ತುಟಿಗಳ ಮೂಲೆಗಳಲ್ಲಿ ಬಿರುಕು ಬಿಡುತ್ತಿದೆಯೇ? ಈ ರೋಗದ ಲಕ್ಷಣವಾಗಿರಬಹುದು...

ಆಂಗ್ಯುಲರ್ ಚೀಲೈಟಿಸ್ ಎಂದು ಕರೆಯಲ್ಪಡುವ ಉರಿಯೂತದ ಚರ್ಮದ ಕಾಯಿಲೆಯು ಬಾಯಿಯ ಮೂಲೆಗಳಲ್ಲಿ ಊದಿಕೊಂಡ, ಕೆಂಪು ಪ್ಯಾಚ್ ಗಳಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಗಂಭೀರ ಸಮಸ್ಯೆಗಳೇನು ಅಲ್ಲ. ಆದರೆ, ಆಹಾರ ಸೇವನೆ ವೇಳೆ ಸಮಸ್ಯೆ ಉಂಟು ಮಾಡುತ್ತದೆ.
ಆಂಗ್ಯುಲರ್ ಚೀಲೈಟಿಸ್
ಆಂಗ್ಯುಲರ್ ಚೀಲೈಟಿಸ್

ಆಂಗ್ಯುಲರ್ ಚೀಲೈಟಿಸ್ ಎಂದು ಕರೆಯಲ್ಪಡುವ ಉರಿಯೂತದ ಚರ್ಮದ ಕಾಯಿಲೆಯು ಬಾಯಿಯ ಮೂಲೆಗಳಲ್ಲಿ ಊದಿಕೊಂಡ, ಕೆಂಪು ಪ್ಯಾಚ್ ಗಳಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಗಂಭೀರ ಸಮಸ್ಯೆಗಳೇನು ಅಲ್ಲ. ಆದರೆ, ಆಹಾರ ಸೇವನೆ ವೇಳೆ ಸಮಸ್ಯೆ ಉಂಟು ಮಾಡುತ್ತದೆ.

ಆಂಗ್ಯುಲರ್ ಚೀಲೈಟಿಸ್'ನ್ನು ಸ್ಟೊಮಾಟಿಟಿಸ್ ಮತ್ತು ಪರ್ಲೆಚೆ ಎಂದು ಕೂಡ ಕರೆಯಲಾಗುತ್ತದೆ. ಸಾಕಷ್ಟು ಜನರು ಇದನ್ನು ತಪ್ಪಾಗಿ ಅರ್ಥೈಸುವುದುಂಟು. ಬಾಯಿಯ ಹುಣ್ಣು ಎಂದು ಭಾವಿಸಿ, ಕೊಬ್ಬರಿ ಎಣ್ಣೆ, ಬೆಣ್ಣೆಯನ್ನು ಹಚ್ಚುತ್ತಿರುತ್ತಿರುತ್ತಾರೆ. ಆದರೆ, ಇದು ಬಾಯಿಯ ಹುಣ್ಣಲ್ಲ. ವಿಟಾಮಿನ್ ಮತ್ತು ಖನಿಜಗಳ ಕೊರತೆಯಿಂದಾಗಿ ಈ ರೋಗಳು ಕಾಣಿಸಿಕೊಳ್ಳುತ್ತವೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ. ಆದರೆ, ಸಮಸ್ಯೆ ಉಲ್ಭಣಗೊಳ್ಳುವುದಕ್ಕೂ ಮುನ್ನ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ.

