ಸ್ವಿಸ್ ಬ್ಯಾಂಕ್ನ ಹೊಸ ಆಮಿಷ
ಜಿನೇವಾ/ನವದೆಹಲಿ: ತೆರಿಗೆಗಳ್ಳರ ಸ್ವರ್ಗವಾಗಿರುವ ಸ್ವಿಜರ್ಲ್ಯಾಂಡ್ನ ಬ್ಯಾಂಕುಗಳು ಭಾರತ ಸೇರಿದಂತೆ ಇತರೆ ದೇಶಗಳ ಶ್ರೀಮಂತರಿಗೆ ಸುರಕ್ಷಿತ ವಿಶೇಷ ಖಾತೆಗಳ ಆಮಿಷ ನೀಡಿದೆ. ಈ ಖಾತೆಗಳಲ್ಲಿ ಶ್ರೀಮಂತರು ಚಿನ್ನದಗಟ್ಟಿ ಹಾಗೂ ಸ್ವಿಸ್ ಕರೆನ್ಸಿಗಳನ್ನು ಇಟ್ಟುಕೊಳ್ಳಬಹುದಾಗಿದೆ.
ವಿದೇಶಿ ಬ್ಯಾಂಕ್ಗಳಲ್ಲಿ ಅವಿತಿಟ್ಟಿರುವ ಕಪ್ಪುಹಣವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ವಿಶ್ವಾದ್ಯಂತ ಸರ್ಕಾರಗಳು ಕೈಹಾಕಿರುವ ಹಿನ್ನೆಲೆಯಲ್ಲಿ ಸ್ವಿಸ್ಬ್ಯಾಂಕ್ಗಳ ಈ ಹೊಸ ಯೋಜನೆಯು ತೆರಿಗೆಗಳ್ಳರಿಗೆ ಅನುಕೂಲಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದು ಖಾತೆದಾರರಿರುವ ದೇಶಗಳ ಸರ್ಕಾರಗಳ ಹದ್ದಿನ ಕಣ್ಣಿನಿಂದ ತೆರಿಗೆಗಳ್ಳರ ಹಣವನ್ನು ರಕ್ಷಿಸಲಿದೆ ಎಂದು ಬ್ಯಾಂಕ್ಗಳು ಹೇಳುತ್ತವೆ. ಸ್ವಿಸ್ಬ್ಯಾಂಕ್ಗಳ ಪ್ರಕಾರ, ಭಾರತ ಸೇರಿದಂತೆ ಅನೇಕ ದೇಶಗಳೊಂದಿಗೆ ತೆರಿಗೆ ಹಾಗೂ ಮಾಹಿತಿ ಒಪ್ಪಂದವು ಕೇವಲ ಫಂಡ್ಗಳು, ಉಳಿತಾಯ, ಠೇವಣಿ ಮತ್ತು ಹೂಡಿಕೆ ಖಾತೆಗಳಿಗಷ್ಟೇ ಸೀಮಿತವಾಗಿದೆ. ಆದರೆ, ಇದು ಸೇಫ್ ಡಿಪಾಸಿಟ್ ಲಾಕರ್ಗಳಿಗೆ ಅನ್ವಯ ಆಗುವುದಿಲ್ಲ ಎಂದು ಬ್ಯಾಂಕ್ಗಳು ಹೇಳುತ್ತಿವೆ.
ಆನ್ಲೈನ್ ಡಾಟಾ: ಕಪ್ಪುಹಣ ಹಾಗೂ ತೆರಿಗೆಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ವಿತ್ತ ಸಚಿವಾಲಯ ಆನ್ಲೈನ್ ಡಾಟಾ ಬ್ಯಾಂಕ್ ರಚಿಸಿದೆ. ಇದು ಅನುಮಾನಾಸ್ಪದ ವರ್ಗಾವಣೆಗಳ ಕುರಿತು ಕಣ್ಗಾವಲು ಇಡಲು ಸಹಕಾರ ನೀಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

