20 ಪಕ್ಷಗಳಿಗೆ ಚುನಾವಣಾ ಆಯೋಗ ನೋಟಿಸ್

ನಿಗದಿತ ದಿನದೊಳಗೆ ಚುನಾವಣೆಯಲ್ಲಿ ನೀವು...
ಕೇಂದ್ರ ಚುನಾವಣಾ ಆಯೋಗ
ಕೇಂದ್ರ ಚುನಾವಣಾ ಆಯೋಗ
Updated on: 

ನವದೆಹಲಿ: ನಿಗದಿತ ದಿನದೊಳಗೆ ಚುನಾವಣೆಯಲ್ಲಿ ನೀವು ಮಾಡಿದ ಖರ್ಚಿನ ವಿವರ ಕೊಡಿ. ಇಲ್ಲದಿದ್ದರೆ ನಿಮಗೆ ನೀಡಲಾಗಿರುವ ಮಾನ್ಯತೆ ರದ್ದು ಮಾಡಬೇಕಾಗುತ್ತದೆ ಹೀಗೆಂದು ಕೇಂದ್ರ ಚುನಾವಣಾ ಆಯೋಗ 20 ಪಕ್ಷಗಳಿಗೆ ಎಚ್ಚರಿಕೆ ನೀಡಿ, ನೋಟಿಸ್ ಜಾರಿ ಮಾಡಿದೆ.

ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಆಮ್ ಆದ್ಮ ಪಕ್ಷಗಳು ನೋಟಿಸ್ ಪಡೆದುಕೊಂಡ ಪ್ರಮುಖ ಪಕ್ಷಗಳು.

ಇತ್ತೀಚೆಗೆ ಮುಕ್ತಾಯವಾದ ವಿಧಾನಸಭೆ ಮತ್ತು ಕಳೆದ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷಗಳು ಲೆಕ್ಕಪತ್ರ ನೀಡುವಂತೆ ಆಯೋಗ ಸೂಚನೆ ನೀಡಿತ್ತು. ಆದರೆ ಈ ಬಗ್ಗೆ ಯಾವುದೇ ಪಕ್ಷಗಳು ಪ್ರತಿಕ್ರಿಯೆ ನೀಡಿಲ್ಲ. 15 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಮಾನ್ಯತೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com