ದುರಂತಕ್ಕೀಡಾದ ಪಾಕ್ ವಾಯುಸೇನಾ ವಿಮಾನ

ಪಾಕಿಸ್ತಾನ ವಾಯು ಪಡೆಯ ತರಭೇತಿ ವಿಮಾನವೊಂದು ಪಂಜಾಬ್‌ನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನ ವಾಯು ಪಡೆಯ ತರಭೇತಿ ವಿಮಾನವೊಂದು ಪಂಜಾಬ್‌ನ ಪ್ರಾಂತ್ಯದಲ್ಲಿ ದುರಂತಕ್ಕೀಡಾಗಿದ್ದು ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ವಾಯುಸೇನಾ ಪಡೆಯು ತರಭೇತಿಗಾಗಿ ಪ್ರತಿನಿತ್ಯ ಮೀರಜ್ 5 ಎಂಬ ವಿಮಾನವನ್ನು ಕೊಂಡೊಯ್ಯುತ್ತಿದ್ದರು. ಹೀಗಾಗಿ ಇಂದೂ ಸಹ ಇದೇ ವಿಮಾನವನ್ನು ಜಂಗ್ ಜಿಲ್ಲೆಯ ಅಥರಾ ಪ್ರದೇಶಕ್ಕೆ ಕೊಂಡೊಯ್ಯುವಾಗ ತಾಂತ್ರಿಕ ಅಡಚಣೆಯಿಂದಾಗಿ ದುರಂತಕ್ಕೀಡಾಯಿತು ಎಂದು ವಾಯುಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಪೈಲೆಟ್‌ನಿಂದಾಗಿ ವಿಮಾನದ ಒಳಗಿದ್ದವರು ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಆದರೆ ವಿಮಾನ ನೆಲಕ್ಕೆ ಅಪ್ಪಳಿಸಿದ್ದರಿಂದ ನಾಗರೀಕರ ಆಸ್ತಿ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ವಾಯುಸೇನಾ ವಿಚಾರ ಮಂಡಳಿಯು ಘಟನೆ ಕುರಿತು ತನಿಖೆ ನಡೆಸಲು ಇಸ್ಲಾಮಾಬಾದ್‌ನ ವಾಯು ಪ್ರಧಾನ ಕಚೇರಿಗೆ ಆದೇಶಿಸಿದ್ದು, ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.                   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com