ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆ ಇಂದು

ಕೊಹಿಮಾ: ನಾಗಾಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆ ಚುನಾವಣೆ ಶನಿವಾರ ನಡೆಯಲಿದೆ. ನಾಗಾಲ್ಯಾಂಡ್ನಲ್ಲಿ 188 ಅಭ್ಯರ್ಥಿಗಳು ಕಣದಲ್ಲಿದ್ದು, 60 ಮಂದಿ ಸದಸ್ಯರನ್ನು 11.93 ಲಕ್ಷ ಮತದಾರರು ವಿಧಾನಸಭೆಗೆ ಆಯ್ಕೆ ಮಾಡಲಿದ್ದಾರೆ. ಇದೇ ವೇಳೆ, ಮೇಘಾಲಯದಲ್ಲಿ ಸಿಎಂ ಮುಕುಲ್ ಸಂಗ್ಮಾ ಸೇರಿದಂತೆ 345 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫ್ಯೂ ರಿಯೋ, ಸ್ಪೀಕರ್ ಕಿಯಾನಿಲೈ ಪೆಸೈ, ವಿರೋಧ ಪಕ್ಷದ ನಾಯಕ ಟೊಖೆಹೋ ಯೆಫ್ತೋಮಿ ಸೇರಿದಂತೆ ಅನೇಕ ಘಟಾನುಘಟಿಗಳು ಚುನಾವಣಾ ಕಣದಲ್ಲಿದ್ದಾರೆ. 39 ಮಂದಿ ಪಕ್ಷೇತರರು ಹಾಗೂ ಇಬ್ಬರು ಮಹಿಳಾ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.
ಮೇಘಾಲಯದ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಲಪಾಂಗ್, ಗೃಹ ಸಚಿವ ಲಿಂಗ್ಡೋ, ಶಿಕ್ಷಣ ಸಚಿವ ಆರ್.ಸಿ. ಲಾಲೂ, ಪಿ.ಎ. ಸಂಗ್ಮಾರ ಪುತ್ರ ಕೆ. ಸಂಗ್ಮಾ ಅವರು ಕಣದಲ್ಲಿರುವ ಪ್ರಮುಖರು.
ಚುನಾವಣೆ ಹಿನ್ನೆಲೆಯಲ್ಲಿ 498 ಕಿ.ಮೀ. ಗಡಿಯುದ್ದಕ್ಕೂ ಬಿಎಸ್ಎಫ್ನ 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


