ನಿಮ್ಮ ಮಕ್ಕಳು "Smartphone" ಹೆಚ್ಚಾಗಿ ಬಳಸುತ್ತಿದ್ದಾರಾ..? ನೆನಪಿನ ಶಕ್ತಿ ಕುಗ್ಗುತ್ತದೆ ಎಚ್ಚರ...!

ಗಂಟೆಗಟ್ಟಲೆ ಫೋನ್ ನೋಡುವುದರಿಂದ ಹಾಗೂ ಗಮನದ ಅವಧಿ ಕಡಿಮೆಯಾಗುತ್ತಿರುವುದರಿಂದ ಅನೇಕ ಮಕ್ಕಳು ತಾಳ್ಮೆಯಿಂದಿರುವುದು ಅಥವಾ ದೀರ್ಘಕಾಲದವರೆಗೆ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇರುತ್ತದೆ.‌ ಸ್ಮಾರ್ಟ್‌ ಫೋನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದಾರೆ. ಬೆಳಗ್ಗೆ ಬೇಗ ಎದ್ದೇಳಲು ಅಲರಾಂನಿಂದ ಹಿಡಿದು ರಾತ್ರಿ ಮಲಗುವ ತನಕ ಪ್ರತಿಯೊಂದು ವಿಚಾರಕ್ಕೂ ಸ್ಮಾರ್ಟ್ ಫೋನ್ ಅವಲಂಬಿಸಿದ್ದಾರೆ. ಸ್ಮಾರ್ಟ್ ಫೋನ್ ಬಳಕೆಯಿಂದ ಎಷ್ಟು ಅನುಕೂಲಗಳಾಗುವುದೋ ಅಷ್ಟೇ, ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪ್ರಮುಖವಾಗಿ ಮಕ್ಕಳಲ್ಲಿ.

ಈ ಸ್ಮಾರ್ಟ್ ಫೋನ್ ಇಂದು ಡ್ರಗ್ಸ್ ನಷ್ಟೇ ಅಪಾಯಕಾರಿಯಾಗಿ ಬಿಟ್ಟಿದೆ. ಸ್ಮಾರ್ಟ್ ಫೋನ್ ಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮಕ್ಕಳಲ್ಲಿ ಸ್ಮರಣ ಶಕ್ತಿ ಕುಗ್ಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ನಿರಂತರ ಸ್ಮಾರ್ಟ್‌ಫೋನ್ ಬಳಕೆಯಿಂದಾಗಿ ಮೆದುಳಿನ ನೈಸರ್ಗಿಕ ಸ್ಮರಣಶಕ್ತಿಯನ್ನು ನಿರ್ಮಿಸುವ ಮತ್ತು ಉಳಿಸಿಕೊಳ್ಳುವ ಸಾಮರ್ಥ್ಯ ದುರ್ಬಲಗೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಗಂಟೆಗಟ್ಟಲೆ ಫೋನ್ ನೋಡುವುದರಿಂದ ಹಾಗೂ ಗಮನದ ಅವಧಿ ಕಡಿಮೆಯಾಗುತ್ತಿರುವುದರಿಂದ ಅನೇಕ ಮಕ್ಕಳು ತಾಳ್ಮೆಯಿಂದಿರುವುದು ಅಥವಾ ದೀರ್ಘಕಾಲದವರೆಗೆ ಕಾರ್ಯಗಳ ಮೇಲೆ ಕೇಂದ್ರೀಕರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆಂದು ತಜ್ಞರು ಹೇಳಿದ್ದಾರೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ಮಕ್ಕಳ ನರವಿಜ್ಞಾನದ ಸಲಹೆಗಾರ ಡಾ. ರವಿ ಕುಮಾರ್ ಸಿಪಿ ಅವರು ಮಾತನಾಡಿ, ಸ್ಮಾರ್ಟ್‌ಫೋನ್ ಬಳಕೆಯು ಮಕ್ಕಳಲ್ಲಿ ಡಿಜಿಟಲ್ ಬುದ್ಧಿಮಾಂದ್ಯತೆಯನ್ನು ಸೃಷ್ಟಿಸುತ್ತಿದೆ. ಮರೆವು, ಏಕಾಗ್ರತೆಯಿಲ್ಲದಂತಾಗುವುದು, ಪಾಠ ಅಥವಾ ಇತರೆ ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವಲ್ಲಿ ಸಮಸ್ಯೆ, ಚಿಂತನೆಯಲ್ಲಿ ತಡಮಾಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಹೇಳಿದ್ದಾರೆ.

File photo
ದೀರ್ಘಕಾಲ Earphone ಹಾಕಿಕೊಳ್ಳುತ್ತೀರಾ? ಕಿವಿಗೆ Fungal infections ಬರಬಹುದು ಎಚ್ಚರ!

