ಇಸ್ಲಾಮಿಕ್ ಸ್ಟೇಟ್ ಉಗ್ರರು(ಸಂಗ್ರಹ ಚಿತ್ರ)
ಇಸ್ಲಾಮಿಕ್ ಸ್ಟೇಟ್ ಉಗ್ರರು(ಸಂಗ್ರಹ ಚಿತ್ರ)

ಗಡಾಫಿ- ಐಎಸ್ ಉಗ್ರರ ಜಟಾಪಟಿಯಿಂದ ಇಬ್ಬರು ಭಾರತೀಯರ ಬಿಡುಗಡೆ ವಿಳಂಬ

ಮುವಮ್ಮರ್ ಗಡಾಫಿ ಬಣ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಬಣದ ನಡುವೆ ನಡೆಯುತ್ತಿರುವ ಕಾಳಗದಿಂದಾಗಿ ಇಸೀಸ್ ಉಗ್ರರ ವಶದಲ್ಲಿರುವ ಭಾರತೀಯರ ಬಿಡುಗಡೆ ವಿಳಂಬವಾಗುತ್ತಿದೆ.

ನವದೆಹಲಿ: ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿ ಬಣ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಬಣದ ನಡುವೆ ನಡೆಯುತ್ತಿರುವ ಕಾಳಗದಿಂದಾಗಿ ಇಸೀಸ್ ಉಗ್ರರ ವಶದಲ್ಲಿರುವ ಭಾರತೀಯರ ಬಿಡುಗಡೆ ವಿಳಂಬವಾಗುತ್ತಿದೆ.

ಇಸೀಸ್ ವಶದಲ್ಲಿದ್ದ ಭಾರತದ ಇನ್ನಿಬ್ಬರು ನಾಗರಿಕರು ಆ.4 ರಂದು  ಭಾರತಕ್ಕೆ ವಾಪಸ್ ಮರಳಿದ್ದಾರೆ. ಇಸೀಸ್ ವಶದಲ್ಲೇ ಇರುವ ಇನ್ನಿಬ್ಬರು ಭಾರತೀಯರ ಕುಟುಂಬದವರಿಗೆ ಬಿಡುಗದೆಗೊಂಡಿರುವ ಭಾರತೀಯರು ಧೈರ್ಯ ತುಂಬಿದ್ದು, ಅವರೂ ಶೀಘ್ರವೇ ಬಿಡುಗಡೆಯಾಗಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಗಡಾಫಿ ಪುತ್ರ ಸೈಫ್-ಅಲ್- ಗಡಾಫಿಗೆ ಮರಣ ದಂಡನೆ ವಿಧಿಸಿದ ನಂತರ ಇಸೀಸ್ ಉಗ್ರ ಸಂಘಟನೆ ಹಾಗೂ ಗಡಾಫಿ ಬಣದ ನಡುವೆ ಕಿತ್ತಾಟ ಆರಂಭವಾಗಿದ್ದು ಕಳೆದ ಎರಡು ದಿನಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಮಾಂಡರ್ ಗಳ ಆದ್ಯತೆ ಬದಲಾಗಿವೆ. ಈ ಹಿನ್ನೆಲೆಯಲ್ಲಿ ಉಳಿದ ಇಬ್ಬರು ಭಾರತೀಯರ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಇನ್ನಿಬ್ಬರನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಇಸೀಸ್ ಉಗ್ರರು ಹೇಳಿದ್ದರು ಎಂದು ಅಪಹರಣಕ್ಕೊಳಗಾಗಿದ್ದ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com