
ನವದೆಹಲಿ: ವಿರೋಧದ ನಡುವೆಯೂ ಪಾಕಿಸ್ತಾನದಲ್ಲಿ ಆರ್ಥಿಕ ಕಾರಿಡಾರ್ ಒಪ್ಪಂದ ಮಾಡಿಕೊಂಡ ಚೀನಾಗೆ ಭಾರತ ಪ್ರತ್ಯುತ್ತರ ನೀಡಿದೆ.
ಚೀನಾವು ಪಾಕ್‍ನೊಂದಿಗೆ ಒಪ್ಪಂದ ಮಾಡಿಕೊಂಡರೆ ಅದಕ್ಕೆ ಪ್ರತಿಯಾಗಿ ಇರಾನ್ ಜತೆ ಒಪ್ಪಂದ ಮಾಡಿಕೊಳ್ಳಲು ಭಾರತ ಮುಂದಾಗಿದೆ. ಸದ್ಯದಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇರಾನ್ ಜತೆಗಿನ ಬಂದರು ನಿರ್ಮಾಣ ಒಪ್ಪಂದಕ್ಕೆ ಟೆಹರಾನ್‍ನಲ್ಲಿ ಸಹಿ ಹಾಕಲಿದ್ದಾರೆ.
ಚೀನಾ ಅಭಿವೃದ್ದಿಪಡಿಸಿರುವ ಗ್ವಾದಾರ್ ಬಂದರಿನಿಂದ ಕೇವಲ 72 ಕಿ.ಮೀ. ದೂರದ ಚಬಾಹರ್‍ನಲ್ಲಿ ಇರಾನ್ ಜತೆಗೂಡಿ ಭಾರತ ಬಂದರು ನಿರ್ಮಿಸಲಿದೆ. ಇದರಿಂದ ಅಫ್ಥಾನಿಸ್ತಾ ಮೂಲಕ ಭಾರತಕ್ಕೆ ಸಂಪರ್ಕ ಸಾಧಿಸಲು ಸಾಧ್ಯ. ಚಬಾಹರ್‍ನಿಂದ ಇರಾನ್‍ನ ಮಿಲಕ್‍ಗೆ ರಸ್ತೆ, ರೈಲು ಸಂಪರ್ಕ ಕಲ್ಪಿಸಿ, ಅದನ್ನು ಆಫ್ಘಾನ್ ನಲ್ಲಿರುವ 223 ಕಿ.ಮೀ. ಝರಾಂಜ್-ದೇಲಾರಾಂ ರಸ್ತೆಗೆ ಲಿಂಕ್ ಮಾಡುವುದು ಭಾರತದ ಉದ್ದೇಶ. ಹೀಗೆ ಮಾಡಿದರೆ ಆಫ್ಥಾನ್‍ಗೆ ಸುಲಭವಾಗಿ ಪರಿಹಾರ, ನೆರವು ಒದಗಿಸಬಹುದು. ಜತೆಗೆ ಚಬಾಹರ್ ಬಂದರಿನ ಮೂಲಕ ಭಾರತದ ಸರಕುಗಳಿಗೆ ಮಧ್ಯ ಏಷ್ಯಾದಲ್ಲಿ ಮಾರುಕಟ್ಟೆ ಸಿಗುವಂತೆ ಮಾಡಬಹುದು.
ಭಾರತದ ಪ್ಲ್ಯಾನ್?
Advertisement