ಚಿನ್ನದ ಆಭರಣ ಕಪ್ಪಾಗಿದ್ಯಾ? ಮನೆಯಲ್ಲೇ ನಿಮಿಷಗಳಲ್ಲಿ ಹೊಳೆಯುವಂತೆ ಮಾಡುವ 4 ಸುಲಭ ಟಿಪ್ಸ್

ಬೆವರು, ಸೋಪು, ಪರ್ಫ್ಯೂಮ್ ಹಾಗೂ ಮಳೆಗಾಲದ ತೇವಾಂಶದಿಂದಾಗಿ ನಮ್ಮ ಇಷ್ಟದ ಚಿನ್ನದ ಉಂಗುರ, ಸರ, ಬಳೆಗಳು ಕಪ್ಪಾಗಿ ಮಂಕಾಗಿ ಕಾಣುತ್ತವೆ. ಆದ್ರೆ, ಅಡುಗೆ ಮನೆಯಲ್ಲೇ ಇರುವ 2-3 ಸಾಮಾನುಗಳಿಂದ ನಿಮಿಷಗಳಲ್ಲಿ ನಿಮ್ಮ ಚಿನ್ನವನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು ಅಂತ? ಇಲ್ಲಿದೆ ಆ ಕುರಿತ ವರದಿ:
Gold
ಚಿನ್ನOnline Desk
Updated on

Gold News: ಬೆವರು, ಸೋಪು, ಪರ್ಫ್ಯೂಮ್ ಹಾಗೂ ಮಳೆಗಾಲದ ತೇವಾಂಶದಿಂದಾಗಿ ನಮ್ಮ ಇಷ್ಟದ ಚಿನ್ನದ ಉಂಗುರ, ಸರ, ಬಳೆಗಳು ಕಪ್ಪಾಗಿ ಮಂಕಾಗಿ ಕಾಣುತ್ತವೆ. ಅದಾದ ಮೇಲೆ ಚಿನ್ನದಂಗಡಿಗೆ ಹೋಗಿ ಪಾಲಿಶ್ ಮಾಡಿಸಲು ಸಮಯ ಮತ್ತು ದುಡ್ಡು ಎರಡೂ ವೇಸ್ಟ್.! ಆದ್ರೆ, ನಿಮಗೆ ಗೋತ್ತಾ? ಅಡುಗೆ ಮನೆಯಲ್ಲೇ ಇರುವ 2-3 ಸಾಮಾನುಗಳಿಂದ ನಿಮಿಷಗಳಲ್ಲಿ ನಿಮ್ಮ ಚಿನ್ನವನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು ಅಂತ? ಇಲ್ಲಿದೆ ಆ ಕುರಿತ ವರದಿ:

1. ಬೆಚ್ಚಗಿನ ನೀರು ಮತ್ತು ಲಿಕ್ವಿಡ್ ಸೋಪ್ ಟ್ರಿಕ್:

ಒಂದು ಬಟ್ಟಲಿನಲ್ಲಿ ಬೆಚ್ಚಗಿನ ನೀರು ತೆಗೆದುಕೊಂಡು 3 ರಿಂದ 4 ಹನಿ ಲಿಕ್ವಿಡ್ ಡಿಶ್ ಸೋಪ್ ಅಥವಾ ಶ್ಯಾಂಪೂ ಹಾಕಿ. ಅದರಲ್ಲಿ ಚಿನ್ನದ ಆಭರಣವನ್ನು 10 ನಿಮಿಷ ನೆನೆಸಿಡಿ. ನಂತರ ಸಾಫ್ಟ್ ಆಗಿರೋ ಟೂತ್ ಬ್ರಷ್‌ನಿಂದ ನಿಧಾನವಾಗಿ ಉಜ್ಜಿ. ಕೊನೆಯಲ್ಲಿ ಚೆನ್ನಾಗಿರುವ ನೀರಿನಲ್ಲಿ ತೊಳೆದು ಸಾಫ್ಟ್ ಆಗಿರೋ ಬಟ್ಟೆಯಲ್ಲಿ ಒರೆಸಿ. ಕಪ್ಪು ಕಲೆ ಮತ್ತು ಕೊಳೆ ಎಲ್ಲಾ ಹೋಗುತ್ತದೆ.

