ಇನ್ನೂ ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಹಾಗಿದ್ದರೆ, ಅಕಾಲಿಕ ವೃದ್ಧಾಪ್ಯದ ಬಗ್ಗೆ ನೀವು ತಿಳಿಯಲೇಬೇಕು...
ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಿ ಎಂದೆನಿಸುತ್ತಿದೆಯೇ? ದಟ್ಟಪುಷ್ಟವಾಗಿರಬೇಕಾದ ದೇಹ ವೀಕ್ ಆಗುತ್ತಿದೆ ಎನಿಸುತ್ತಿದೆಯೇ? ಮೂಳೆ ದುರ್ಬಲವಾಗುತ್ತಿದೆ ಎಂದೆನಿಸುತ್ತಿದೆಯೇ? ಹಾಗಿದ್ದರೆ, ನೀವು ಅಕಾಲಿಕ ವೃದ್ಧಾಪ್ಯದ ಬಗ್ಗೆ ಎಚ್ಚರಗೊಳ್ಳಲೇಬೇಕಿದೆ.
Published: 16th June 2022 01:51 PM | Last Updated: 16th June 2022 02:43 PM | A+A A-

ಸಂಗ್ರಹ ಚಿತ್ರ
ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಿ ಎಂದೆನಿಸುತ್ತಿದೆಯೇ? ದಟ್ಟಪುಷ್ಟವಾಗಿರಬೇಕಾದ ದೇಹ ವೀಕ್ ಆಗುತ್ತಿದೆ ಎನಿಸುತ್ತಿದೆಯೇ? ಮೂಳೆ ದುರ್ಬಲವಾಗುತ್ತಿದೆ ಎಂದೆನಿಸುತ್ತಿದೆಯೇ? ಹಾಗಿದ್ದರೆ, ನೀವು ಅಕಾಲಿಕ ವೃದ್ಧಾಪ್ಯದ ಬಗ್ಗೆ ಎಚ್ಚರಗೊಳ್ಳಲೇಬೇಕಿದೆ.
ಅಕಾಲಿಕ ವೃದ್ಧಾಪ್ಯ ಎನ್ನುವುದೂ ಕೂಡ ಒಂದು ಕಾಯಿಲೆ ಇದಕ್ಕೆ ಪ್ರಿಮೆಚ್ಯೂರ್ ಎಜಿಂಗ್ ಎಂದು ಹೇಳಲಾಗುತ್ತದೆ. ವೃದ್ಧಾಪ್ಯವು ಮನುಷ್ಯ ದೇಹದಲ್ಲಿ ಆಗುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಜೊತೆಗೂಡಿರುತ್ತದೆ.
ನಮ್ಮ ದೇಹಗಳು ಮತ್ತು ಮನಸ್ಸುಗಳು ಸಮಯದೊಂದಿಗೆ ಹಲವಾರು ಪರಿವರ್ತನೆಗಳ ಮೂಲಕ ಮುಂದೆ ಸಾಗುತ್ತವೆ. ಕೆಲವರಿಗೆ, ಈ ಬದಲಾವಣೆಗಳು ಸಾಮಾನ್ಯಕ್ಕಿಂತ ಮುಂಚೆಯೇ ಸಂಭವಿಸುತ್ತವೆ. ಇದನ್ನು ಅಕಾಲಿಕ ವೃದ್ಧಾಪ್ಯ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಲ್ಲ, ಇದು ಜೆನೆಟಿಕ್ಸ್ ಮತ್ತು ಜೀವನಶೈಲಿ ಎರಡರಿಂದಲೂ ಎದುರಾಗುತ್ತದೆ.
ಅಕಾಲಿಕ ವೃದ್ಧಾಪ್ಯದ ಲಕ್ಷಣಗಳೇನು?
ಕಪ್ಪುಮಚ್ಚೆಗಳು
ವಯಸ್ಸಾಗುವಾಗ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕಾಣಿಸತೊಡಗುತ್ತವೆ. ದೇಹದಲ್ಲಿ ಕೊಲೆಜೆನ್ ಉತ್ಪಾದನೆ ಕಡಿಮೆಯಾದಾಗ ಹೀಗೆಲ್ಲಾ ಆಗುತ್ತದೆ. ಇವೆಲ್ಲಾ 60ರ ನಂತರ ಆಗುವಂತಾದ್ದು. ಆದರೆ, 30, 40ರ ವರ್ಷಕ್ಕೆ ಇವೆಲ್ಲಾ ಕಾಣಿಸಿಕೊಳ್ಳಬಾರದು.
ಸನ್ ಸ್ಪಾಟ್ ಗಳು
ಇದನ್ನು ವಯಸ್ಸಾದ ನಂತರ ಬರುವ ಕಲೆಗಳೆಂದು ಕರೆಯಲಾಗುತ್ತದೆ. ಈ ಕಲೆಗಳು ಚರ್ಮದ ಮೇಲೆ ಗಾಢವಾಗಿರುವಂತೆ ಕಂಡು ಬರುತ್ತವೆ. ಸಾಮಾನ್ಯವಾಗಿ ಈ ಕಲೆಗಳು ಮುಖ, ಕೈಗಳ ಹಿಂಭಾಗ, ಎದೆ ಮತ್ತು ಬೆನ್ನಿನ ಮೇಲೆ ಕಂಡುಬರುತ್ತವೆ.
