
ಪುಟ್ಟ ಮಕ್ಕಳು ತುಂಬಾ ವಿಚಿತ್ರವಾಗಿ ವರ್ತಿಸುವಾಗ, ಕಿವುಡು, ಮಾತು ಬಾರದೆ ಇರುವುದು ಅಥವಾ ತುಂಬಾ ಆಲಸಿಯಾಗಿದ್ದರೆ ಅದನ್ನು ಕಡೆಗಣಿಸಬಾರದು. ಪೋಷಕರು ಮಕ್ಕಳಲ್ಲಾಗುವ ಬದಲಾವಣೆಗಳ ಬಗ್ಗೆ ತದೇಕ ಚಿತ್ತದಿಂದ ಗಮನಹರಿಸಬೇಕು. ಏಕೆಂದರೆ ಈ ಬದಲಾವಣೆಗಳು ಅಡೆನಾಯ್ಡಿಟಿಸ್ ಕಾರಣವಾಗಿರುತ್ತದೆ.
ಗಂಟಲಿನ ಹಿಂದಿನ ಭಾಗದಲ್ಲಿ ಟಾನ್ಸಿಲ್ ಮತ್ತು ಅಡೆನಾಯ್ಡ್ಸ್ ಗ್ರಂಥಿಗಳು ಇದ್ದು, ಮೂಗಿನ ನೇರ ಕೆಳಭಾಗದಲ್ಲಿ ಇದೆ. ಈ ಗ್ರಂಥಿಗಳು ಮಕ್ಕಳ ಪ್ರತಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ವಿವಿಧ ರೀತಿಯ ಸೋಂಕಿನಿಂದ ಹೋರಾಡಲು ಇದು ತುಂಬಾ ಸಹಕಾರಿ ಆಗಿರುವುದು.
ಮಕ್ಕಳಲ್ಲಿ ಅಡೆನಾಯ್ಡ್ಸ್ ಬಿಳಿ ಕೋಶಗಳ ಮತ್ತು ಪ್ರತಿರೋಧಕಗಳನ್ನು ಸೃಷ್ಟಿ ಮಾಡುವುದು. ಇವುಗಳು ಗಾಳಿಯಲ್ಲಿ ಬರುವಂತಹ ಸೋಂಕಿನ ವಿರುದ್ಧ ಹೋರಾಡುವುದು. ವಯಸ್ಸಾಗುತ್ತಿರುವಂತೆ ಅಡೆನಾಯ್ಡ್ಸ್ ಗ್ರಂಥಿಗಳು ಹಾಗೆ ಸಂಕುಚಿತವಾಗುವುದು.
ಇದನ್ನೂ ಓದಿ: ಸ್ತನ್ಯಪಾನದಿಂದ ಪ್ರಸವಾನಂತರದ ಖಿನ್ನತೆ ದೂರ!
ಕೆಲವು ಮಕ್ಕಳಲ್ಲಿ ಅಡೆನಾಯ್ಡ್ ತುಂಬಾ ದೊಡ್ಡದಾಗಿರುವುದು. ಇದನ್ನು ದೀರ್ಘಕಾಲಿಕ ಸೋಂಕು ಕಾಡದಂತೆ ತಡೆಯಲು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗುತ್ತದೆ. ಮಕ್ಕಳಲ್ಲಿ ನಿದ್ರಾಹೀನತೆಗೆ ಉಬ್ಬಿರುವಂತಹ ಅಡೆನಾಯ್ಡ್ ಪ್ರಮುಖ ಕಾರಣವಾಗಿದೆ.
ಅಡೆನಾಯ್ಡ್ ಉಬ್ಬಿಕೊಂಡರೆ, ಅದರಿಂದ ವಾಯುನಾಳವು ಬ್ಲಾಕ್ ಆಗಿ, ಉಸಿರಾಟಕ್ಕೆ ತೊಂದರೆ ಆಗುವುದು. ಇದರಿಂದಾಗಿ ಮಕ್ಕಳಲ್ಲಿ ನಿದ್ರಾಹೀನತೆ ಸಮಸ್ಯೆಯು ಕಾಡಬಹುದು ಹಾಗೂ ಅವರು ಶೈಕ್ಷಣಿಕ ವಿಷಯದಲ್ಲಿ ಹಿಂದುಳಿಯಬಹುದು. ಮಕ್ಕಳಲ್ಲಿ ಅತಿಯಾಗಿ ನಿದ್ರಾಹೀನತೆ ಸಮಸ್ಯೆಯು ಕಂಡುಬರುತ್ತಲಿದ್ದರೆ, ಆಗ ನೀವು ಈ ಅಂಶಗಳನ್ನು ಗಮನಿಸಿ.
