UVA, UVB ಕಿರಣಗಳ ಅಪಾಯ: ಬಿಸಿಲಿನಲ್ಲಿದ್ದಾಗಷ್ಟೇ ಅಲ್ಲ, ಮನೆಯೊಳಗಿದ್ದಾಗಲೂ ಸನ್‌ಸ್ಕ್ರೀನ್ ಹಚ್ಚಬೇಕು..!

ನಿಜವಾಗಿಯೂ ಚರ್ಮಕ್ಕೆ ಹಾನಿ ಮಾಡುವುದು ಸೂರ್ಯನ ಬೆಳಲ್ಲ, ಅದರೊಳಗಿನ ಅಲ್ಟ್ರಾವಯೊಲೆಟ್ (UV) ಕಿರಣಗಳು. ಇವು ಮಾನವನ ಕಣ್ಣಿಗೆ ಕಾಣಿಸದಿದ್ದರೂ, ದಿನನಿತ್ಯ ನಮ್ಮ ಚರ್ಮವನ್ನು ಹಾನಿಗೊಳಿಸುತ್ತವೆ. ವಿಶೇಷವಾಗಿ UVA ಮತ್ತು UVB ಎಂಬ ಎರಡು ವಿಧದ ಕಿರಣಗಳು ಚರ್ಮದ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿವೆ.
file photo
ಸಂಗ್ರಹ ಚಿತ್ರ
Updated on

ಸೂರ್ಯನಿಂದ ರಕ್ಷಣೆ ಪಡೆಯಲು ಸನ್‌ಸ್ಕ್ರೀನ್ ಹಚ್ಚಬೇಕು ಎಂಬುದು ಸಾಮಾನ್ಯ ಸಲಹೆ. ಆದರೆ, ಬಹಳ ಮಂದಿ “ಮನೆಯೊಳಗಿದ್ದಾಗ ಏಕೆ?” ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಇದು ದೊಡ್ಡ ತಪ್ಪುಗ್ರಹಿಕೆಯಾಗಿದೆ.

ನಿಜವಾಗಿಯೂ ಚರ್ಮಕ್ಕೆ ಹಾನಿ ಮಾಡುವುದು ಸೂರ್ಯನ ಬೆಳಲ್ಲ, ಅದರೊಳಗಿನ ಅಲ್ಟ್ರಾವಯೊಲೆಟ್ (UV) ಕಿರಣಗಳು. ಇವು ಮಾನವನ ಕಣ್ಣಿಗೆ ಕಾಣಿಸದಿದ್ದರೂ, ದಿನನಿತ್ಯ ನಮ್ಮ ಚರ್ಮವನ್ನು ಹಾನಿಗೊಳಿಸುತ್ತವೆ. ವಿಶೇಷವಾಗಿ UVA ಮತ್ತು UVB ಎಂಬ ಎರಡು ವಿಧದ ಕಿರಣಗಳು ಚರ್ಮದ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿವೆ.

UVA ಕಿರಣಗಳು ಚರ್ಮದ ಆಳದ ಪದರಗಳಿಗೆ ತಲುಪುತ್ತವೆ. ಇವು ತಕ್ಷಣದ ಸುಡುವಿಕೆಯಂತೆ ಕಾಣಿಸದಿದ್ದರೂ, ನಿಧಾನವಾಗಿ ಚರ್ಮದ ಕೊಲಾಜನ್‌ನ್ನು ಹಾನಿಗೊಳಿಸುತ್ತವೆ. ಇದರ ಪರಿಣಾಮವಾಗಿ ಚರ್ಮ ಮುದುರಿದಂತೆ ಕಾಣುವುದು, ಕಪ್ಪು ಚುಕ್ಕೆಗಳು ಮೂಡುತ್ತವೆ.

ಈ ಕಿರಣಗಳನ್ನು “ಏಜಿಂಗ್ ರೇಸ್” ಎಂದೂ ಕರೆಯಲಾಗುತ್ತದೆ, ಏಕೆಂದರೆ ಇವು ವಯಸ್ಸಾದ ಚರ್ಚಮವನ್ನು ಸೃಷ್ಟಿಸುತ್ತವೆ. ಮುಖ್ಯವಾಗಿ, ಈ UVA ಕಿರಣಗಳು ಕಿಟಕಿಯ ಗಾಜಗಳನ್ನೂ ದಾಟಿ ಮನೆ ಪ್ರವೇಶಿಸುತ್ತವೆ. ಅಂದರೆ, ನೀವು ಮನೆಯೊಳಗಿದ್ದರೂ ನಿಮ್ಮ ಚರ್ಮ ಸಂಪೂರ್ಣ ಸುರಕ್ಷಿತವಾಗಿಲ್ಲ ಎಂದರ್ಥ.

