

ಬೈರೂತ್: ಇಬ್ಬರು ಅಮೆರಿಕಾ ಪ್ರಜೆಗಳ ಶಿರಚ್ಛೇದನ ಮಾಡಿದ್ದ ಇಸಿಸ್ ಉಗ್ರರು ಇದೀಗ ಮತ್ತೊಬ್ಬ ಅಮೆರಿಕ ಪ್ರಜೆಯ ಶಿರಚ್ಚೇದನ ಮಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಅಮೆರಿಕದ ಪ್ರಜೆಯಾಗಿರುವ 26 ವರ್ಷದ ಪೀಟರ್ ಕೆಸಿಂಗ್‌ನನ್ನು ಇಸಿಸ್ ಉಗ್ರರು ಶಿರಚ್ಛೇದನ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಅಮೆರಿಕಾದ ಪ್ರಜೆಗಳ ಹತ್ಯೆ ಮಾಡಿ ಅಮೆರಿಕಗೆ ತಮ್ಮ ವಿರುದ್ಧ ವಾಯುದಾಳಿ ನಡೆಸದಂತೆ ಎಚ್ಚರಿಕೆ ನೀಡಿದ್ದ ಉಗ್ರರು ಮತ್ತದೆ ದಾರಿಯನ್ನು ಆಯ್ದುಕೊಂಡಿದ್ದಾರೆ. ಇದೀಗ ಪೀಟರ್‌ನನ್ನು ಶಿರಚ್ಚೇದನ ಮಾಡಿದ್ದಾರೆ.
ಅಮೆರಿಕದ ಮಾಜಿ ಸೈನಿಕನಾಗಿದ್ದ ಪೀಟರ್ 2013ರ ಅಕ್ಟೋಬರ್ 1ರಂದು ಕಣ್ಮರೆಯಾಗಿದ್ದ. ತನ್ನ ಪ್ರಾಣವನ್ನು ಲೆಕ್ಕಿಸದೆ ಸಿರಿಯಾದಲ್ಲಿ ಗಲಭೆಯಲ್ಲಿ ಗಾಯಗೊಂಡಿದ್ದವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಕಾರ್ಯದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಆತನನ್ನು ಉಗ್ರರು ಅಪಹರಿಸಿದ್ದರು.
ಈ ಹಿಂದೆ ಬ್ರಿಟನ್ ಪ್ರಜೆ ಅಲನ್ ಹೆನ್ನಿಂಗ್ ಎಂಬಾತನ ಶಿರಚ್ಚೇದ ಮಾಡಿದ್ದ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಸಿರಿಯಾ ಮತ್ತು ಇರಾಕ್ ಮೇಲೆ ಬ್ರಿಟನ್ ಹಾಗೂ ಅಮೆರಿಕ ನಡೆಸುತ್ತಿರವ ವೈಮಾನಿಕ ದಾಳಿಯನ್ನು ಕೂಡಲೇ ನಿಲ್ಲಸದೆ ಹೋದರೆ ಅಮೆರಿಕದ ಪೀಟರ್ ಕೆಸಿಂಗ್‌ನನ್ನು ಕೊಲ್ಲುವುದಾಗಿ ಬೆದರಿಕೆಯಾಕ್ಕಿದ್ದರು.
ಇರಾಕ್‌ನಲ್ಲಿ ಇಸಿಸ್ ಸಾಮೂಹಿಕ ಮರಣದಂಡನೆ ಮತ್ತು ಅಮಾಯಕರ ಶಿರಚ್ಛೇದಂತ ದುಷ್ಕೃತ್ಯಗಳನ್ನು ನಡೆಸುತ್ತಾ ಬಂದಿದೆ.
ಇಸಿಸ್ ಉಗ್ರರಿಂದ ಶಿರಚ್ಛೇದನಕ್ಕೊಳಗಾದ ಐದನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಇಬ್ಬರು ಬ್ರಿಟನ್ ಪ್ರಜೆ ಹಾಗೂ ಇಬ್ಬರು ಅಮೆರಿಕದ ಪತ್ರಕರ್ತರಾದ ಜೇಮ್ಸ್ ಪೊಲೆ ಮತ್ತು ಸ್ಟೀವನ್ ಸೊಟ್ಲಾಫ್ ಹಾಗೂ ಬ್ರಿಟನ್ ಮೂಲದ ಅಲನ್ ಹೆನ್ನಿಂಗ್ ಹಾಗೂ ಡೇವಿಡ್ ಹೇನ್ಸ್ ಸೇರಿ ಐವರನ್ನು ಇಸಿಸ್ ಉಗ್ರರು ಶಿರಚ್ಛೇದನ ಮಾಡಿದ್ದಾರೆ.