ಮಕ್ಕಳಿಗೆ ಕಾಡುವ ಸಮಸ್ಯೆಗಳು...
ಪತ್ತೆ ಮಾಡುವುದು ಹೇಗೆ?
ಮಕ್ಕಳಲ್ಲಿ ಅಡೆನಾಯ್ಡ್ ಹಿಗ್ಗುವುದು ಒಂದುವರೆ ವಯಸ್ಸಿನಲ್ಲಿ ಆರಂಭವಾಗುವುದು. ಮಕ್ಕಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡುಬರುತ್ತಲಿದ್ದರೆ, ಆಗ ಪೋಷಕರು ಸರಿಯಾಗಿ ಎಕ್ಸ್ ರೇ ಮಾಡಬೇಕು ಮತ್ತು ಇದರಿಂದ ಅಡೆನಾಯ್ಡಿಟಿಸ್ ಸರಿಯಾಗಿ ಪತ್ತೆ ಮಾಡಬಹುದು.
ಅಡೆನಾಯ್ಡಿಟಿಸ್ಗೆ ಕಾರಣವೇನು?
ಸಾಮಾನ್ಯವಾಗಿ ಅಡೆನಾಯ್ಡ್ ಸೋಂಕಿನಿಂದ ಉಂಟಾಗುತ್ತವೆ. ಇದು ಮಕ್ಕಳಲ್ಲಿ ಎರಡು ವರ್ಷಗಳ ವಯಸ್ಸಿನಲ್ಲಿ ಕಾಣಿಸಿಕೊಂಡು 8 ವರ್ಷಗಳ ನಂತರ ಕಡಿಮೆಯಾಗುತ್ತವೆ. ಸಮಸ್ಯೆಗಳು ದೀರ್ಘಕಾಲಿಕವಾಗಿದ್ದರೆ, ಇದು ಸಮಸ್ಯೆಯಾಗಿ ತಲೆದೋರಲಿವೆ.
ಅಡೆನಾಯ್ಡಿಟಿಸ್ಗೆ ಯಾರಲ್ಲಿ ಹೆಚ್ಚು ಕಂಡು ಬರುತ್ತದೆ?
ಚಿಕಿತ್ಸೆ ಹೇಗೆ?
ಸಾಮಾನ್ಯವಾಗಿ ಎಂಟು ವರ್ಷ ವಯಸ್ಸಿನಲ್ಲಿ ಈ ಸಮಸ್ಯೆ ದೂರಾಗುತ್ತದೆ. ಉತ್ತಮ ನೈರ್ಮಲ್ಯವನ್ನು ಕಾಪಾಡುವುದರಿಂದ ಪುನರಾವರ್ತಿತ ಸೋಂಕನ್ನು ತಡೆಯಬಹುದು. ಸೌಮ್ಯ ಲಕ್ಷಗಳುಳ್ಳ ಮಕ್ಕಳಿಕೆ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ವೈದ್ಯರು ಇದಕ್ಕೆ ಮೂಗಿನ ಮೂಲಕ ನೀಡುವಂತಹ ಸ್ಟಿರಾಯ್ಡ್ ನ್ನು ಸೂಚಿಸಬಹುದು. ಇದರಿಂದ ಸ್ವಲ್ಪ ಪರಿಹಾರ ಸಿಗುತ್ತದೆ.. ಮೂರನೇ ಮತ್ತು ನಾಲ್ಕನೇ ದರ್ಜೆಯ ಅಡೆನಾಯ್ಡ್ಸ್ ಗೆ ಶಸ್ತ್ರಚಿಕಿತ್ಸೆಯು ಬೇಕಾಗುತ್ತದೆ.
Advertisement