ತಮಿಳುನಾಡಿನಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಇಸಿಸ್ ಬೆದರಿಕೆ

ತಮಿಳುನಾಡಿನ ಸುಮಾರು 50 ಆರ್ ಎಸ್ ಎಸ್ ನಾಯಕರನ್ನಾ ಶೂಟ್ ಮಾಡುವುದರ ಜೊತೆಗೆ ಮುಂದಿನ ವಾರ ತಮಿಳುನಾಡಿಲ್ಲಿ ಸರಣಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಚೆನ್ನೈ: ತಮಿಳುನಾಡಿನ ಸುಮಾರು 50 ಆರ್ ಎಸ್ ಎಸ್ ನಾಯಕರನ್ನಾ ಶೂಟ್ ಮಾಡುವುದರ ಜೊತೆಗೆ ಮುಂದಿನ ವಾರ ತಮಿಳುನಾಡಿಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಇಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ.

ಚೆನ್ನೈ ನ ಡಿಜಿಪಿ ಕಚೇರಿಗೆ ಹಾಗೂ ಚೈನ್ನೈ ಪ್ರೆಸ್ ಕ್ಲಬ್ ಗೆ ಇಸಿಸ್ ಉಗ್ರರು ಬೆದರಿಕೆ ಪತ್ರ ಕಳುಹಿಸಿದ್ದು, ಕೆಂಪು ಇಂಕಿನಲ್ಲಿ ಬರೆಯಲಾಗಿದ್ದು, ಚೆನ್ನೈನಲ್ಲಿ 50 ಆರ್ ಎಸ್ ಎಸ್ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಆ ನಾಯಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗುವುದು ಹಾಗೂ ಏಪ್ರಿಲ್ 24ರೊಳಗೆ ಮತ್ತೆ ಕೊಯಬಂತ್ತೂರ್ ನಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.

ನಿನ್ನೆ ಪೋಸ್ಟ್ ಮೂಲಕ ಬೆದರಿಕೆ ಪತ್ರ ಬಂದಿದ್ದು, ಪತ್ರದ ಮೇಲೆ ಯಾವುದೇ ಅಂಚೆ ಅಂಟಿಸಲಾಗಿಲ್ಲ. ಈ ಪತ್ರವನ್ನು ಸಿಪಿಸಿ ಜಂಟಿ ಕಾರ್ಯದರ್ಶಿ ಅವರಿಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1998 ಫೆಬ್ರವರಿ 14ರಂದು ಕೊಯಂಬತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 58 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com