

ಕುಪ್ವಾರ: ಉತ್ತರ ಕಾಶ್ಮೀರ ಕುಪ್ವಾರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ನಾಲ್ವರು ಕೀಚಕರಿಗೆ ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
2007ರಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿ ಯನ್ನು ನಾಲ್ವರು ಅಪಹರಿಸಿ ಅತ್ಯಾಚಾರ ಎಸಗಿದ್ದರು. ನಂತರ ಅವರು ಗಂಟಲು ಸೀಳಿ ಹತ್ಯೆಮಾಡಿದ್ದರು.
ಇದು ಬಹಳ ಅಪರೂಪದ ಅಪರಾಧವಾಗಿರುವುದರಿಂದ ಅತ್ಯಾಚಾರಿಗಳಿಗೆ ಕ್ಷಮೆಯಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.