ದೆಹಲಿಯಲ್ಲಿ ಕೇರಳ ಯುವತಿಯ ಮೇಲೆ ನಿರಂತರ ಅತ್ಯಾಚಾರ!

ಕೇರಳ ಮೂಲದ 21 ವರ್ಷದ ಯುವತಿಯ ಮೇಲೆ ಪರಿಚಯಸ್ಥನೇ 1 ತಿಂಗಳಕಾಲ...
ದೆಹಲಿಯಲ್ಲಿ ಕೇರಳ ಯುವತಿಯ ಮೇಲೆ ನಿರಂತರ ಅತ್ಯಾಚಾರ!
Updated on: 

ನವದೆಹಲಿ: ಕೇರಳ ಮೂಲದ 21 ವರ್ಷದ ಯುವತಿಯ ಮೇಲೆ ಪರಿಚಯಸ್ಥನೇ 1 ತಿಂಗಳಕಾಲ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಯುವತಿಯ ಪರಿಚಯಸ್ಥನೊಬ್ಬ ಆಕೆಯನ್ನು ಬಂಧನದಲ್ಲಿಟ್ಟು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರವೆಸಗಿದ್ದ ಆರೋಪಿ ತನ್ನ ಊರಾದ ಬೋಪಾಲ್‌ಗೆ ತೆರಳಿದ್ದಾನೆ. ಈ ವೇಳೆ ಯುವತಿಯು ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸತ್ಯ ಬಹಿರಂಗವಾಗಿದೆ.

ಯುವತಿಯ ತಾಯಿ ದೆಹಲಿಯಲ್ಲಿರುವ ಸಂಬಂಧಿಕರ ಮೂಲಕ ದೆಹಲಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಯುವತಿಯ ಇರುವ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಹೊರಗಡೆಯಿಂದ ಮನೆ ಬಾಗಿಲು ಹಾಕಿದ್ದು, ಯುವತಿ ಮನೆಯೊಳಗೆ ಇರುವುದು ಕಂಡು ಬಂದಿದೆ. ಪೊಲೀಸರು ಮನೆಯ ಬಾಗಿಲನ್ನು ಹೊಡೆದು ಯುವತಿಯನ್ನು ರಕ್ಷಿಸಿದ್ದಾರೆ.

ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಆರೋಪಿ ದೆಹಲಿಗೆ ಕರೆ ತಂದನು. ತದ ನಂತರ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ಸೆರೆ ಹಿಡಿದು, ಯಾರಿಗೆ ಹೇಳದಂತೆ ಬೆದರಿಕೆವೊಡ್ಡಿದ್ದನು. ಪ್ರಸ್ತುತ ದೆಹಲಿಯ ಕಾಲೆಜೊಂದರಲ್ಲಿ ಆರೋಪಿಯು ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಯುವತಿ ಹೊರಗಡೆ ಓಡಾಡಬಾರದೆಂದು ಆರೋಪಿಯನ್ನು ಆಕೆಯನ್ನು ಬಂಧನದಲ್ಲಿಟ್ಟಿದ್ದನು ಎಂದು ಹೇಳಿರುವ ಪೊಲೀಸರು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬೋಪಾಲ್‌ನಿಂದ ಬಂಧಿಸಿ ತರುವಂತೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com