ಕೈಗಳ ಅಂದ ಹೆಚ್ಚಿಸುವ ಉಗುರುಗಳ ರಕ್ಷಣೆ ಹೇಗೆ?
ಕೈಗಳ ಅಂದ ಹೆಚ್ಚಿಸುವ ಉಗುರುಗಳ ರಕ್ಷಣೆ ಹೇಗೆ?

ಕೈಗಳ ಅಂದ ಹೆಚ್ಚಿಸುವ ಉಗುರುಗಳ ರಕ್ಷಣೆ ಹೇಗೆ?

ಉದ್ದನೆಯ ಬೆರಳುಗಳಿಗೆ ಸುಂದರವಾದ ಉಗುರುಗಳು ಅಷ್ಟೇ ಶೋಭೆಯನ್ನು ತರುತ್ತವೆ. ಉಗುರು ಬೆಳೆಸಬೇಕೆಂದು ಎಲ್ಲರಿಗೂ ಆಸೆಯಿರುತ್ತದೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರವಾಗಿರುತ್ತದೆ. ಸಾಮಾನ್ಯವಾಗಿ ಪೆಡಿಕ್ಯೂರ್ ಹಾಗೂ ಮ್ಯಾನಿಕ್ಯುರ್ ಮಾಡಿಕೊಳ್ಳುವುದರಿಂದ...
Published on
ಉದ್ದನೆಯ ಬೆರಳುಗಳಿಗೆ ಸುಂದರವಾದ ಉಗುರುಗಳು ಅಷ್ಟೇ ಶೋಭೆಯನ್ನು ತರುತ್ತವೆ. ಉಗುರು ಬೆಳೆಸಬೇಕೆಂದು ಎಲ್ಲರಿಗೂ ಆಸೆಯಿರುತ್ತದೆ. ಆದರೆ, ಅವುಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟಕರವಾಗಿರುತ್ತದೆ. ಸಾಮಾನ್ಯವಾಗಿ ಪೆಡಿಕ್ಯೂರ್ ಹಾಗೂ ಮ್ಯಾನಿಕ್ಯುರ್ ಮಾಡಿಕೊಳ್ಳುವುದರಿಂದ ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದನ್ನು ಹೊರತುಪಡಿಸಿ ಮನೆಯಲ್ಲಿ ಉಗುರುಗಳ ಅಂದ ಹೆಚ್ಚಿಸಲು ಕೆಲ ಸಲಹೆಗಳು ಇಲ್ಲಿವೆ. 
  • ಸಾಮಾನ್ಯವಾಗಿ ಮನೆ ಕೆಲಸ ಮಾಡುವ ಗೃಹಿಣಿಯರು ಉಗುರುಗಳನ್ನು ಅಂದವಾಗಿಟ್ಟುಕೊಳ್ಳಲು ಸಾಧ್ಯಾವಾಗುವುದಿಲ್ಲ. ಮನೆ ಕೆಲಸ ಮಾಡುವ ಸಂದರ್ಭದಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಳಕೆ ಮಾಡುವುದು ಉತ್ತಮವಾಗಿರುತ್ತದೆ. ಇದರಿಂದ ಉಗುರುಗಳು ಕೊಳೆಯಾಗುವುದನ್ನು ತಪ್ಪಿಸಬಹುದು. ಮನೆ ಕೆಲಸ ಮುಗಿದ ಬಳಿಕ ಗ್ಲೌಸ್ ಗಳನ್ನು ತೆಗೆದು ಕೈಗಳನ್ನು ಶುಭ್ರವಾಗಿ ತೊಳೆಯಿರಿ. ನಂತರ ಉಗುರುಗಳ ಕೊನೆಯ ಭಾಗವನ್ನು ಸ್ವಚ್ಛಗೊಳಿಸಿ. ಈ ಕೆಲಸವನ್ನು ಪ್ರತೀ ನಿತ್ಯ ಮಾಡಲು ಸಾಧ್ಯವಾಗದೇ ಹೋದರು, ಎರಡು ದಿನಕ್ಕೊಮ್ಮೆಯಾದರೂ ಮಾಡಿ. 
  • ಕೈತೊಳೆಯುವಾದ ಅತೀಯಾದ ತಣ್ಣನೆಯ ಅಥವಾ ಅತಿಯಾದ ಬಿಸಿ ನೀರನ್ನು ಬಳಕೆ ಮಾಡಬೇಡಿ. ಬೆಚ್ಚಗಿನ ನೀರಿನಿಂದ ತೊಳೆದು, ಹ್ಯಾಂಡ್ ಕ್ರೀಮ್ ಹಚ್ಚಿರಿ. 
