ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಮಾಡಿದ ಪಾಪಿ

15 ವರ್ಷದ ಅಪ್ರಾಪ್ತ ಮಾನಸಿಕ ಅಸ್ವಸ್ಥೆಯ ಮೇಲೆ 37 ವರ್ಷದ...
ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ಮಾಡಿದ ಪಾಪಿ

ಕೊಯಮತ್ತೂರು: 15 ವರ್ಷದ ಅಪ್ರಾಪ್ತ ಮಾನಸಿಕ ಅಸ್ವಸ್ಥೆಯ ಮೇಲೆ 37 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.

ಯುವತಿ ಮಾನಸಿಕ ಅಸ್ವಸ್ಥಳಾಗಿದ್ದು, ಆಕೆಗೆ ಮಾತನಾಡಲು ಬರುವುದಿಲ್ಲ. ಈ ಸ್ಥಿತಿಯನ್ನೇ ದುರುಪಯೋಗ ಮಾಡಿಕೊಂಡ ನೆರೆಮನೆಯ ಆರ್. ಸತೀಶ್ (37) ಎಂಬಾತ, ಬಾಲಕಿಯ ತಾಯಿ ಮನೆಗೆ ಸಾಮಾನು ತರಲು ಅಂಗಡಿ ಹೋದಾಗ ಯಾರಿಲ್ಲದಿರುವುದನ್ನು ಗಮನಿಸಿ ಮನೆಗೆ ನುಗ್ಗಿದ್ದಾನೆ. ನಂತರ ಬಾಲಕಿಗೆ ತನ್ನ ಮೊಬೈಲ್‌ನಲ್ಲಿ ಕೆಲವು ಅಶ್ಲೀಲ ದೃಶ್ಯಗಳನ್ನು ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಅಂಗಡಿಯಿಂದ ಮನೆಗೆ ಬಂದ ತಾಯಿ ಮಗಳಿದ್ದ ಪರಿಸ್ಥಿತಿ ನೋಡಿ ವಿಚಾರಿಸಿದಾಗ ಬಾಲಕಿ ನಡೆದ ಸಂಗತಿಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತುಕೊಂಡ ತಾಯಿ  ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಬಾಲಕಿಯ ಮೇಲೆ ಅತ್ಯಾಚಾರವಾಗಿರುವುದು ದೃಢಪಟ್ಟಿದೆ. ನಂತರ ತನಿಖೆ ಕೈಗೊಂಡ ಪೊಲೀಸರು ಆರೋಪಿ ಸತೀಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸತೀಶ್ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 3 (ಅತ್ಯಾಚಾರ ಅಪರಾಧ ಕಾಯ್ದೆ), 4 (ಮಕ್ಕಳ ರಕ್ಷಣೆ ಕಾಯ್ದೆ) ಮತ್ತು 506 (ಕ್ರಿಮಿನಲ್) ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com