ಆಂಗ್ಯುಲರ್ ಚೀಲೈಟಿಸ್ ವಿಟಮಿನ್ ಬಿ ಕೊರತೆ (ವಿಶೇಷವಾಗಿ ಬಿ 12, ಫೋಲೇಟ್, ರೈಬೋಫ್ಲಾವಿನ್) -ಖನಿಜ ಕೊರತೆ (ಸತು ಅಥವಾ ಕಬ್ಬಿಣ) -ಸಾಮಾನ್ಯ ಪ್ರೋಟೀನ್ ಕೊರತೆಯಿಂದ ಕಾಣಿಸಿಕೊಳ್ಳುತ್ತವೆ. ಇಂದು ಒಂದು ಸಾಮಾನ್ಯ ಚರ್ಮದ ಸ್ಥಿತಿಯಾಗಿದ್ದು, ಅದು ನಿಮ್ಮ ಬಾಯಿಯ ಮೂಲೆಗಳ ಮೇಲೆ ಪರಿಣಾಮ ಬೀರುತ್ತದೆ. ನಂತರ ನೋವಿನ, ಬಿರುಕು ಬಿಟ್ಟ ಹುಣ್ಣುಗಳಿಗೆ ಕಾರಣವಾಗುತ್ತದೆ.

ಈ ರೋಗವು ಸಾಮಾನ್ಯವಾಗಿ ವಿಶೇಷ ಚರ್ಮದ ಮುಲಾಮುಗಳು, ಔಷಧಿಗಳು ಅಥವಾ ಆಹಾರದಲ್ಲಿನ ಬದಲಾವಣೆಗಳೊಂದಿಗೆ ದೂರಾಗಿಸಿಕೊಳ್ಳಬಹುದು.

ಆಂಗ್ಯುಲರ್ ಚೀಲೈಟಿಸ್ ಸಮಸ್ಯೆ ವಯಸ್ಸಾದವರು ಮತ್ತು ಚಿಕ್ಕ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ವಯಸ್ಸಾದವರಲ್ಲಿ ಇದು ಹೆಚ್ಚು ಬಾಧಿಸುತ್ತದೆ ಏಕೆಂದರೆ ಅವರು ಆರ್ಟಿಫಿಶಿಯಲ್ ಹಲ್ಲುಗಳನ್ನು ಧರಿಸುವುದು ಅಥವಾ ಬಾಯಿಯ ಮೂಲೆಗಳಲ್ಲಿ ಸಡಿಲವಾದ ಚರ್ಮವನ್ನು ಹೊಂದಿರುವುದರಿಂದ ಈ ಸಮಸ್ಯೆ ಅವರನ್ನು ಹೆಚ್ಚು ಬಾಧಿಸುತ್ತದೆ.

ಆಂಗ್ಯುಲರ್ ಚೀಲೈಟಿಸ್ ಲಕ್ಷಣಗಳು?

  • ಕೆಲವೊಮ್ಮೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳು ಬಿರುಕುಗಳಿಗೆ ಬರುತ್ತವೆ, ಇದು ಉರಿಯೂತ ಅಥವಾ ಸೋಂಕಿಗೆ ಕಾರಣವಾಗಬಹುದು.
  • ತುಟಿಗಳ ಮೂಲೆಗಳಲ್ಲಿ ನೋವು
  • ನಿದ್ರೆಯಲ್ಲಿ ಗೊರಕೆ ಹೊಡೆಯುವುದು.
  • ರಕ್ತಸ್ರಾವ
  • ಊದಿಕೊಂಡ ತುಟಿಗಳು

ಅಪಾಯಕಾರಿ ಅಂಶಗಳು ಯಾವುವು?

  • ಲಾಲಾರಸವು ಬಾಯಿಯ ಮೂಲೆಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಶುಷ್ಕತೆಯನ್ನು ಉಂಟುಮಾಡುತ್ತದೆ.
  • ಈ ಸಮಸ್ಯೆಯು ಯಾವುದೇ ವಯಸ್ಸಿನ ಅಥವಾ ಲಿಂಗದ ಜನರ ಮೇಲೆ ಪರಿಣಾಮ ಬೀರಬಹುದು.
  • ಇದು ಮುಖದ ಮೇಲೆ ಶುಷ್ಕತೆ ಅಥವಾ ಸಡಿಲವಾದ ಚರ್ಮವನ್ನು ಉಂಟುಮಾಡಬಹುದು.

