!

ಇ-ಕಾಮರ್ಸ್ ಅಥವಾ ಆನ್ ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಗೀಳಾಗಿ ಪರಿಣಮಿಸಿದ್ದು, ಇಂತಹ ಸಮಸ್ಯೆಯಿಂದ ದೂರವಿರಲು ಸ್ಮಾರ್ಟ್ ಫೋನ್ ಗಳಿಂದ ಸಾಧ್ಯವಾದಷ್ಟೂ ದೂರವಿರಿ ಎಂದು ತಜ್ಞರು ಹೇಳುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೊರಾಂಟೋ: ಇ-ಕಾಮರ್ಸ್ ಅಥವಾ ಆನ್ ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಗೀಳಾಗಿ ಪರಿಣಮಿಸಿದ್ದು, ಇಂತಹ ಸಮಸ್ಯೆಯಿಂದ ದೂರವಿರಲು ಸ್ಮಾರ್ಟ್ ಫೋನ್ ಗಳಿಂದ ಸಾಧ್ಯವಾದಷ್ಟೂ ದೂರವಿರಿ ಎಂದು ತಜ್ಞರು ಹೇಳುತ್ತಿದ್ದಾರೆ.

ಈ ಬಗ್ಗೆ ಯುನಿವರ್ಸಿಟಿ ಆಫ್ ಬ್ರಿಟೀಷ್ ಕೊಲಂಬಿಯಾ - ಒಕಾನಗನ್ ಕ್ಯಾಂಪಸ್ ನ ಹಿರಿಯ ಸಹಾಯಕ ಪ್ರೊಫೆಸರ್ ಯಿಂಗ್ ಜೂ ಅವರು, ತಮಗೆ ದೊರತೆ ದತ್ತಾಂಶಗಳ ಅನ್ವಯ ಸಾಮಾನ್ಯವಾಗಿ ಡೆಸ್ಕ್ ಟಾಪ್ ಮೂಲಕ ಆನ್  ಲೈನ್ ಶಾಂಪಿಕ್ ಮಾಡುವವರಿಗಿಂತಲೂ ಸ್ಮಾರ್ಟ್ ಫೋನ್ ಗಳಲ್ಲಿ ಶಾಪಿಂಗ್ ಮಾಡುವವ ಸಂಖ್ಯೆಯೇ ಹೆಚ್ಚು. ಇದಕ್ಕೆ ವಿವಿಧ ಇ-ಕಾಮರ್ಸ್ ಸಂಸ್ಥೆಗಳು ನೀಡುವ ಆಫರ್ ಗಳೂ ಕಾರಣವಾಗಿಬಹದು. ಆದರೆ ಇತ್ತೀಚಿನ ದಿನಗಳಲ್ಲಿ  ಇದೊಂದು ಸಮಸ್ಯೆಯಾಗಿ ಕಾಡಲಾರಂಭಿಸಿದ್ದು, ಸ್ಮಾರ್ಟ್ ಫೋನ್ ಗಳನ್ನು ದೂರವಿಟ್ಟರೆ ಆನ್ ಲೈನ್ ಶಾಪಿಂಗ್ ನಿಂದಲೂ ದೂರವಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೊಬೈಲ್ ಗಳಲ್ಲಿರುವ ಟಚ್ ಸ್ಕ್ರೀನ್ ಸೌಲಭ್ಯ ಗ್ರಾಹಕರನ್ನು ಹೆಚ್ಚೆಚ್ಚು ವಸ್ತುಗಳನ್ನು ನೋಡುವಂತೆ ಪ್ರೇರೇಪಿಸುತ್ತದೆ. ಪ್ರೇರೇಪಣೆಯೇ ಮುಂದೆ ಗೀಳಾಗಿ ಪರಿಣಿಸಿ ಸಮಸ್ಯೆ ತಂದೊಡ್ಡುತ್ತದೆ. ಟಚ್ ಸ್ಕ್ರೀನ್ ಮೊಬೈಲ್ ಗಳ  ಬಳಕೆಯಿಂದಾಗಿ ಗ್ರಾಹಕರಲ್ಲಿ ಅನುಭವದ ಚಿಂತನೆ ಉಂಟಾಗುತ್ತದೆ. ಇದು ಇ-ಕಾಮರ್ಸ್ ಸೆಕ್ಟರ್ ಗೆ ಒಂದು ರೀತಿಯಲ್ಲಿ ವರದಾನವಾಗಿ ಪರಿಣಿಮಿಸಿದ್ದು, ಗ್ರಾಹಕರು ಕುಳಿತಲ್ಲಿಯೇ ತಮಗೆ ಬೇಕಾದ ವಸ್ತುಗಳ ವಿವಿಧ ದರಗಳ ತಾಳೆ  ನೋಡಬಹುದಾಗಿದೆ. ಗ್ರಾಹಕರ ದೃಷ್ಟಿಕೋನದಲ್ಲಿ ಇದು ಉತ್ತಮವೇ ಆದರೂ ವೈದ್ಯರ ದೃಷ್ಟಿಕೋನದಲ್ಲಿ ಇದು ಗ್ರಾಹಕರಿಗೆ ಸಮಸ್ಯೆ ತಂದೊಡ್ಡುವುದರಲ್ಲಿ ಎರಡು ಮಾತಿಲ್ಲ ಎಂದು ಯಿಂಗ್ ಜೂ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಯಿಂಗ್ ಜೂ ಅವರ ಈ ಸಂಶೋಧನೆ ಮುಖ್ಯ ಉದ್ದೇಶವೇ ಆನ್ ಲೈನ್ ಶಾಪಿಂಗ್ ನಿಂದ ಗ್ರಾಹಕ ಸಂತೋಷ ಉಂಟಾಗುತ್ತದೆಯೇ ಅಥವಾ ಪ್ರಯೋಜನಕಾರಿ ಉತ್ಪನ್ನಗಳಾಗಿವೆಯೇ ಎಂಬುದನ್ನು ತಿಳಿಸಿಯುವುದಾಗಿತ್ತು. ಈ  ಸಂಶೋಧನೆಯ ಅನ್ವಯ ಇದೀಗ ಸ್ಟಾರ್ಟ್ ಫೋನ್ ಗಳ ಮೂಲಕ ಶಾಪಿಂಗ್ ಮಾಡುವ ಬಹುತೇಕ ಗ್ರಾಹಕರು ಗ್ರಾಹಕ ಸಂತೋಷಕ್ಕಾಗಿ ಶಾಪಿಂಗ್ ಮಾಡುತ್ತಿದ್ದು, ಡೆಸ್ಕ್ ಟಾಪ್ ಮೂಲಕ ಶಾಪಿಂಗ್ ಮಾಡುವವರು ಹೆಚ್ಚಾಗಿ  ಪ್ರಯೋಜನಾತ್ಮಕ ಉತ್ಪನ್ನಗಳನ್ನು ಶಾಪಿಂಗ್ ಮಾಡುತ್ತಾರೆ ಎಂದು ಯಿಂಗ್ ಜೂ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com