ದಿನದ ಆರಂಭದಲ್ಲೇ ನಿಶಕ್ತಿ ಎನಿಸುತ್ತದೆಯೇ? ಹಾಗಾದರೆ ನಿಮಗೆ ಬೇಕು ಎನರ್ಜಿ ಬೂಸ್ಟರ್! ಇಲ್ಲಿದೆ ಕೆಲವು ಸಲಹೆ...

ಬೆಳಿಗ್ಗೆ ನಿದ್ರೆಯಿಂದ ಯಾವ ರೀತಿ ಏಳುತ್ತೀರಿ ಎಂಬುದು ನಿಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ಸಾಕಷ್ಟು ಮಂದಿ ಬೆಳಿಗ್ಗೆ ಎದ್ದ ಕೂಡಲೇ ನಿಶಕ್ತಿ ಭಾಸವಾಗುತ್ತದೆ ಎಂದು ಹೇಳುವುದುಂಟು. ಮಲಗುವಾಗ ಇದ್ದ ನಿಶಕ್ತಿ ಏಳುವಾಗ ಇನ್ನೂ ಹೆಚ್ಚಾಗಿದೆ ಎಂದೆನಿಸುವುದೂ ಉಂಟು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಿಗ್ಗೆ ನಿದ್ರೆಯಿಂದ ಯಾವ ರೀತಿ ಏಳುತ್ತೀರಿ ಎಂಬುದು ನಿಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ನಮ್ಮ ದಿನ ಉತ್ತಮವಾಗಿರಬೇಕೆಂದರೆ, ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಬೇಕು. ಸಾಕಷ್ಟು ಮಂದಿ ಬೆಳಿಗ್ಗೆ ಎದ್ದ ಕೂಡಲೇ ನಿಶಕ್ತಿ ಭಾಸವಾಗುತ್ತದೆ ಎಂದು ಹೇಳುವುದುಂಟು. ಮಲಗುವಾಗ ಇದ್ದ ನಿಶಕ್ತಿ ಏಳುವಾಗ ಇನ್ನೂ ಹೆಚ್ಚಾಗಿದೆ ಎಂದೆನಿಸುವುದೂ ಉಂಟು.

ಈ ಸಮಸ್ಯೆ ದೂರಾಗಬೇಕೆಂದರೆ ಆರೋಗ್ಯಕರ ಜೀವನಶೈಲಿ ಪಾಲನೆ ಮಾಡುವುದು ಮುಖ್ಯವಾಗುತ್ತದೆ. ಹಾಗಾಗಿ ನಿಮ್ಮ ಮನಸ್ಸು ಹಾಗೂ ದೇಹದ ಉತ್ತೇಜಿಸಲು ನಿಮಗೆ ಸಹಾಯ ಮಾಡುವ 10 ಆರೋಗ್ಯಕರ ಬೆಳಗಿನ ಅಭ್ಯಾಸಗಳು ಇಲ್ಲಿವೆ. ಆರೋಗ್ಯವನ್ನು ಉತ್ತೇಜಿಸುವ ಕೆಲ ಸಲಹೆಗಳು ಇಂತಿವೆ...

ಹೈಡ್ರೇಟ್


ರಾತ್ರಿಯ ನಿದ್ದೆಯ ನಂತರ ದೇಹವು ಸಾಕಷ್ಟು ತೇವಾಂಶವನ್ನು ಕಳೆದುಕೊಂಡಿರುತ್ತದೆ. ಆದ್ದರಿಂದ ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವ ಮೂಲಕ ಪ್ರಾರಂಭಿಸಿ. ಈ ನೀರಿಗೆ ಬೇಕೆನಿಸಿದರೆ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು.

