Blackheads/whiteheads ಸಮಸ್ಯೆ ಶಾಶ್ವತವಾಗಿ ದೂರಾಗಿಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್...

ಬ್ಲ್ಯಾಕ್ ಹೆಡ್ಸ್ (Blackheads) ಎಂದರೆ ಚರ್ಮದ ರಂಧ್ರಗಳಲ್ಲಿ ಕೊಳೆ ಮತ್ತು ಎಣ್ಣೆ (sebum) ಶೇಖರಣೆಯಾಗಿ, ಆಕ್ಸಿಡೀಕರಣಗೊಂಡು ಮೂಗು, ಗಲ್ಲ ಅಥವಾ ಹಣೆಯ ಮೇಲೆ ಕಾಣಿಸಿಕೊಳ್ಳುವ ಸಣ್ಣ ಕಪ್ಪು ಚುಕ್ಕೆಗಳು. ಇವುಗಳನ್ನು ಸಣ್ಣ-ಸಣ್ಣ ಮೊಡವೆ (mild acne) ಎಂದು ಕರೆಯಲಾಗುತ್ತದೆ.
File photo
ಸಂಗ್ರಹ ಚಿತ್ರ
Updated on

ಬೆಳಿಗ್ಗೆ ಎದ್ದು ಕನ್ನಡಿ ನೋಡಿದಾಗ ಮುಖ ದಿನದಿಂದ ದಿನಕ್ಕೆ ಕಪ್ಪಗಾಗುತ್ತಿರುವಂತೆ ಕಾಣಿಸುತ್ತಿದೆಯೇ? ಹತ್ತಿರದಿಂದ ಗಮನಿಸಿದರೆ ಮೂಗು ಮತ್ತು ಗಲ್ಲದ ಭಾಗದಲ್ಲಿ ಸಣ್ಣ ಕಪ್ಪು ಗುಳ್ಳೆಗಳು ಕಂಡುಬರುತ್ತಿವೆಯೇ? ಇವುಗಳನ್ನು ಬ್ಲ್ಯಾಕ್‌ಹೆಡ್ಸ್ ಎಂದು ಕರೆಯಲಾಗುತ್ತದೆ.

ಸರಳವಾಗಿ ಹೇಳುವುದಾದರೆ, ಚರ್ಮದ ರಂಧ್ರಗಳು (pores) ಎಣ್ಣೆ, ಧೂಳು ಮತ್ತು ಮಲಿನದಿಂದ ತುಂಬಿಕೊಂಡಾಗ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ಮುಖ ಕಪ್ಪಾಗಿರುವಂತೆ ಅಥವಾ ನಿರ್ಜೀವವಾಗಿ ಕಾಣಿಸಬಹುದು. ಬ್ಲ್ಯಾಕ್‌ಹೆಡ್ಸ್ ಇಂದು ಬಹುತೇಕ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ಆದರೆ, ಇದು ತೀವ್ರವಾದರೆ ಮುಖವೇ ಕಪ್ಪಗಾದ ಅನುಭವವಾಗುತ್ತದೆ.

ಬ್ಲ್ಯಾಕ್ ಹೆಡ್ಸ್ (Blackheads) ಎಂದರೆ ಚರ್ಮದ ರಂಧ್ರಗಳಲ್ಲಿ ಕೊಳೆ ಮತ್ತು ಎಣ್ಣೆ (sebum) ಶೇಖರಣೆಯಾಗಿ, ಆಕ್ಸಿಡೀಕರಣಗೊಂಡು ಮೂಗು, ಗಲ್ಲ ಅಥವಾ ಹಣೆಯ ಮೇಲೆ ಕಾಣಿಸಿಕೊಳ್ಳುವ ಸಣ್ಣ ಕಪ್ಪು ಚುಕ್ಕೆಗಳು. ಇವುಗಳನ್ನು ಸಣ್ಣ-ಸಣ್ಣ ಮೊಡವೆ (mild acne) ಎಂದು ಕರೆಯಲಾಗುತ್ತದೆ. ಸಮಸ್ಯೆ ತೀವ್ರವಾದರೆ ಮುಖ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.

