ಕಿರುತೆರೆ ನಟಿ ನಿಗೂಢ ಸಾವು

ಬಂಗಾಳದ ಕಿರುತೆರೆ ನಟಿ ದಿಶಾ ಗಂಗೂಲಿ ಅವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ...
ದಿಶಾ ಗಂಗೂಲಿ
ದಿಶಾ ಗಂಗೂಲಿ
Updated on: 

ಕೋಲ್ಕತಾ: ಬಂಗಾಳದ ಕಿರುತೆರೆ ನಟಿ ದಿಶಾ ಗಂಗೂಲಿ ಅವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ದಕ್ಷಿಣ ಕೋಲಕಾತಾದ ಬೆಹಲಾದಡಿಯಲ್ಲಿ ಬರುವ ಪರ್ಣಶ್ರೀ ಪ್ರದೇಶದಲ್ಲಿರುವ ನಿವಾಸದಲ್ಲಿ ದಿಶಾ ದೇಹ ಫ್ಯಾನ್ ನಲ್ಲಿ ನೇತು ಹಾಕಿಕೊಂಡ ಸ್ಥಿತಿಯಲ್ಲಿ ಕಂಡಬಂದಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ಹಿಂದಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಸ್ಥಳದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿಲ್ಲ. ಆದರೆ ಪೊಲೀಸರು ಇದು ಆತ್ಮಹತ್ಯೆಯು ಇರಬಹುದು ಎಂದು ಶಂಕಿಸಿದ್ದಾರೆ. 

23 ವರ್ಷದ ದಿಶಾ, ಪ್ರಖ್ಯಾತ ಬಂಗಾಲಿ ಧಾರವಾಹಿಗಳಲ್ಲಿ ಅಭಿನಯಿಸಿದ್ದರು. 'ಕನಕಾಂಜಲಿ' ಮತ್ತು 'ತುಮ್ಹಿ ಅಶ್ಬೆ ಬೋಲೆ' ಆಕೆಗೆ ಹೆಸರು ತಂದು ಕೊಟ್ಟಿದ್ದವು.

ನಿವಾಸದಲ್ಲಿ ಒಂಟಿಯಾಗಿ ದಿಶಾ ಇರುತ್ತಿದ್ದರು. ನೈರೋಬಿಯಲ್ಲಿರುವ ಆಕೆಯ ಪೋಷಕರಿಗೆ ಸುದ್ದಿ ಮುಟ್ಟಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ಆಕೆಯ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋನ್ ಕರೆ ಮಾಡಿದಾಗ ಆಕೆ ಪ್ರತಿಕ್ರಿಯೆಗೆ ಸಿಗದಿದ್ದಾಗ ಸ್ನೇಹಿತ ಆಕೆಯ ನಿವಾಸಕ್ಕೆ ತೆರಳಿ ಪರಿಶೀಲಿಸಿದ್ದಾನೆ. ಈ ವೇಳೆ ಲಾಕ್ ಮಾಡಲ್ಪಟ್ಟಿದ್ದು, ಬಾಗಿಲು ಒಡೆದು ನೋಡಿದಾಗ ಶವ ಫ್ಯಾನ್ ನಲ್ಲಿ ನೇತಾಡುತ್ತಿತ್ತು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com