ಎಲ್.ಎನ್.ಮಿಶ್ರಾ ಹತ್ಯೆ ಪ್ರಕರಣ: 39 ವರ್ಷ ಬಳಿಕ ತೀರ್ಪು ಪ್ರಕಟ

ಎಲ್.ಎನ್.ಮಿಶ್ರಾ ಅವರನ್ನು ಗುರಿಯನ್ನಾಗಿಸಿ ಬಾಂಬ್ ಸ್ಪೋಟ...
ಮಾಜಿ ರೈಲ್ವೆ ಸಚಿವ ಲಲಿತ್ ನಾರಾಯಣ್ ಮಿಶ್ರಾ
ಮಾಜಿ ರೈಲ್ವೆ ಸಚಿವ ಲಲಿತ್ ನಾರಾಯಣ್ ಮಿಶ್ರಾ
Updated on: 

ನವದೆಹಲಿ: 39 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸ್ಥಳೀಯ ನ್ಯಾಯಾಲಯದಿಂದ ತೀರ್ಪು ಹೊರಬಿದ್ದಿದೆ. ಇಂಧಿರಗಾಂಧಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಲಲಿತ್ ನಾರಾಯಣ್ ಮಿಶ್ರಾ ಅವರನ್ನು  ದುಷ್ಕರ್ಮಿಗಳ ಗುಂಪೊಂದು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿತ್ತು.

ಈ ಪ್ರಕರಣ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ದೆಹಲಿ ಸ್ಥಳೀಯ ನ್ಯಾಯಾಲಯ ಇಂದು, ಎಲ್.ಎನ್.ಮಿಶ್ರಾ ಅವರನ್ನು ಕೊಲೆಗೈದಿದ್ದ ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರು ಎಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಎಲ್.ಎನ್.ಮಿಶ್ರಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಡಿಸೆಂಬರ್ 15 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ರಂಜನ್ ದ್ವಿವೇದಿ, ಸಂತೋಷಾನಂದ, ಸುವಿದಾನಂದ ಅವಧೂತ ಹಾಗೂ ಗೋಪಾಲ್ ಸಿಂಗ್‌ಜಿ ಈ ನಾಲ್ವರು ಆರೋಪಿಗಳು ಎಲ್.ಎನ್.ಮಿಶ್ರಾ ಹತ್ರೆ ಪ್ರಕರಣದಲ್ಲಿ ಭಾಗಿಯಾಗಿದ್ದರು.

1975 ಜನವರಿ 2 ರಂದು ಎಲ್.ಎನ್.ಮಿಶ್ರಾ ಬಿಹಾರದ ಸಮಸ್ತಿಪುರ ರೈಲ್ವೆ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ, ಈ ನಾಲ್ವರು ಅವರನ್ನು ಗುರಿಯನ್ನಾಗಿಸಿ ಬಾಂಬ್ ಸ್ಪೋಟ ನಡೆಸಿತು. ಘಟನೆಯಲ್ಲಿ ಎಲ್.ಎನ್.ಮಿಶ್ರಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮರುದಿನವೇ ಎಲ್.ಎನ್.ಮಿಶ್ರಾ ಕೊನೆಯುಸಿರೆಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com