

ನವದೆಹಲಿ: ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆಯ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. 30 ರಿಂದ 49 ವರ್ಷ ವಯಸ್ಸಿನ ಪ್ರತಿ ಹತ್ತು ಭಾರತೀಯ ಮಹಿಳೆಯರಲ್ಲಿ ಐದರಿಂದ ಆರು ಮಂದಿ ಹೊಟ್ಟೆಯ ಸ್ಥೂಲಕಾಯತೆ ಸಮಸ್ಯೆ ಹೊಂದಿದ್ದಾರೆ. ಇದಕ್ಕೆ ವಯಸ್ಸಿನ ಸಮಸ್ಯೆ, ನಗರ ಜೀವನ, ಅಧಿಕ ಆದಾಯ ಮತ್ತು ಮಾಂಸಹಾರಿ ಆಹಾರ ಪದ್ಧತಿ ಕಾರಣವಿರಬಹುದು ಎಂದು ಹೇಳಿದೆ.
Diabetes and Metabolic Syndrome ಕ್ಲಿನಿಕಲ್ ರಿಸರ್ಚ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತೋರಿಸಿದೆ.
ಭಾರತದಲ್ಲಿ ಹೆಚ್ಚಿನ ಜನರು ಚಯಾಪಚಯ ಸಮಸ್ಯೆಗಳಿಂದ ಬಳಲುತ್ತಿರುವುದಕ್ಕೆ ಇದು ವಾರ್ನಿಂಗ್ ಆಗಿದೆ. ಆತಂಕಕಾರಿ ವಿಷಯವೇನೆಂದರೆ, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ವಿಶೇಷವಾಗಿ ಹುಡುಗಿಯರಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದ್ದು, ಆರಂಭಿಕ ಅಪೌಷ್ಟಿಕತೆಯನ್ನು ನಂತರ ತ್ವರಿತ ಜೀವನಶೈಲಿ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ.
ವರದಿಯ ಪ್ರಮುಖ ಸಲಹೆ: ಬೊಜ್ಜಿನ ಸಮಸ್ಯೆಯಿಂದ ಹೃದಯ ರಕ್ತನಾಳದ ಕಾಯಿಲೆ, ಮೂತ್ರಪಿಂಡದ ಸಮಸ್ಯೆ, ಮಧುಮೇಹ, ಸ್ತನ ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ಬರುವ ಸಾಧ್ಯತೆಯಿದ್ದು, ತುರ್ತಾಗಿ ಸುತ್ತಳತೆಯ ಅಳತೆ ಮಾಡಿಸಬೇಕಾದ ಅಗತ್ಯವಿರುತ್ತದೆ ಎಂದು ವರದಿ ಹೇಳಿದೆ.
ನಾವು ಮಾಮೂಲಿ ತೂಕ ಪರೀಕ್ಷೆ ಮಾಡಿಕೊಳ್ಳುವಂತೆ ಸ್ಥೂಲಕಾಯ ಪರೀಕ್ಷೆ ಇರುವುದಿಲ್ಲ. ಇದನ್ನು ಅಳೆಯಲು ಸರಿಯಾದ ಮಾರ್ಗವೆಂದರೆ BMI (ಬಾಡಿ ಮಾಸ್ ಇಂಡೆಕ್ಸ್). ಆದರೆ ವಿದೇಶಗಳ ಜನರಿಗೆ ಹೋಲಿಸಿದರೆ ಏಷ್ಯಾದ ಭಾರತೀಯರಲ್ಲಿ ಸ್ಥೂಲಕಾಯತೆಯನ್ನು ಬಾಡಿ ಮಾಸ್ ಇಂಡೆಕ್ಸ್ (BMI)ನಿಖರವಾಗಿ ಕಂಡುಹಿಡಿಯುವುದಿಲ್ಲ. ಆದ್ದರಿಂದ, ಸಾಮಾನ್ಯ ಸ್ಥೂಲಕಾಯತೆಯಿಂದ ಕಿಬ್ಬೊಟ್ಟೆಯ ಸ್ಥೂಲಕಾಯತೆ ಕಡೆಗೆ ಗಮನ ಬದಲಾಯಿಸಬೇಕು. ಚರ್ಮದ ಅಡಿಯಲ್ಲಿ ಮತ್ತು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯಂತಹ ಪ್ರಮುಖ ಅಂಗಗಳ ಸುತ್ತಲೂ ಹೆಚ್ಚುವರಿ ಕೊಬ್ಬ ಇರುತ್ತದೆ ಎಂದು ವರದಿ ತಿಳಿಸಿದೆ.
ತಜ್ಞರ ಸಲಹೆಯೇನು?
ಹೃದಯ ತೊಂದರೆ ಬಗ್ಗೆ ತಿಳಿದುಕೊಳ್ಳಲು ಕೇವಲ BMI ಮೇಲೆ ಅವಲಂಬಿತರಾಗುವ ಬದಲು ಸೊಂಟದ ಸುತ್ತಳತೆ ಮತ್ತು ಸೊಂಟದಿಂದ ಎತ್ತರದ ಅನುಪಾತವನ್ನು ಬಳಸಲು ತಜ್ಞರು ಸಲಹೆ ನೀಡಿದ್ದಾರೆ. ಟೇಪ್ ಬಳಸಿ ಸ್ಥೂಲಕಾಯ ಅಳೆಯುವುದು ಸರಳ ವಿಧಾನವಾಗಿದೆ. ಇದರಿಂದ ಜೀವನಶೈಲಿಯ ಬದಲಾವಣೆ ಮತ್ತು ಚಿಕಿತ್ಸೆಯ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲೂ ಹೊಟ್ಟೆಯ ಬೊಜ್ಜು ಹೆಚ್ಚುತ್ತಿದೆ. ಕಿಬ್ಬೊಟ್ಟೆಯ ಬೊಜ್ಜು ಇನ್ನು ಮುಂದೆ ನಗರ ಅಥವಾ ಶ್ರೀಮಂತ ಜನರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಅಧ್ಯಯನ ಹೇಳಿದೆ
ಇದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೆಳ ಮತ್ತು ಮಧ್ಯಮ-ಆದಾಯದ ಗುಂಪುಗಳಲ್ಲಿ ಹೆಚ್ಚುತ್ತಿದೆ. NFHS-5 (2019–21)ದತ್ತಾಂಶವು ಭಾರತದಲ್ಲಿ ಸುಮಾರು ಶೇ. 40 ರಷ್ಟು ಮಹಿಳೆಯರು ಮತ್ತು ಶೇ.12 ರಷ್ಟು ಪುರುಷರಲ್ಲಿ ಹೊಟ್ಟೆಯ ಬೊಜ್ಜು ಪರಿಣಾಮ ಬೀರುತ್ತದೆ ಎಂದು ತೋರಿಸುತ್ತದೆ.
Advertisement