

ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆ ಸರ್ಕಾರ ರಚನೆಗೆ ಬಿಜೆಪಿ ಸಿದ್ದ?. ಇಂಥದ್ದೊಂದು ಸುಳಿವನ್ನು ಬಿಜೆಪಿ ನೀಡಿದೆ. ಜಾರ್ಖಂಡ್ ಮತ್ತು ಕಣಿವೆ ರಾಜ್ಯದಲ್ಲಿ ಸರ್ಕಾರ ರಚನೆಯ ಮುಂದಿನ ಹಂತದ ಬಗ್ಗೆ ಚರ್ಚಿಸಲು ಬುಧವಾರ ದೆಹಲಿಯಲ್ಲಿ ನಡೆದಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಇಂಥ ಒಲವು ವ್ಯಕ್ತವಾಗಿದೆ. ಕಾಶ್ಮೀರದಲ್ಲಿ ಪಿಡಿಪಿ ಜತೆ ಸೇರಿದಂತೆ ಇತರ ಯಾವುದೇ ಪಕ್ಷಗಳ ಜತೆ ಮೈತ್ರಿಗೆ ಸಿದ್ಧವಾಗಿರುವ ಬಗ್ಗೆ ಸುಳಿವು ಕೊಟ್ಟಿದೆ. ಎಲ್ಲರ ಜತೆಗೆ ಮುಕ್ತವಾಗಿ ಇರುವಂತೆ ಈಗಾಗಲೇ ಬಜೆಪಿ ಅಧ್ಯಕ್ಷ ಅಮಿತ್ ಶಾ ಜಮ್ಮು ಕಾಶ್ಮೀರದ ಬಿಜೆಪಿ ನಾಯಕರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಇದೀಗ ಸಂಸದೀಯ ಮಂಡಳಿ ಸಭೆಯಲ್ಲಿಯೇ ಮುಕ್ತ ನಿಲುವು ಹೊಂದಿರುವ ಹಿನ್ನೆಲೆಯ್ಲಿ ಪಿಡಿಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ದೊರೆತಂತಾಗಿದೆ.