ಅಮಿತ್ ಷಾ ಚು.ಪ್ರಚಾರ ಸಭೆಗೆ ಅನುಮತಿ ನಿರಾಕರಣೆ: ಹೈಕೋರ್ಟ್ ಮೊರೆ

ನವೆಂಬರ್ 30ರಂದು ಕೋಲ್ಕತ್ತಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚುನಾವಣಾ ಪ್ರಚಾರ...
ಅಮಿತ್ ಷಾ
ಅಮಿತ್ ಷಾ
Updated on: 

ಕೋಲ್ಕತ್ತಾ: ನವೆಂಬರ್ 30ರಂದು ಕೋಲ್ಕತ್ತಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚುನಾವಣಾ ಪ್ರಚಾರ ಸಭೆ ನಡೆಸಲು ಅನುಮತಿ ಕೋರಿ ಬಿಜೆಪಿ ಹೈಕೋರ್ಟ್‌ನ ಮೊರೆ ಹೋಗಿದೆ.

ಅಮಿತ್ ಷಾ ಪ್ರಚಾರ ಸಭೆ ನಡೆಸಲು ನಗರ ಸಭೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಕ್ಟೋರಿಯಾ ಹೌಸ್‌ನಲ್ಲಿ ಪ್ರಚಾರ ಸಭೆಗೆ ಬಿಜೆಪಿ ಅನುಮತಿ ಕೋರಿತ್ತು. ವಾಹನ ದಟ್ಟಣೆ ಮತ್ತು ಕಾನೂನು ಸುವ್ಯವಸ್ಥೆಯ ಕಾರಣ ಹೇಳಿ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಜುಲೈನಲ್ಲೆ ಅನುಮತಿಗೆ ಕೋರಿದ್ದ ಬಿಜೆಪಿ, ನವೆಂಬರ್ 30 ಭಾನುವಾರವಾಗಿದ್ದು ಪೊಲೀಸರು ನೀಡಿರುವ ಕಾರಣ ಸಮರ್ಪಕವಾಗಿಲ್ಲ ಎಂದು, ಕೋಲ್ಕತ್ತಾ ಉಚ್ಛ ನ್ಯಾಯಾಲಯದಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿತ್ತು. ಆದರೆ ನ್ಯಾಯಾಲಯ ನಗರ ಸಭೆ ಮತ್ತು ಪ್ರಾದೇಶಿಕ ಅಗ್ನಿ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆಯುವಂತೆ ಸೂಚಿಸಿತ್ತು.

ಇದೇ ಕಾರಣಗಳಿಂದಾಗಿ ಕೊಲ್ಕತಾ ನಗರ ಸಭೆ ಅನುಮತಿ ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅನುಮತಿ ನೀಡುವಂತೆ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com