File photo
ಸಂಗ್ರಹ ಚಿತ್ರ

ಈ ಸಮಸ್ಯೆಯ ಮೂಲ ಕಾರಣ ಚರ್ಮದ ಅತಿಯಾದ ಎಣ್ಣೆ ಉತ್ಪಾದನೆ, ಧೂಳು ಮತ್ತು ಮಾಲಿನ್ಯಕ್ಕೆ ಹೆಚ್ಚು ಒಳಗಾಗುವುದು ಹಾಗೂ ಶುಭ್ರತೆ ಕೊರತೆ.

ನಾವು ದಿನನಿತ್ಯ ಬಳಸುವ ಫೋನ್, ಮುಖವನ್ನು ಆಗಾಗ ಮುಟ್ಟಿಕೊಳ್ಳುವ ಅಭ್ಯಾಸ, ಮಾಲಿನ್ಯಪೂರ್ಣ ವಾತಾವರಣ ಮತ್ತು ಅಸಮತೋಲನ ಆಹಾರವೂ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಈ ಸಮಸ್ಯೆಯನ್ನು ನಿಯಂತ್ರಿಸುವುದು ಸುಲಭ. ಆದರೆ, ನಿರಂತರವಾದ ಸ್ಕಿನ್‌ಕೇರ್ ರೂಟೀನ್ ಅತ್ಯಂತ ಮುಖ್ಯ. ಬೆಳಿಗ್ಗೆ ಎದ್ದು ಮುಖವನ್ನು ಸ್ವಚ್ಛಗೊಳಿಸುವುದು ಮೊದಲ ಹೆಜ್ಜೆಯಾಗಿದೆ.

File photo
ಸಂಗ್ರಹ ಚಿತ್ರ
  • ಸಾಮಾನ್ಯವಾಗಿ ನಿದ್ರೆಯ ಸಮಯದಲ್ಲಿ ಮುಖದಲ್ಲಿ ಎಣ್ಣೆ ಮತ್ತು ಸತ್ತ ಚರ್ಮಕಣಗಳು ಜಮೆಯಾಗುತ್ತವೆ. ಇವುಗಳನ್ನು ತೆಗೆದುಹಾಕಲು ಸ್ಯಾಲಿಸಿಲಿಕ್ ಆ್ಯಸಿಡ್ ಇರುವ ಮೃದುವಾದ ಕ್ಲೆನ್ಸರ್ ಬಳಸುವುದು ಉತ್ತಮ. ಇದು ರಂಧ್ರಗಳ ಒಳಗಿನ ಮಲಿನತೆಯನ್ನು ಸ್ವಚ್ಛಗೊಳಿಸಿ ಹೊಸ ಬ್ಲ್ಯಾಕ್‌ಹೆಡ್ಸ್ ಉಂಟಾಗುವುದನ್ನು ತಡೆಯುತ್ತದೆ.

  • ಮುಖ ತೊಳೆದ ನಂತರ ಚರ್ಮ ಒಣಗದಂತೆ ಕಾಪಾಡುವುದು ಬಹಳ ಮುಖ್ಯ. ಅದಕ್ಕಾಗಿ ಎಣ್ಣೆ ರಹಿತ ಅಥವಾ ಜೆಲ್ ಆಧಾರಿತ ಮಾಯಿಶ್ಚರೈಸರ್ ಬಳಸಬೇಕು. ಇದು ಚರ್ಮಕ್ಕೆ ಅಗತ್ಯವಾದ ತೇವಾಂಶ ನೀಡುತ್ತದೆ ಮತ್ತು ಅತಿಯಾದ ಎಣ್ಣೆ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ.

  • ನಂತರ ಸನ್‌ಸ್ಕ್ರೀನ್ ಹಚ್ಚುವುದು ಅನಿವಾರ್ಯ. ಸೂರ್ಯನ ಅಲ್ಟ್ರಾವಯಲೆಟ್ ಕಿರಣಗಳು ಚರ್ಮವನ್ನು ಹಾನಿಗೊಳಿಸಿ ಈಗಿರುವ ಬ್ಲ್ಯಾಕ್‌ಹೆಡ್ಸ್ ಸಮಸ್ಯೆಯನ್ನು ಹೆಚ್ಚಿಸಬಹುದು.

