ಅಡುಗೆ ಮಾಡುವಾಗ ಎಣ್ಣೆ ಸಿಡಿಯುತ್ತಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!

Kitchen Hacks: ಅಡುಗೆ ಮನೆಯಲ್ಲಿ ಎಣ್ಣೆಯಲ್ಲಿ ಫ್ರೈ ಮಾಡುವಾಗ ಸಿಡಿದು ಕೈಗೆ ಕಾಲಿಗೆ ಬಿದ್ದು ಸುಟ್ಟ ಗಾಯವಾಗುವುದು ಸಾಮಾನ್ಯ. ವಿಶೇಷವಾಗಿ ಮೀನು, ಆಲೂಗಡ್ಡೆ ಅಥವಾ ತರಕಾರಿ ಹಾಕಿದಾಗ ಎಣ್ಣೆ ಜೋರಾಗಿ ಸಿಡಿಯುತ್ತದೆ. ಆದರೆ ಕೆಲವು ಟಿಪ್ಸ್ ಫಾಲೋ ಮಾಡಿದರೆ ಎಣ್ಣೆ ಸಿಡಿಯುವುದನ್ನು ಸುಲಭವಾಗಿ ತಡೆಯಬಹುದು.
Oil Splattering While Cooking
ಅಡುಗೆ ಮಾಡುವಾಗ ಎಣ್ಣೆ ಸಿಡಿಯುತ್ತಾ?
Updated on

Kitchen Hacks: ಅಡುಗೆ ಮನೆಯಲ್ಲಿ ಎಣ್ಣೆಯಲ್ಲಿ ಫ್ರೈ ಮಾಡುವಾಗ ಸಿಡಿದು ಕೈಗೆ ಕಾಲಿಗೆ ಬಿದ್ದು ಸುಟ್ಟ ಗಾಯವಾಗುವುದು ಸಾಮಾನ್ಯ. ವಿಶೇಷವಾಗಿ ಮೀನು, ಆಲೂಗಡ್ಡೆ ಅಥವಾ ಒದ್ದೆ ತರಕಾರಿ ಹಾಕಿದಾಗ ಎಣ್ಣೆ ಜೋರಾಗಿ ಸಿಡಿಯುತ್ತದೆ. ಇದರಿಂದ ಅಡುಗೆ ಮಾಡುವ ಮಜಾನೇ ಹೋಗುತ್ತದೆ. ಆದರೆ ಕೆಲವು ಸಣ್ಣ ಟಿಪ್ಸ್ ಫಾಲೋ ಮಾಡಿದರೆ ಎಣ್ಣೆ ಸಿಡಿಯುವುದನ್ನು ಸುಲಭವಾಗಿ ತಡೆಯಬಹುದು. ಅಡುಗೆ ಸುರಕ್ಷಿತವಾಗುತ್ತದೆ ಮತ್ತು ಕಿಚನ್ ಕೂಡ ಸ್ವಚ್ಛವಾಗಿರುತ್ತದೆ.

ಎಣ್ಣೆ ಬಿಸಿಯಾಗುವ ಮುನ್ನ...

ಎಣ್ಣೆ ಸಿಡಿಯಲು ಮುಖ್ಯ ಕಾರಣ ನೀರು. ಹೌದು, ಸಾಮಾನ್ಯವಾಗಿ, ನೀರು 100°C ನಲ್ಲಿ ಕುದಿಯುತ್ತದೆ, ಆದರೆ ಕಾದ ಎಣ್ಣೆ 180°C ಗಿಂತ ಹೆಚ್ಚು ಬಿಸಿಯಾಗಿರುತ್ತದೆ. ಹಾಗಾಗಿ, ತರಕಾರಿ ಅಥವಾ ಮಾಂಸದಲ್ಲಿರುವ ನೀರಿನಂಶ ಕಾದ ಎಣ್ಣೆಗೆ ಬಿದ್ದ ತಕ್ಷಣ ಹಬೆಯಾಗಿ ಬದಲಾಗುತ್ತದೆ. ಅದರಲ್ಲೂ, ನೀರು ಎಣ್ಣೆಗಿಂತ ತೂಕವಿರುವುದರಿಂದ ತಳಕ್ಕೆ ಹೋಗಿ, ಹಬೆಯಾಗಿ ಹೊರಬರಲು ಪ್ರಯತ್ನಿಸುವಾಗ ಎಣ್ಣೆಯನ್ನು ಮೇಲಕ್ಕೆ ಚಿಮ್ಮಿಸುತ್ತದೆ. ಹಾಗಾಗಿ, ಎಣ್ಣೆ ಸಿಡಿಯುವುದನ್ನು ತಡೆಯಲು ಅಡುಗೆಮನೆಯಲ್ಲಿ ಈ ಸರಳ ಟಿಪ್ಸ್ ಫಾಲೋ ಮಾಡಿ:

ಸ್ವಲ್ಪ ಉಪ್ಪು ಅಥವಾ ಅರಿಶಿನ ಹಾಕಿ:

