

ನವದೆಹಲಿ: ರಾಜಸ್ಥಾನದ ರೈತ ಗಜೇಂದ್ರ ಸಿಂಗ್ ಸಾವಿಗೆ ಆಮ್ ಆದ್ಮಿ ಪಕ್ಷದ ನಾಯಕರ ಪ್ರಚೋದನಾತ್ಮಕ ಭಾಷಣ ಮತ್ತು ಆಪ್ ಕಾರ್ಯಕರ್ತರ ಪ್ರಚೋದನೆ ಕಾರಣ ಎಂದು ದೆಹಲಿ ಪೊಲೀಸರು ಬುಧವಾರ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.
ದೆಹಲಿ ಪೊಲೀಸರ ವರದಿಯ ಪ್ರಕಾರ, ಆಪ್ ನಾಯಕರು ಪ್ರಚೋದನಾತ್ಮಕ ಭಾಷಣ ಮಾಡುತ್ತಿದ್ದರು ಮತ್ತು ಈ ವೇಳೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಗಜೇಂದ್ರ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದರು.
ಪ್ರತಿಭಟನಾ ರ್ಯಾಲಿಯನ್ನು ಜಂತರ್ ಮಂತರ್‌ನಿಂದ ರಾಮ್‌ಲಿಲಾ ಮೈದಾನಕ್ಕೆ ಬದಲಾಯಿಸಬೇಕು ಎಂಬ ಪೊಲೀಸರ ಮನವಿಯನ್ನು ಎಎಪಿ ತಿರಸ್ಕರಿಸಿತ್ತು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಏಪ್ರಿಲ್ 22 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಭೂಸ್ವಾಧೀನ ಮಸೂದೆ ವಿರೋಧಿಸಿ ಆಪ್ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ರೈತ ಗಜೇಂದ್ರ ಸಿಂಗ್ ಆತ್ನಹತ್ಯಗೆ ಶರಣಾಗಿದ್ದರು.