

ಪೇಶಾವರ: ಪೇಶಾವರದ ಸೈನಿಕ ಶಾಲೆ ಮೇಲಿನ ಭೀಕರ ದಾಳಿ ಬಳಿಕ ಉಗ್ರರ ಕುರಿತ ಪಾಕಿಸ್ತಾನ ತನ್ನ ನಿಲುವನ್ನು ಒಂದಷ್ಟು ಬದಲಿಸಲು ನಿರ್ಧರಿಸಿದೆ.
ಉಗ್ರವಾದದ ಪ್ರಕರಣಗಳಲ್ಲಿ ಕೈದಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಗೆ ಹೇರಲಾಗಿದ್ದ ಸ್ವಯಂಘೋಷಿತ ನಿಷೇಧವನ್ನು ಪ್ರಧಾನಿ ನವಾಜ್ ಷರೀಫ್ ಸರ್ಕಾರ ಬುಧವಾರ ರದ್ದು ಮಾಡಿದೆ.
ಜತೆಗೆ ದೇಶದ ಜೈಲುಗಳಲ್ಲಿರುವ ಮರಣದಂಡನೆಗೆ ಗುರಿಯಾಗಿರುವ 800 ಉಗ್ರ ಕೈದಿಗಳನ್ನು ಇನ್ನೆರಡು ದಿನಗಳಲ್ಲಿ ಗಲ್ಲಿಗೇರಿಸುವುದಾಗಿ ಸರ್ಕಾರ ಘೋಷಿಸಿದೆ.