ಉಗ್ರರ ದಾಳಿಗೆ ಮೋದಿ ಕಾರಣ!

ಅತ್ತ ಜಮ್ಮು ಮತ್ತು ಕಾಶ್ಮೀರ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದರೆ, ಇತ್ತ ರಾಹುಲ್ ಗಾಂಧಿ ಅವರು 'ಮೊಸರಲ್ಲೂ ಕಲ್ಲು' ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ರಾಮ್‌ಗಡ (ಜಾರ್ಖಂಡ್): ಅತ್ತ ಜಮ್ಮು ಮತ್ತು ಕಾಶ್ಮೀರ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿದ್ದರೆ, ಇತ್ತ ರಾಹುಲ್ ಗಾಂಧಿ ಅವರು 'ಮೊಸರಲ್ಲೂ ಕಲ್ಲು' ಹುಡುಕುವ ಯತ್ನ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಉಗ್ರರ ಚಟುವಟಿಕೆಗಳು ಹೆಚ್ಚಾಗತೊಡಗಿವೆ ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಹುಲ್, ಉಗ್ರರ  ದಾಳಿಗೆ ರಾಜಕೀಯ ಬಣ್ಣ ನೀಡಿದ್ದಾರೆ.

ಶನಿವಾರ ಜಾರ್ಖಂಡ್‌ನ ರಾಮ್‌ಗಡದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ  ರಾಹುಲ್, ನಾವು ಕಳೆದ 10 ವರ್ಷಗಳ ಕಾಲ ಆಡಳಿತ ನಡೆಸಿದ್ದೇವೆ. ಆಗ ಜಮ್ಮು ಮತ್ತು ಕಾಶ್ಮೀರ ಒಳ್ಳೆಯ ಪ್ರವಾಸಿ ತಾಣವಾಗಿತ್ತು. ಜನರು ಬಂದು ಹೋಗುತ್ತಿದ್ದರು. ಅಲ್ಲಿ ಶಾಂತಿ ನೆಲೆಸಿತ್ತು. ಆದರೆ ಯಾವಾಗ ಮೋದಿ ಸರ್ಕಾರ ಅಧಿಕಾರಕ್ಕೆ ಏರಿತೋ, ಉಗ್ರ ಚಟುವಟಿಕೆಗಳು ಆರಂಭವಾಗತೊಡಗಿದವು ಎಂದಿದ್ದಾರೆ.

ಮೋದಿ ಹೋದಲ್ಲೆಲ್ಲ ಹಿಂಸೆ    : ಚುನಾವಣೆ ಪ್ರಚಾರಕ್ಕೆಂದು ಪ್ರಧಾನಿ ಮೋದಿ ಎಲ್ಲೇ ಹೋಗಲಿ, ಅದು ಮಹಾರಾಷ್ಟ್ರವಾಗಿರಲಿ, ದೆಹಲಿ ಅಥವಾ ಉತ್ತರ ಪ್ರದೇಶವಾಗಿರಲಿ, ಅಲ್ಲಿ ಹಿಂಸಾಚಾರ ನಡೆದೇ ನಡೆಯುತ್ತದೆ. ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಮೋದಿ ಎತ್ತಿಕಟ್ಟುತ್ತಾರೆ. ಅದಾದ ಬಳಿಕ ಚುನಾವಣೆ ನಡೆಯುತ್ತದೆ ಎಂದಿದ್ದಾರೆ ರಾಹುಲ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com