ಬಾದಾಮಿ

ದೇಹ ಶಕ್ತಿಯುತವಾಗಿರಲು ಬಾದಾಮಿ ಅತ್ಯುತ್ತಮ ಆಹಾರ ಪದಾರ್ಥ. ಬಾದಾಮಿಯನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಸೇವನೆ ಮಾಡಿದರೆ, ನಿಮ್ಮ ದೇಹ ದಿನವಿಡೀ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ಕೇವಲ ತಿಂಡಿ ಎಂದುಕೊಳ್ಳಬೇಡಿ. ಇದು ಪೌಷ್ಠಿಕಾಂಶದ ಶಕ್ತಿ ಕೇಂದ್ರವಾಗಿದೆ. ಇದರಲ್ಲಿ ಅಸಂಖ್ಯಾತ ಅಗತ್ಯ ಪೋಷಕಾಂಶಗಳಿವೆ. ಹೀಗಾಗಿ ಇದು ನಿಮ್ಮ ದೇಹಕ್ಕೆ ನಿರಂತರ ಶಕ್ತಿ ನೀಡುತ್ತದೆ. ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ನಿಮ್ಮ ದೇಹದ ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಪ್ರೋಟೀನ್ ಯುಕ್ತ ಆಹಾರ


ಬೆಳಗಿನ ಸಂದರ್ಭದಲ್ಲಿ ಪ್ರೋಟೀನ್ ಯುಕ್ತ ಆಹಾರ ಸೇವನೆ ಬಹಳ ಮುಖ್ಯವಾಗುತ್ತದೆ. ಬೆಳಗಿನ ಆಹಾರದಲ್ಲಿ ಮೊಟ್ಟೆ, ಮೊಸರು, ಬಾದಾಮಿ ಸ್ಮೂಥಿ ಅಂತಹ ಆಹಾರಗಳನ್ನು ಸೇರ್ಪಡೆಗೊಳಿಸಿ. ಇದು ನಿಮ್ಮ ದೇಹದಲ್ಲಿ ದಿನವಿಡೀ ಸೂಪರ್ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ.

ಹಣ್ಣು-ತರಕಾರಿ

ಆಹಾರ ಪದಾರ್ಥಗಳಲ್ಲಿ ಹೆಚ್ಚೆಚ್ಚು ಹಣ್ಣು, ತರಕಾರಿ ಹಾಗೂ ಧಾನ್ಯಗಳಿರುವಂತ ನೋಡಿಕೊಳ್ಳಿ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ಬಳಕೆ ಬೇಡ


ಮೊದಲು ಎದ್ದ ಕೂಡಲೇ ಮೊಬೈಲ್ ಬಳಸುವ ಅಭ್ಯಾಸ ಬಿಟ್ಟು ಬಿಡಿ. ಬೆಳಗೆ ಎದ್ದ ತಕ್ಷಣ ಮೊಬೈಲ್ ಬಳಸುವ ಅಭ್ಯಾಸ ಸಾಕಷ್ಟು ಜನರಿಗಿರುತ್ತದೆ. ಇದು ನಿಮ್ಮ ಕಣ್ಣಿನ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ

ನಿಮ್ಮನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ಯೋಗಾಭ್ಯಾಸ ಅಗತ್ಯವಾಗಿದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದಿಷ್ಟು ಹೊತ್ತು ಸಮಯವನ್ನು ಯೋಗಾಸನ ಮಾಡಲು ಮೀಸಲಿಡಿ. ಇದು ನಿಮ್ಮನ್ನು ಒತ್ತಡದಿಂದ ಹೊರತರಲು ಸಹಾಯಮಾಡುತ್ತದೆ.

ವ್ಯಾಯಾಮ


ತೂಕವನ್ನು ಕಳೆದುಕೊಳ್ಳಲು ಮಾತ್ರ ವ್ಯಾಯಾಮ ಮಾಡಲು ಯೋಚಿಸಬೇಡಿ. ಬೆಳಿಗ್ಗೆ ವ್ಯಾಯಮವು ನಿಮ್ಮ ದೇಹವನ್ನು ಚುರುಕಿನಿಂದ ಇರುವಂತೆ ಮಾಡುತ್ತದೆ. ಜೊತೆಗೆ ನಿಮ್ಮನ್ನು ಮಾನಸಿಕವಾಗಿ ಚುರುಕಿನಿಂದ ಇರುವಂತೆ ಮಾಡುತ್ತದೆ.

ಸೂರ್ಯನ ಕಿರಣ

ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕೋಣೆಯ ಕಿಟಕಿಯ ಪರದೆಗಳನ್ನು ತೆರೆಯಿರಿ. ಇದರಿಂದ ನಿಮ್ಮ ಕೋಣೆಯು ಬೆಳಗುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಆರೋಗ್ಯದಿಂದಿಡಲು ಸಹಾಯಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com