ಇದನ್ನೂ ಓದಿ: ತೂಕ ನಿರ್ವಹಣೆ, ಅಕಾಲಿಕ ವೃದ್ಧಾಪ್ಯ ನಿಯಂತ್ರಣ: ಅಗಸೆ ಬೀಜದ ಆರೋಗ್ಯಕಾರಿ ಪ್ರಯೋಜನೆಗಳು
ಸುಕ್ಕುಗಟ್ಟಿದ ಚರ್ಮ
ನಿಮ್ಮ ಮೃದುತ್ವವನ್ನ ಕಳೆದುಕೊಂಡಾಗ ಚರ್ಮಕ ಸುಕ್ಕುಗಟ್ಟುತ್ತದೆ. ಇದರಿಂದ ಚರ್ಮದ ಮೇಲೆ ಸೂಕ್ಷ್ವಾದ ರೇಖೆಗಳು ನಿಧಾನವಾಗಿ ಕಾಣಿಸತೊಡಗುತ್ತದೆ.
ಒಣ ಮತ್ತು ತುರಿಕೆ ಚರ್ಮ
40 ವರ್ಷದ ಬಳಿಕ ಚರ್ಮದಲ್ಲಿನ ಎಣ್ಣೆ ಅಂಶ ಕಡಿಮೆಯಾಗಲಿದ್ದು, ಇದು ತುರಿಕೆಯುಂಟು ಮಾಡುತ್ತದೆ. ಇದಷ್ಟೇ ಅಲ್ಲದೆ. ಚರ್ಮ ತೆಳ್ಳಗಾಗುತ್ತದೆ.
ಉಬ್ಬಿದ ಕಣ್ಣುಗಳು
ವಯಸ್ಸಾದ ವ್ಯಕ್ತಿಗಳಲ್ಲಿ ಕಣ್ಣುಗಳು ಒಳಗೆ ಹೋಗಿರುವುದನ್ನು ನೀವು ನೋಡಿರಬಹುದು. ಕೊಲೆಜೆನ್ ಉತ್ಪಾದನೆ ಕಡಿಮೆಯಾದಾಗ ಕಣ್ಣಿನ ಸುತ್ತವಿರುವ ಚರ್ಮ ಉಬ್ಬಿಕೊಂಡಂತಾಗುತ್ತದೆ. ಈ ಚರ್ಮ ಸುಕ್ಕುಗಟ್ಟಿದಂತೆ ಕಾಣುತ್ತದೆ.
ಇದನ್ನೂ ಓದಿ: ಒಣದ್ರಾಕ್ಷಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೆ?
ಅಕಾಲಿಕ ವೃದ್ಧಾಪ್ಯದಿಂದ ದೂರ ಉಳಿಯುವುದು ಹೇಗೆ?
- ಅಕಾಲಿಕ ವೃದ್ಧಾಪ್ಯಕ್ಕೆ ನಮ್ಮ ಜೀವನಶೈಲಿ ಕೂಡ ಕಾರಣವಾಗುತ್ತದೆ. ಹೀಗಾಗಿ ಜೈವನಶೈಲಿಯನ್ನು ಬದಲಿಕೊಳ್ಳುವ ಮೂಲಕ ಈ ಅಕಾಲಿಕ ವೃದ್ಧಾಪ್ಯದಿಂದ ದೂರ ಉಳಿಯಬಹುದು.
- ಇದರ ಮೊದಲ ಹೆಜ್ಜೆ ಆರೋಗ್ಯಕರ ಜೀವನಶೈಲಿ ಅನುಸರಿಸುವುದಾಗಿದೆ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿದರೆ, ದೇಹಕ್ಕೆ ಎನರ್ಜಿ ಸಿಕ್ಕಂತಾಗುತ್ತದೆ. ತಾಜಾ ಹಣ್ಣುಗಳು, ತರಕಾರಿ, ಸೊಪ್ಪು, ಖನಿಜ, ಜೀವಸತ್ವ, ಸಮೃದ್ಧ ಪೋಷಕಾಂಶಗಿಂದ ಕೂಡಿದ ಆಹಾರ ಸೇವನೆ ಮಾಡುವುದು ಅತಿ ಮುಖ್ಯವಾಗಿದೆ.
- ಜಂಕ್ ಫುಡ್, ಆಲ್ಕೋಹಾಲ್, ಧೂಮಪಾನವನ್ನು ತ್ಯಜಿಸುವುದು ಬಹುಮುಖ್ಯವಾಗಿದೆ. ಪ್ರತಿನಿತ್ಯ ವ್ಯಾಯಾಮ ಮಾಡಿ.
- ಸೂರ್ಯನಿಗೆ ನೇರವಾಗಿ ಚರ್ಮವೊಡ್ಡುವುದನ್ನು ನಿಯಂತ್ರಿಸಿ. ಸ್ಕಾರ್ಫ್, ಟೋಪಿಗಳನ್ನು ಧರಿಸಿ. ಪರಿಣಾಮಕಾರಿಯಾದ ಸನ್ ಸ್ಕ್ರೀನ್/ಮಾಯಿಶ್ಚರೈಸರ್ ಬಳಸಿ.
- ಲೈಟ್ ಕೆಮಿಕಲ್ ಪೀಲ್ಸ್, ಮೈಕ್ರೋ ನೀಡ್ಲಿಂಗ್, ಲೇಸರ್ ಟೂ ರಿವರ್ಸ್ ಸನ್ ಡ್ಯಾಮೇಜ್ ಚಿಕಿತ್ಸೆಗಳನ್ನು ಪಡೆದುಕೊಳ್ಳಿ. ಸುಕ್ಕುಗಟ್ಟಿರುವ ಚರ್ಮದಿಂದ ದೂರ ಉಳಿಯಲು ಆ್ಯಂಟಿ ವ್ರಿಂಕಲ್ ಇಂಜೆಕ್ಷನ್ ಗಳನ್ನು ಪಡೆಯಿರಿ.