ಪಾಕಿಸ್ತಾನ ಆಟಗಾರ ಅಹ್ಮದ್ ಶೆಹ್ಜಾದ್ ತಲೆಗೆ ಗಾಯ

ಪಾಕಿಸ್ತಾನ ಆರಂಭಿಕ ಆಟಗಾರ ಆಹ್ಮದ್ ಶೆಹ್ಜಾದ್  ತಲೆಗೆ ಚೆಂಡು ಬೀಳುತ್ತಿರುವ ಚಿತ್ರ
ಪಾಕಿಸ್ತಾನ ಆರಂಭಿಕ ಆಟಗಾರ ಆಹ್ಮದ್ ಶೆಹ್ಜಾದ್ ತಲೆಗೆ ಚೆಂಡು ಬೀಳುತ್ತಿರುವ ಚಿತ್ರ

ಅಬುಧಬಿ: ಪಾಕಿಸ್ತಾನ ಆರಂಭಿಕ ಆಟಗಾರ ಅಹ್ಮದ್ ಶೆಹ್ಜಾದ್ ಅವರ ತಲೆಗೆ ನ್ಯೂಜಿಲೆಂಡ್‌ನ ಕೋರೆ ಅಂಡರ್ಸನ್ ಎಸೆದ ಚೆಂಡು ತಗುಲಿ ಮೂಳೆ ಮುರಿದಿರುವ ಬಗ್ಗೆ ವರದಿಯಾಗಿದೆ.

ಅಬುಧಬಿಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಕೋರೆ ಅಂಡರ್ಸನ್‌ರ ವೇಗದ ಬೌನ್ಸರನ್ನು ಹೊಡೆಯಲು ಶಹ್ಜಾದ್ ಪ್ರಯತ್ನಿಸಿದ್ದಾರೆ. ಆದರೆ 135.3 ಕಿ.ಮೀ ವೇಗದಲ್ಲಿದ್ದ ಚೆಂಡು ಬ್ಯಾಟ್‌ಗೆ ಸಿಗದೆ ನೇರವಾಗಿ ಶಹ್ಜಾದ್ ತಲೆಗೆ ಬಿದ್ದಿದೆ.

ತಕ್ಷಣ ಶಹ್ಜಾದ್ ತೀವ್ರ ನೋವಿನಿಂದ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಮೈದಾನದಿಂದ ಹೊರಗೆ ತೆಗೆದುಕೊಂಡು ಹೋಗಲಾಯಿತು.  ಶಹ್ಜಾದ್‌ನನ್ನು ಪರೀಕ್ಷಿಸಿ ವೈದ್ಯರು ಬುರುಡೆಯ ಮೂಳೆ ಮುದಿರುವುದಾಗಿ ಹೇಳಿದ್ದಾರೆ. ಉತ್ತಮವಾಗಿ ಆಡುತ್ತಿದ್ದ ಶಹ್ಜಾದ್ 176 ರನ್ ಪೇರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com