ಎಣ್ಣೆ ಕಾದ ತಕ್ಷಣ, ಅದಕ್ಕೆ ತರಕಾರಿ ಅಥವಾ ಮಾಂಸ ಹಾಕುವ ಮುನ್ನ ಒಂದು ಚಿಟಿಕೆ ಉಪ್ಪು ಅಥವಾ ಅರಿಶಿನ ಪುಡಿ ಹಾಕಿ. ಇದು ಎಣ್ಣೆಯಲ್ಲಿರುವ ತೇವಾಂಶವನ್ನು ಹೀರಿಕೊಂಡು ಎಣ್ಣೆ ಸಿಡಿಯುವುದನ್ನು ತಡೆಯುತ್ತದೆ. ವಿಶೇಷವಾಗಿ ಮೀನು ಮತ್ತು ಈರುಳ್ಳಿ ಫ್ರೈ ಮಾಡುವಾಗ ಈ ಟಿಪ್ ತುಂಬಾ ಕೆಲಸ ಮಾಡುತ್ತದೆ. ಇದರಿಂದ ರುಚಿ ಕೂಡ ಚೆನ್ನಾಗಿ ಬರುತ್ತದೆ.

Oil Splattering While Cooking
Kitchen Hacks: ಗ್ಯಾಸ್ ಮೇಲಿಟ್ಟ ಹಾಲು ಉಕ್ಕಿ ಚೆಲ್ಲುತ್ತಾ? ಹಾಗಾದ್ರೆ, ಈ 5 ಸಿಂಪಲ್ ಟಿಪ್ಸ್ ಟ್ರೈ ಮಾಡಿ

ಇದರೊಂದಿಗೆ, ಮೀನು ಅಥವಾ ಆಲೂಗಡ್ಡೆಯಂತಹ ಪದಾರ್ಥಗಳನ್ನು ಕರಿಯುವಾಗ, ಅವುಗಳ ಮೇಲೆ ಸ್ವಲ್ಪ ಮೈದಾ ಅಥವಾ ಕಾರ್ನ್ ಫ್ಲೋರ್ ಚಿಮುಕಿಸಿ ಫ್ರೈ ಮಾಡುವುದರಿಂದ ಎಣ್ಣೆ ಸಿಡಿಯುವುದಿಲ್ಲ.

ತೇವಾಂಶ ಸಂಪೂರ್ಣವಾಗಿ ಒಣಗಿಸಿ:

ತರಕಾರಿ, ಮೀನು ಅಥವಾ ಮಾಂಸವನ್ನು ತೊಳೆದ ತಕ್ಷಣ ಎಣ್ಣೆಗೆ ಹಾಕಬೇಡಿ. ಅವುಗಳನ್ನು ಕಿಚನ್ ಟಿಶ್ಯೂ ಅಥವಾ ಒಣ ಬಟ್ಟೆಯಿಂದ ಸಂಪೂರ್ಣವಾಗಿ ಒಣಗಿಸಿ, ನಂತರ ಫ್ರೈ ಮಾಡಿ. ಯಾಕಂದ್ರೆ, ನೀರಿನ ಅಂಶವೇ ಎಣ್ಣೆ ಸಿಡಿಯಲು ಮುಖ್ಯ ಕಾರಣ.

ಒಣ ಬಾಣಲೆ ಬಳಸಿ:

ಅಡುಗೆ ಮಾಡುವ ಮುನ್ನ ಬಾಣಲೆಯಲ್ಲಿ ನೀರಿನ ಹನಿಗಳು ಇಲ್ಲದಂತೆ ಒಣಗಿಸಿ. ಬಾಣಲೆ ಸಂಪೂರ್ಣ ಒಣಗಿದ ಮೇಲೆಯೇ ಎಣ್ಣೆ ಹಾಕಿ.

ನೆನಪಿರಲಿ

  • ಹೆಚ್ಚಿನ ಉರಿಯಲ್ಲಿ ಪದಾರ್ಥಗಳನ್ನು ಒಮ್ಮೆಗೇ ಎಣ್ಣೆಗೆ ಹಾಕಬೇಡಿ. ಅದರಂತೆ, ಎಣ್ಣೆ ಬಿಸಿಯಾದ ನಂತರವೇ ನಿಧಾನವಾಗಿ ತರಕಾರಿ ಅಥವಾ ಮಸಾಲೆ ಹಾಕಿ. ಯಾಕಂದ್ರೆ, ಉರಿ ಕಡಿಮೆ ಇದ್ದರೆ ಅಡುಗೆ ಸಮವಾಗಿ ಆಗುತ್ತದೆ ಮತ್ತು ಎಣ್ಣೆ ಕೂಡ ಸುರಕ್ಷಿತವಾಗಿರುತ್ತದೆ.

  • ಫ್ರಿಡ್ಜ್‌ನಿಂದ ತೆಗೆದ ತಕ್ಷಣ ಗಟ್ಟಿಯಾದ, ತಣ್ಣಗಿರುವ ಪದಾರ್ಥಗಳನ್ನು ನೇರವಾಗಿ ಕಾದ ಎಣ್ಣೆಗೆ ಹಾಕಬೇಡಿ. ಅವು ಸಾಮಾನ್ಯ ತಾಪಮಾನಕ್ಕೆ ಬಂದ ನಂತರವೇ ಬಳಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com