ಆಂಗ್ಯುಲರ್ ಚೀಲೈಟಿಸ್'ಗೆ ಕಾರಣವೇನು?

  • ಈ ಪ್ರದೇಶದಲ್ಲಿ ಅತಿಯಾದ ಶುಷ್ಕ ಚರ್ಮವು ಆಂಗ್ಯುಲರ್ ಚೀಲೈಟಿಸ್ ಕಾರಣವಾಗುತ್ತವೆ.
  • ಒತ್ತಡ, ಬೆರಳು ಕಚ್ಚುವುದು, ಫೇಸ್ ಮಾಸ್ಕ್ ಧರಿಸುವುದು, ಧೂಮಪಾನ ಮಾಡುವುದು, ಅರ್ಟಿಫಿಶಿಯಲ್ ಹಲ್ಲುಗಳನ್ನು ಧರಿಸುವವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು.

ಪತ್ತೆ ಹೇಗೆ?
ಪೌಷ್ಟಿಕಾಂಶದ ಕೊರತೆಗಳಿಂದ ಈ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ರಕ್ತದ ಪರೀಕ್ಷೆಗಳ ಮೂಲಕ ಈ ರೋಗವನ್ನು ಪತ್ತೆ ಮಾಡಬಹುದಾಗಿದೆ.

ಚಿಕಿತ್ಸೆ ಹೇಗೆ?
ಪ್ರೋಟೀನ್, ಕಬ್ಬಿಣ ಅಥವಾ ಬಿ ವಿಟಮಿನ್‌ಗಳಂತಹ ಪೋಷಕಾಂಶಗಳ ಕೊರತೆಯಿಂದಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಆಹಾರ ಕ್ರಮಗಳನ್ನು ಬದಲಿಸಲು ವೈದ್ಯರು ಸೂಚಿಸಬಹುದು. ಔಷಧಿಗಳೂ ಕೂಡ ಲಭ್ಯವಿದ್ದು, ಆ್ಯಂಟಿಬಯಾಟಿಕ್ ಕ್ರೀಮ್ ಗಳನ್ನು ನೀಡಬಹುದು. ಬಿರುಕುಗಳ ಕಡಿಮೆ ಮಾಡಲು ಸ್ಟೀರಾಯ್ಡ್ ಕ್ರೀಮ್ ಮತ್ತು ಚುಚ್ಚುಮದ್ದುಗಳನ್ನು ನೀಡಬಹುದು.

ತಡೆಗಟ್ಟುವುದು ಹೇಗೆ?

  • ಬಾಯಿಯ ಸುತ್ತಲಿನ ಪ್ರದೇಶ ತೇವಾಂಶದಿಂದ ಇಲ್ಲದಂತೆ ನೋಡಿಕೊಳ್ಳಬೇಕು. ಲಾಲಾರಸ ಸಂಗ್ರಹವಾಗುವುದನ್ನು ತಡೆಯಲು ಪೆಟ್ರೋಲಿಯಂ ಜೆಲ್ಲಿ ಅಥವಾ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.
  • ಚರ್ಮದ ಕಿರಿಕಿರಿ ಮತ್ತು ಅಲರ್ಜಿಗಳಿಂದ ದೂರವಿರಿ.
  • ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ.
  • ನಿಮ್ಮ ತುಟಿಗಳು ಒಣಗದಂತೆ ನೋಡಿಕೊಳ್ಳಿ.
  • ತಂಬಾಕಿನಿಂದ ದೂರವಿರಿ.
  • ಬಿಸಿಲು, ಶೀತ ಗಾಳಿಯಿಂದ ದೂರವಿರಿ.
  • ಅವಧಿ ಮೀರಿದ ಸೌಂದರ್ಯವರ್ಧಕಗಳನ್ನು ಬಳಸಬೇಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com