ಹಿಂದುತ್ವ ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ: ನರೇಂದ್ರ ಮೋದಿ

ಹಿಂದುತ್ವ ಎಂಬುದು ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ...
ಹಿಂದುತ್ವ ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ: ನರೇಂದ್ರ ಮೋದಿ
ಹಿಂದುತ್ವ ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ: ನರೇಂದ್ರ ಮೋದಿ
Updated on: 

ವ್ಯಾಂಕೋವರ್: ಹಿಂದುತ್ವ ಎಂಬುದು ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ತ್ರಿರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈಗಾಗಲೇ ಕೆನಡಾದ ವ್ಯಾಂಕೋವರ್ ಗೆ ಆಗಮಿಸಿದ್ದು, ಅಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಂತರ ಕೆನಡಾದಲ್ಲಿ ನೆಲೆಸಿರುವ ಅಲ್ಲಿನ ಭಾರತೀಯರಿಗೆ ಅಭಿನಂದಿಸಿ ಮಾತನಾಡಿರುವ ಅವರು, ಹಿಂದುತ್ವ ಎಂಬುದು ಕೇವಲ ಧರ್ಮ ಅಲ್ಲ ಅದೊಂದು ಜೀವನದ ಹಾದಿ ಎಂಬ ಸುಪ್ರೀಂಕೋರ್ಟ್ ಹೇಳಿಕೆಯನ್ನು ನಾನು ನಂಬಿದ್ದೇನೆ. ಹಿಂದೂಗಳು ವೈಜ್ಞಾನಿಕವಾಗಿ ಪ್ರಕೃತಿಯಿಂದ ಲಾಭ ಪಡೆಯುವ ಸಲುವಾಗಿ ಕೆಲಸ ಮಾಡುತ್ತಾರೆ. ಜೀವನದಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳ ಕುರಿತಂತೆ ಇದರಿಂದಲೇ ನಾವು ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ, ಯೋಗದ ಕುರಿತು ಭಾಷಣ ಮಾಡಿರುವ ಮೋದಿ, ಯೋಗದ ಕುರಿತಂತೆ ನಿಮಗೆ ತಿಳಿದಿರುವ ಮಾಹಿತಿಯನ್ನು ಮತ್ತೊಬ್ಬರಿಗೆ ತಿಳಿಸಿ. ಪರಿಪೂರ್ಣ ಜೀವನ ನಡೆಸಲು ಯೋಗ ಅತ್ಯಂತ ಮಹತ್ವದ್ದಾಗಿದೆ. ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿವವನ್ನಾಗಿ ಆಚರಿಸಲಾಗುತ್ತಿದೆ. ಇದೇ ದಿನವನ್ನು ಯೋಗ ದಿನವನ್ನಾಗಿ ಆಚರಿಸುವಂತೆ ಈಗಾಗಲೇ ವಿಶ್ವಸಂಸ್ಥೆಗೆ ಮನವಿ ನೀಡಲಾಗಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕನಿಷ್ಟಾ ಬಾಂಬ್ ದಾಳಿಯಲ್ಲಿ ಮಡಿದವರ ನೆನಪಿಗೆ ನಿರ್ಮಿಸಲಾಗಿರುವ ಏರ್ ಇಂಡಿಯಾ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ನಂತರ ಸಿಖ್ ಗುರುದ್ವಾರಕ್ಕೆ ಭೇಟಿ ನೀಡಿ ಮಾತನಾಡಿರುವ ಅವರು, ಭಾರತ ಸ್ವಾತಂತ್ರ್ಯದಲ್ಲಿ ಸಿಖ್ ಮತ್ತು ಗುರುನಾನಕ್ ಅವರ ಪಾತ್ರ ಅಪಾರವಾದದ್ದು, ಸಿಖ್ ಜನಾಂಗದವರು ತ್ಯಾಗಕ್ಕೆ ಪ್ರತೀಕವಾದವರು ಎಂದು ಹೇಳಿದ್ದಾರೆ.

ಇದರಂತೆ ಮೂರು ದಿನಗಳ ಕೆನಡಾ ಪ್ರವಾಸ ಕೈಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರವಾಸ ಮುಗಿದಿದ್ದು, ಇಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com