File photo
ಸಂಗ್ರಹ ಚಿತ್ರ

ಇನ್ನೊಂದೆಡೆ UVB ಕಿರಣಗಳು ಚರ್ಮದ ಮೇಲ್ಮೈಗೆ ನೇರ ಪರಿಣಾಮ ಬೀರುತ್ತವೆ. ಇವು ಸನ್‌ಬರ್ನ್‌ಗೆ ಪ್ರಮುಖ ಕಾರಣವಾಗುತ್ತವೆ. ಚರ್ಮ ಕೆಂಪಾಗುವುದು, ಸುಡುವ ಅನುಭವಾಗುತ್ತದೆ. ಸಾಮಾನ್ಯವಾಗಿ ಬಿಸಿಲಿನ ದಿನಗಳಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ, ಬಿಸಿಲು ಇಲ್ಲದ ದಿನಗಳಲ್ಲಿ ಕೂಡ UVB ಕಿರಣಗಳು ಪರಿಣಾಮ ಬೀರುತ್ತವೆ.

ಮೋಡಗಳು ಸೂರ್ಯನ ಬೆಳಕನ್ನು ಕಡಿಮೆ ಮಾಡಬಹುದು, ಆದರೆ UV ಕಿರಣಗಳನ್ನು ಸಂಪೂರ್ಣವಾಗಿ ತಡೆಯುವುದಿಲ್ಲ.

ಸಂಶೋಧನೆಗಳು ಸೂಚಿಸುವಂತೆ, ಸುಮಾರು 70ರಿಂದ 80 ಶೇಕಡಾ UV ಕಿರಣಗಳು ಮೋಡಗಳ ಮೂಲಕವೂ ಭೂಮಿಗೆ ತಲುಪುತ್ತವೆ. ಇದರಿಂದ ಮೋಡದ ದಿನಗಳಲ್ಲೂ ಸಹ ಚರ್ಮಕ್ಕೆ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ನಾವು ನೆರಳಿನಲ್ಲಿ ಇದ್ದರೂ ಕೂಡ ಸಂಪೂರ್ಣ ಸುರಕ್ಷಿತವಾಗಿರುವುದಿಲ್ಲ.ನೀವು ಕಿಟಕಿಯ ಬಳಿ ಕುಳಿತು ಕೆಲಸ ಮಾಡುತ್ತಿದ್ದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಅಥವಾ ಬೆಳಕು ಒಳಬರುವ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ, ಚರ್ಮ ನಿಧಾನವಾಗಿ ಹಾನಿಗೊಳಗಾಗುತ್ತದೆ. ಇದರಿಂದ ಒಂದು ಭಾಗದ ಚರ್ಮ ಹೆಚ್ಚು ಕಪ್ಪಾಗುವುದು, ಪಿಗ್ಮೆಂಟೇಶನ್ ಹೆಚ್ಚಾಗುವುದು ಕಂಡುಬರುತ್ತದೆ.

file photo
'ಸನ್ ಸ್ಕ್ರೀನ್' ಬಳಸುತ್ತೀರಾ...? ಹಾಗಿದ್ದರೆ ಇದನ್ನು ಓದಿ...

ಸನ್‌ಸ್ಕ್ರೀನ್ ಬಳಸದಿದ್ದರೆ ಅದರ ಪರಿಣಾಮಗಳು ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಯಾವುದೇ ಬದಲಾವಣೆ ಗೋಚರಿಸದಿದ್ದರೂ, ಕೆಲವೇ ವರ್ಷಗಳಲ್ಲಿ ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ದೀರ್ಘಕಾಲದಲ್ಲಿ ಚರ್ಮದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸನ್‌ಸ್ಕ್ರೀನ್ ಬಳಕೆ ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅತ್ಯಗತ್ಯ.

