ನವದೆಹಲಿ: ದೆಹಲಿ ಗ್ಯಾಂಗ್ರೇಪ್ ವಿಚಾರಣೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂಬ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಿಚಿತ್ರ ಪ್ರಸಂಗಕ್ಕೆ ಕಾರಣವಾಯಿತು. ಆರು ಆರೋಪಿಗಳಲ್ಲಿ ಒಬ್ಬನಾದ ಮುಕೇಶ್ ಪರ ಹಾಜರಾಗಲು ಇಬ್ಬರು ವಕೀಲರು ಬಂದಿದ್ದರು. ಇವರಿಬ್ಬರು ಕೋರ್ಟ್ ಹಾಲ್ನಲ್ಲೇ ವಾದಿಸಲು ಕಿತ್ತಾಟ ಶುರುವಿಟ್ಟುಕೊಂಡರು. ಕಡೆಗೆ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರ ನೇತೃತ್ವದ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.