ಬಾಮೈದನೊಂದಿಗೆ ಸೇರಿ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿದ ತಂದೆ

ಇತ್ತೀಚಿನ ದಿನಗಳಲ್ಲಿ ತಂದೆ ಮಗಳ ಸಂಬಂಧಕ್ಕೆ ಬೆಲೆಯಿಲ್ಲದಂತಾಗಿದೆ. ಕಾಮುಕ ತಂದೆಯೊಬ್ಬ ಅಪ್ರಾಪ್ತ ಮಗಳ ಮೇಲೆ ಮೂರು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾನೆ...
ಅತ್ಯಾಚಾರ(ಸಾಂದರ್ಭಿಕ ಚಿತ್ರ)
ಅತ್ಯಾಚಾರ(ಸಾಂದರ್ಭಿಕ ಚಿತ್ರ)
Updated on: 

ಗುರ್‌ಗಾಂವ್‌: ಇತ್ತೀಚಿನ ದಿನಗಳಲ್ಲಿ ತಂದೆ ಮಗಳ ಸಂಬಂಧಕ್ಕೆ ಬೆಲೆಯಿಲ್ಲದಂತಾಗಿದೆ. ಕಾಮುಕ ತಂದೆಯೊಬ್ಬ ಅಪ್ರಾಪ್ತ ಮಗಳ ಮೇಲೆ ಮೂರು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾನೆ.

ಶಿಕ್ಷಕನಾಗಿ ಜ್ಞಾನ ಬೋಧನೆ ಮಾಡಬೇಕಾದ ತಂದೆಯೇ ಇಂತ ನೀಚ ಕೃತ್ಯ ಎಸಗಿದ್ದಾನೆ. ಅದು ತಾನೊಬ್ಬನೇ ಅಲ್ಲ ತನ್ನ ಹೆಂಡತಿಯ ತಮ್ಮನೊಂದಿಗೆ ಸೇರಿ ಸ್ವಂತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಬಾಲಕಿ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಮಹಿಳಾ ಮತ್ತು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದು, ಬಳಿಕ ತಂದೆಯ ನೀಚ ಕೃತ್ಯ ಬಯಲಿಗೆ ಬಂದಿದೆ. ಕೂಡಲೇ ವಿಷಯ ತಿಳಿದ ಪೊಲೀಸರು ಬಾಲಕಿಯ ತಂದೆ 44 ವರ್ಷ ಪ್ರಾಯದ ಸರ್ಕಾರಿ ಶಾಲಾ ಶಿಕ್ಷಕ  ಹಾಗೂ ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಸೋದರಮಾವನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

ಮತ್ತೊಂದು ಆಘಾತಕಾರಿ ವಿಷಯವೆಂದರೆ ಬಾಲಕಿ ತನ್ನ ಮೇಲಾಗುತ್ತಿರುವ ಅವಮಾನೀಯ ಕೃತ್ಯವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದರು. ಆ ಮಹಾ ತಾಯಿ ಮಗಳನ್ನೇ ಗದರಿಸಿ ಯಾರಿಗೂ ಹೇಳಬೇಡ ಎಂದು ಬಾಯಿ ಮುಚ್ಚಿಸಿದ್ದಾಳೆ ಎಂದು ನೊಂದ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com