ಸನ್‌ಸ್ಕ್ರೀನ್ ಆಯ್ಕೆ-ಬಳಕೆ ಹೇಗೆ..?

UVA, UVB ಕಿರಣಗಳ ಅಪಾಯದಿಂದ ದೂರ ಉಳಿಯಬೇಕೆಂದರೆ ಸರಿಯಾದ ಸನ್‌ಸ್ಕ್ರೀನ್ ಬಳಕೆ ಕೂಡ ಬಹಳ ಮುಖ್ಯ.

ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಅನ್ನು ಪ್ರತಿದಿನ ಬೆಳಗ್ಗೆ ಬಳಸಬೇಕು. ಹೊರಗೆ ಹೋಗುವ 15–20 ನಿಮಿಷಗಳ ಮೊದಲು ಹಚ್ಚಬೇಕು, ಇದರಿಂದ ಅದು ಚರ್ಮದಲ್ಲಿ ಚೆನ್ನಾಗಿ ಹೀರಿಕೊಳ್ಳುತ್ತದೆ. ಒಂದು ಬಾರಿ ಹಚ್ಚಿದರೆ ಸಾಕು ಎಂದು ಭಾವಿಸಬಾರದು. ಪ್ರತಿ ಎರಡು ಅಥವಾ ಮೂರು ಗಂಟೆಗೆ ಮರುಹಚ್ಚುವುದು ಉತ್ತಮ, ವಿಶೇಷವಾಗಿ ಬೆವರು ಅಥವಾ ನೀರಿನ ಸಂಪರ್ಕವಾದ ನಂತರ. ಮುಖ ಮಾತ್ರವಲ್ಲದೆ ಕುತ್ತಿಗೆ, ಕೈಗಳು, ಕಿವಿಗಳಿಗೆ ಹಚ್ಚುವುದು ಅವಶ್ಯಕ.

File photo
ಸಂಗ್ರಹ ಚಿತ್ರ

ಇದರ ಜೊತೆಗೆ, ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡುವುದು ಸಹ ಚರ್ಮದ ರಕ್ಷಣೆಗೆ ಸಹಾಯಕ. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು, ನೆರಳಿನಲ್ಲಿ ಹೆಚ್ಚು ಸಮಯ ಕಳೆಯುವುದು, ಲೈಟ್ ಬಣ್ಣದ ಮತ್ತು ಸಂಪೂರ್ಣ ಬಟ್ಟೆ ಧರಿಸುವುದು, ಟೋಪಿ ಮತ್ತು ಸನ್‌ಗ್ಲಾಸ್ ಬಳಸುವುದು. ಜೊತೆಗೆ ಹೆಚ್ಚು ನೀರು ಕುಡಿಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಚರ್ಮವನ್ನು ಒಳಗಿನಿಂದಲೂ ಆರೋಗ್ಯವಾಗಿರಿಸುತ್ತದೆ.

ಒಟ್ಟಾರೆ ಹೇಳುವುದಾದರೆ, ಸೂರ್ಯನ ಬೆಳಕು ಕಾಣಿಸದಿದ್ದರೂ ಅದರ ಅಪಾಯ ಕಡಿಮೆಯಾಗುವುದಿಲ್ಲ. UVA ಮತ್ತು UVB ಕಿರಣಗಳು ನಮ್ಮ ದಿನನಿತ್ಯದ ಜೀವನದಲ್ಲೇ ಚರ್ಮವನ್ನು ಹಾನಿಗೊಳಿಸುತ್ತಿವೆ. ಆದ್ದರಿಂದ ಸನ್‌ಸ್ಕ್ರೀನ್ ಅನ್ನು ಕೇವಲ ಬಿಸಿಲಿನ ದಿನಗಳಲ್ಲಿ ಮಾತ್ರವಲ್ಲ, ಮನೆಯೊಳಗಿದ್ದಾಗಲೂ ಪ್ರತಿದಿನ ಬಳಸುವುದು ಅತ್ಯಗತ್ಯ. ಇದು ಒಂದು ಚಿಕ್ಕ ಅಭ್ಯಾಸವಾಗಿರಬಹುದು, ಆದರೆ ನಿಮ್ಮ ಚರ್ಮದ ಆರೋಗ್ಯವನ್ನು ದೀರ್ಘಕಾಲ ಕಾಪಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com