  • ರಾತ್ರಿ ಸಮಯದಲ್ಲಿ ಚರ್ಮದಲ್ಲಿ ಎಣ್ಣೆ ಉತ್ಪತ್ಥಿ ಹೆಚ್ಚಾಗಿರುತ್ತದೆ. ಆದ್ದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದು ಅಗತ್ಯ. ಫೇಸ್‌ವಾಶ್ ಬಳಸಿ ಮುಖವನ್ನು ಸ್ವಚ್ಛಗೊಳಿಸಿದ ನಂತರ ಸ್ಯಾಲಿಸಿಲಿಕ್ ಆ್ಯಸಿಡ್ ಅಥವಾ ರೆಟಿನಾಯ್ಡ್ ಇರುವ ಸೀರಮ್ ಬಳಕೆ ಮಾಡಿದರೆ ರಂಧ್ರಗಳನ್ನು ಒಳಗಿನಿಂದ ಕಡಿಮೆ ಮಾಡುತ್ತದೆ.

File photo
ಸಂಗ್ರಹ ಚಿತ್ರ
  • ಇದು ಹೊಸ ಬ್ಲ್ಯಾಕ್‌ಹೆಡ್ಸ್ ಉಂಟಾಗುವುದನ್ನು ತಡೆಯುವುದರ ಜೊತೆಗೆ ಸಮಸ್ಯೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ. ಕೊನೆಯಲ್ಲಿ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮ ರಾತ್ರಿ ಪೂರ್ತಿ ಹೈಡ್ರೇಟೆಡ್ ಆಗಿರುತ್ತದೆ.

  • ಇದರ ಜೊತೆಗೆ ವಾರದ ಕೆಲ ಅಭ್ಯಾಸಗಳು ಕೂಡ ಬಹಳ ಮುಖ್ಯವಾಗುತ್ತದೆ ಬ್ಲ್ಯಾಕ್‌ಹೆಡ್ಸ್ ಅನ್ನು ಕೈಗಳಿಂದ ಒತ್ತಿ ತೆಗೆದುಹಾಕುವುದು ಬಹಳ ಹಾನಿಕಾರಕ. ಇದರಿಂದ ಚರ್ಮಕ್ಕೆ ಗಾಯವಾಗಬಹುದು, ಸೋಂಕು ಉಂಟಾಗಬಹುದು ಮತ್ತು ಶಾಶ್ವತ ಕಲೆಗಳು ಉಳಿಯಬಹುದು.

  • ಇದರ ಬದಲಿಗೆ ವಾರದಲ್ಲಿ ಒಮ್ಮೆ ಎಕ್ಸ್‌ಫೋಲಿಯೇಶನ್ ಮಾಡುವುದು ಉತ್ತಮ. ಇದು ಸತ್ತ ಚರ್ಮಕಣಗಳನ್ನು ತೆಗೆದುಹಾಕಿ ರಂಧ್ರಗಳನ್ನು ಸ್ವಚ್ಛವಾಗಿಡುತ್ತದೆ. ಜೊತೆಗೆ ಕ್ಲೇ ಮಾಸ್ಕ್ ಬಳಕೆ ಮಾಡುವುದರಿಂದ ಚರ್ಮದ ಒಳಗಿನ ಹೆಚ್ಚುವರಿ ಎಣ್ಣೆ ಮತ್ತು ಮಲಿನತೆ ಹೊರಬಂದು ಚರ್ಮ ಹೆಚ್ಚು ಸ್ವಚ್ಛವಾಗಿ ಕಾಣುತ್ತದೆ.

File photo
ಸಂಗ್ರಹ ಚಿತ್ರ

ನಿಯಮಿತ ಆರೈಕೆ, ಸ್ವಚ್ಛತೆಯ ಅಭ್ಯಾಸಗಳು ಮತ್ತು ಸರಿಯಾದ ಉತ್ಪನ್ನಗಳ ಬಳಕೆ ಇದ್ದರೆ ಬ್ಲ್ಯಾಕ್‌ಹೆಡ್ಸ್ ಸಮಸ್ಯೆಯನ್ನು ಬಹಳ ಮಟ್ಟಿಗೆ ನಿಯಂತ್ರಿಸಬಹುದು. ಇದರಿಂದ ಮುಖ ಸ್ವಚ್ಛ, ತಾಜಾ ಮತ್ತು ಆರೋಗ್ಯಕರವಾಗಿ ಕಾಣುತ್ತದೆ ಮತ್ತು ಚರ್ಮದ ನೈಸರ್ಗಿಕ ಹೊಳಪು ಮರಳಿ ಬರುತ್ತದೆ.

File photo
AC ಹೆಚ್ಚು ಬಳಕೆಯಿಂದ ವಯಸ್ಸಾದವರಂತೆ ಕಾಣುತ್ತೀವಾ? ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com