Gold
ದಿನವೂ ಚಿನ್ನದ ಬೆಲೆ ಬದಲಾಗೋದು ಯಾಕೆ? ಯಾರು ಡಿಸೈಡ್ ಮಾಡ್ತಾರೆ ಬಂಗಾರದ ಬೆಲೆ?

2. ಬೇಕಿಂಗ್ ಸೋಡಾ ಮತ್ತು ಅಲ್ಯೂಮಿನಿಯಂ ಫಾಯಿಲ್ ಟ್ರಿಕ್:

ಒಂದು ಬೌಲ್‌ನಲ್ಲಿ ಬೆಚ್ಚಗಿನ ನೀರು, 1 ಚಮಚ ಬೇಕಿಂಗ್ ಸೋಡಾ ಮತ್ತು ಅಲ್ಯೂಮಿನಿಯಂ ಫಾಯಿಲ್ ತುಂಡು ಹಾಕಿ. ಅದರಲ್ಲಿ ಆಭರಣವನ್ನು 5 ನಿಮಿಷ ಇಡಿ. ಆಭರಣದಲ್ಲಿರುವ ಕಪ್ಪು ಪದರ ಅಲ್ಯೂಮಿನಿಯಂ ಜೊತೆ ರಿಯಾಕ್ಟ್ ಆಗಿ ಹೋಗುತ್ತದೆ. ಇದು ಉಂಗುರ ಮತ್ತು ಸರಕ್ಕೆ ತುಂಬಾ ಎಫೆಕ್ಟಿವ್.

3. ಅಮೋನಿಯಾ ನೀರಿನ ಮಿಶ್ರಣ:

1 ಕಪ್ ನೀರಿಗೆ 4-5 ಹನಿ ಅಮೋನಿಯಾ ಹಾಕಿ. 1 ನಿಮಿಷಕ್ಕಿಂತ ಹೆಚ್ಚು ಅದರಲ್ಲಿ ಆಭರಣ ಇಡಬೇಡಿ. ತಕ್ಷಣ ಹೊರತೆಗೆದು ತೊಳೆದು ಒಣಗಿಸಿ. ಇದು ಹಳೆಯ ಆಭರಣವನ್ನು ಹೊಸದರಂತೆ ಹೊಳೆಯುವಂತೆ ಮಾಡುತ್ತದೆ. ಆದರೆ ಕಲ್ಲು ಇರುವ ಆಭರಣಕ್ಕೆ ಇದನ್ನು ಬಳಸಬೇಡಿ.

Gold
Gold Types: ಯಾವ ಕ್ಯಾರೆಟ್ ಚಿನ್ನ ಪರಿಶುದ್ಧ ಗೊತ್ತಾ? ಈ ವಿಷಯ ಗೊತ್ತಿಲ್ಲದೆ ಬಂಗಾರ ಖರೀದಿಸಲೇಬೇಡಿ!

4. ಒಣಗಿಸುವುದು ಮುಖ್ಯ:
ತೊಳೆದ ನಂತರ ಚಿನ್ನದ ಆಭರಣವನ್ನು ಯಾವತ್ತೂ ಗಾಳಿಯಲ್ಲಿ ಒಣಗಲು ಬಿಡಬೇಡಿ. ಹಾಗಾಗಿ, ಮನೆಯಲ್ಲಿರುವ ಸಾಫ್ಟ್ ಆಗಿರೋ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿ. ನಂತರ ಗಾಳಿ ಆಡದ ಡಬ್ಬದಲ್ಲಿ ಇಡಿ.

ಏನು ಮಾಡಬಾರದು?

ಟೂತ್‌ಪೇಸ್ಟ್, ಬ್ಲೀಚ್ ಅಥವಾ ಗಟ್ಟಿ ಬ್ರಷ್ ಬಳಸಬೇಡಿ. ಇದರಿಂದ ಚಿನ್ನದ ಮೇಲೆ ಗೀರು ಕಾಣಿಸ್ಕೊಳ್ಳುವ ಸಾಧ್ಯತೆ ಇರುತ್ತದೆ. ಒಟ್ಟಾರೆಯಾಗಿ, ಈ 4 ಟಿಪ್ಸ್‌ನಿಂದ ನಿಮ್ಮ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com