

ಗುರ್‌ಗಾಂವ್: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಗುರ್‌ಗಾಂವ್‌ನಲ್ಲಿ ನಡೆದಿದೆ.
ಭಾನುವಾರ ಸಂಜೆ 9ರ ಸುಮಾರಿಗೆ ತನ್ನ ಮೊಬೈಲ್‌ನಲ್ಲಿ ವೈ-ಫೈ ಬಳಕೆ ಮಾಡುವ ಸಲುವಾಗಿ ಮನೆಯ ಮಹಡಿ ಮೇಲೆ ತೆರಳಿದ್ದಾಗ, ನೆರೆಯ ಸ್ನೇಹಿತನೊಬ್ಬ ಕಾರಿನಲ್ಲಿ ಬಂದು ಕರೆದಿದ್ದಾನೆ. ಆತನೊಡನೆ ಮಾತನಾಡುವ ಸಲುವಾಗಿ ಕೆಳಗಿಳಿದು ಬಂದಾಗ ಬಾಲಕಿಯನ್ನು ಎಳೆದು ಕಾರಿನಲ್ಲಿ ಕೂರಿಸಿ, ಗುರ್‌ಗಾಂವ್‌ನ ಸೆಕ್ಷನ್ 56 ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು ತನ್ನ ನಾಲ್ವರು ಸ್ನೇಹಿತರೊಂದಿಗೆ ಕೂಡಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಬಾಲಕಿಯನ್ನು ಆಕೆಯ ಮನೆಯ ಬಳಿ ಬಿಟ್ಟು ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಹೇಳಿ ಬೆದರಿಕೆ ಹಾಕಿದ್ದಾರೆ.
ನೊಂದ ಬಾಲಕಿ ನಡೆದ ವಿಷಯವನ್ನು ತನ್ನ ಪೋಷಕರ ಬಳಿ ಹೇಳಿದ್ದಾಳೆ. ವಿಷಯ ತಿಳಿದ ಪೋಷಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೋಲೀಸರು ಪ್ರಕರಣ ದಾಖಲಿಕೊಂಡು ತನಿಖೆ ನಡೆಸಿದ್ದಾರೆ. ಅಲ್ಲದೇ, ಅತ್ಯಾಚಾರವೆಸಗಿದ ನಾಲ್ವರಲ್ಲಿ ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.