ಆತೀ ಹೆಚ್ಚಿನ ವಿಡಿಯೋ ವೀಕ್ಷಣೆಯು ಮೆದುಳಿಗೆ ಗಮನಿಸುವ ಹಾಗೂ ಸ್ಮರಣೆಯಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ತಂತ್ರಜ್ಞಾನದ ಮಾನ್ಯತೆ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ನಂತರ ಡಿಜಿಟಲ್ ಬಳಕೆ ಹೆಚ್ಚಾಗಿ ಹೋಗಿದೆ ಎಂದು ತಿಳಿಸಿದ್ದಾರೆ.

ಕ್ಲಿನಿಕಲ್ ಸೈಕಾಲಜಿ ಪ್ರಾಧ್ಯಾಪಕ ಮತ್ತು ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ (SHUT) ಕ್ಲಿನಿಕ್‌ನ ನಿರ್ದೇಶಕ ಡಾ. ಮನೋಜ್ ಕುಮಾರ್ ಶರ್ಮಾ ಅವರು ಮ್ತನಾಡಿ, ಇಂದು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗುತ್ತಿದ್ದು, ಇದರಿಂದ ಮಕ್ಕಳ ಮೆದುಳಿಗೆ ನೈಸರ್ಗಿಕವಾಗಿ ನೆನಪಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಸಿಗದಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.

"ಸ್ಮರಣೆಯ ವರ್ಧನೆಯನ್ನು ಹಲವು ವಿಧಗಳಾಗಿ ವಿಂಗಡಿಸಲಾಗಿದೆ. ಮೊದಲ ಪದರವು ಸಂವೇದನಾ ಸ್ಮರಣೆಯಾಗಿದೆ, ಇದು ಪ್ರಪಂಚದೊಂದಿಗಿನ ನೇರ ಸಂವಹನದಿಂದ ಬರುತ್ತದೆ. ಸ್ಪರ್ಶಿಸುವುದು, ನೋಡುವುದು, ಕೇಳುವುದು ಮತ್ತು ನೈಜ ಸಮಯದಲ್ಲಿ ವಿಷಯಗಳನ್ನು ಅನುಭವಿಸುವುದು. ಈ ಮಾಹಿತಿಯನ್ನು ಸುಮಾರು ಒಂದು ಅಥವಾ ಎರಡು ದಿನಗಳವರೆಗೆ ಉಳಿಸಿಕೊಂಡಾಗ, ಅದು ಅಲ್ಪಾವಧಿಯ ಸ್ಮರಣೆಗೆ ಚಲಿಸುತ್ತದೆ. ಪುನರಾವರ್ತಿತ ಸ್ಮರಣೆಯು ದೀರ್ಘಾವಧಿಯ ಸ್ಮರಣೆಯಾಗುತ್ತದೆ, ಇದು ನಮಗೆ ಫೋನ್ ಸಂಖ್ಯೆಗಳು, ನಿರ್ದೇಶನಗಳು, ಮುಖಗಳು ಅಥವಾ ಕೌಶಲ್ಯಗಳನ್ನು ವರ್ಷಗಳವರೆಗೆ ನೆನಪಿಟ್ಟುಕೊಳ್ಳಲು ಅನುವು ಮಾಡಿಕೊಡುತ್ತದೆ.

ಆದರೆ ಈ ಪ್ರಕ್ರಿಯೆಗೆ ಸಮಯದ ಅಗತ್ಯವಿರುತ್ತದೆ. ಫೋನ್‌ಗಳ ಮೇಲೆ ನಿರಂತರ ಅವಲಂಬನೆಯಿಂದಾಗಿ ಈ ಪ್ರಕ್ರಿಯೆಗೆ ಅಡ್ಡಿಯುಂಟಾಗುತ್ತಿದೆ. ಉದಾಹರಣೆಗೆ ಯಾವುದೇ ಒಂದು ವಸ್ತುವನ್ನು ನೋಡುವ ಅಥವಾ ಗಮನಿಸಿ ನೆನಪಿಟ್ಟುಕೊಳ್ಳುವ ಬದಲು ಫೋಟೋ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತಾರೆ. ಬಳಿಕ ಅದನ್ನು ಮರೆತುಬಿಡುತ್ತಾರೆ. ಮೆದುಳಿಗೆ ಕೆಲಸ ಕೊಡುವ ಬದಲು ಮೊಬೈಲ್ ಮೊಮೆರಿಗೆ ಕೆಲಸ ಕೊಡುತ್ತಿದ್ದಾರೆ. ಇದು ಮಿದುಳಿನ ಶಕ್ತಿಯನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.

ಇಂದು ಮಕ್ಕಳು ತಮ್ಮ ಪೋಷಕರ ಫೋನ್ ಸಂಖ್ಯೆಗಳನ್ನೂ ಕೂಡ ನೆನಪಿಟ್ಟುಕೊಳ್ಳುವಲ್ಲಿ ಅಸಮರ್ಥರಾಗುತ್ತಿದ್ದಾರೆ. ಒಂದೇ ಮಾರ್ಗದಲ್ಲಿ ಹಲವು ಬಾರಿ ಪ್ರಯಾಣಿಸಿದರೂ ಅವರಿಗೆ ನೆನಪಿಲ್ಲದಂತಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com