  • ಉಗುರು ಬಣ್ಣ ಹಚ್ಚುವುದರಿಂದ ಉಗುರುಗಳು ಹಾಳಾಗುವುದಿಲ್ಲ. ಬದಲಾಗಿ ಉಗುರಿನ ಅಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡುತ್ತದೆ. ಆದರೆ, ಉಗುರು ಬಣ್ಣ ಖರೀದಿ ವೇಳೆ ಉತ್ತಮ ಬ್ರ್ಯಾಂಡ್ ಇರುವುದನ್ನು ಆಯ್ಕೆ ಮಾಡಿ. ಕಡಿಮೆ ಗುಣಮಟ್ಟದ ಉಗುರು ಬಣ್ಣಗಳು ಉಗುರುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಉಗುರುಗಳು ತೆಳ್ಳಗಾಗುವಂತೆ ಮಾಡುತ್ತವೆ.
  • ಉಗುರು ಬಣ್ಣ ಹಚ್ಚುವ ವೇಳೆ ಮೊದಲು ಬೇಸ್ ಕೋಟ್ ಹಾಕಿರಿ. ಇದು ಉಗುರುಗಳು ಡ್ಯಾಮೇಜ್ ಆಗಿದ್ದರೆ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಕಡಿಮೆಯಾಗುತ್ತದೆ. 
  • ಉಗುರು ಬಣ್ಣ ತೆಗೆಯುವುದಕ್ಕೆ ರಿಮೂವರ್ ಬಳಕೆ ಮಾಡುವುದು ಉತ್ತಮ. ನೇಲ್ ಪಾಲಿಷ್ ರಿಮೂವರ್ ತೆಗೆದುಕೊಳ್ಳುವಾಗ ರಿಮೂವರ್ ಸಂಪೂರ್ಣ ಅಸಿಟೋನ್ ನಿಂದ ಕೂಡಿರಬಾರದು. ಅಸಿಟೋನ್ ಜೊತೆಗೆ ವಿಟಮಿನ್ ಎ,ಸಿ ಮತ್ತು ಇ ಅಂಶವಿರುವ ರಿಮೂವರ್ ಗಳನ್ನು ಖರೀದಿ ಮಾಡಿ. 
  • ಉಗುರುಗಳು ಹಳದಿಬಣ್ಣದಿಂದ ಇರಬಾರದು ಎಂದರೆ, ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಹಾಕಿ ಕೈಗಳ ಬೆರಳುಗಳನ್ನು 10 ನಿಮಿಷ ಇಡಿ. ಪ್ರತೀನಿತ್ಯ ಹೀಗೆ ಮಾಡುವುದರಿಂದ ಉಗುರುಗಳು ಹಳದಿ ಬಣ್ಣದಿಂದ ಮುಕ್ತಿ ಪಡೆಯುತ್ತವೆ. 
  • ಉಗುರುಗಳ ಆರೋಗ್ಯ ಹೆಚ್ಚಿಸಲು ನಿಂಬೆಹಣ್ಣನ್ನು ಕತ್ತರಿಸಿ ಅದರಲ್ಲಿ ಬೆರಳುಗಳನ್ನು ಇಡಿ. ಅಥವಾ ನಿಂಬೆ ಹಣ್ಣಿನ ರಸದ ನೀರಿನಲ್ಲಿ 10 ನಿಮಿಷ ಕೈಗಳನ್ನು ಿಡಿ. 
  • ಪ್ರೋಟೀನ್ ಹಾಗೂ ಕ್ಯಾಲ್ಶಿಯಂ ಕೊರೆಯಿಂದ ಉಗುರುಗಳು ಕಟ್ ಆಗುವುದು ಹಾಗೂ ಮೇಲ್ಪದರ ಏಳುತ್ತವೆ. ಇದನ್ನು ತಡೆಯಲು ಪ್ರತೀನಿತ್ಯ ಹಾಲು, ಮೊಸರು, ಮೀನು ಹಾಗೂ ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. 
  • ದುರ್ಬಲ ಉಗುರಗಳಿಂದ ಮುಕ್ತಿ ಪಡೆಯಲು ಜೆಲಾಟಿನ್'ನ್ನು ಒಂದು ಚಮಚ ತೆಗೆದುಕೊಂಡು ಅದನ್ನು ಬಿಸಿ ನೀರಿಗೆ  ಹಾಕಿ ಕರಗಿಸಿ. ನಂತರ ನೀರು ತಣ್ಣಗಾದ ಬಳಿಕ ಯಾವುದೇ ಹಣ್ಣಿನ ರಸದ ಜೊತೆಗೆ ಸೇರಿಸಿ ಅದನ್ನು ಕುಡಿಯಿರಿ. ಇದರಿಂದ ದುರ್ಬಲ ಉಗುರುಗಳ ಆರೋಗ್ಯ ಸುಧಾರಿಸುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com